For Quick Alerts
  ALLOW NOTIFICATIONS  
  For Daily Alerts

  ನೋ ಕನ್ನಡ.. ನೋ ಬ್ಯುಸಿಸೆಸ್: ಕರ್ನಾಟಕದಲ್ಲೂ 'ಲೈಗರ್‌'ಗೆ ಬಾಯ್‌ಕಾಟ್ ಬಿಸಿ!

  |

  'ಬಾಯ್‌ಕಾಟ್' ಅನ್ನೋದು ಬಾಲಿವುಡ್ ಮಂದಿಗೆ ಹೊಸದೇನೂ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಂದು ಸಿನಿಮಾವನ್ನೂ ಬಾಯ್‌ಕಾಟ್ ಮಾಡೋಕೆ ಇಂತಿದ್ದಾರೆ. ಅದರಲ್ಲಿ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಸೇರಿಕೊಂಡಿದೆ. ಅದುವೇ 'ಲೈಗರ್'.

  'ಲೈಗರ್' ವಿಜಯ್ ದೇವರಕೊಂಡ ಅಭಿನಯದ ಮೊದಲ ಪ್ಯಾನ್ ಇಂಡಿಯಾ. ಆ ಕಾರಣಕ್ಕೆ ಇಡೀ ತಂಡ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಅದೇ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ 'ಬಾಯ್‌ಕಾಟ್ ಲೈಗರ್' ಅಂತ ನೆಟ್ಟಿಗರು ಅಭಿನಯ ಶುರು ಮಾಡಿದ್ದಾರೆ. ಇದು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿದೆ. ಬಿಡುಗಡೆಗೆ ಇನ್ನೂ ಕೆಲವೇ ಕ್ಷಣಗಳು ಬಾಕಿ ಉಳಿದಿರುವಂತೆ ಈ 'ಬಾಯ್‌ಕಾಟ್' ಸಂಗತಿ ಸಂಕಷ್ಟ ತಂದೊಡ್ಡಿದೆ.

  ಬಿಡುಗಡೆಗೂ ಮುನ್ನ ವಿಜಯ್ ದೇವರಕೊಂಡ 'ಲೈಗರ್' ದಾಖಲೆ ಬ್ಯುಸಿನೆಸ್: ಕರ್ನಾಟಕದಲ್ಲೆಷ್ಟು?ಬಿಡುಗಡೆಗೂ ಮುನ್ನ ವಿಜಯ್ ದೇವರಕೊಂಡ 'ಲೈಗರ್' ದಾಖಲೆ ಬ್ಯುಸಿನೆಸ್: ಕರ್ನಾಟಕದಲ್ಲೆಷ್ಟು?

  ಇದು ಉತ್ತರ ಭಾರತದಲ್ಲಿ ಅಷ್ಟೇ ಅಲ್ಲ. ದಕ್ಷಿಣ ಭಾರತದಲ್ಲೂ ಅದೇ ಕಥೆ. ಕರ್ನಾಟಕದಲ್ಲೂ ಕೂಡ 'ಬಾಯ್‌ಕಾಟ್ ಲೈಗರ್' ಅಭಿಯಾನ ಶುರು ಮಾಡಿದ್ದಾರೆ. ಅದಕ್ಕೂ ಕರ್ನಾಟಕದಲ್ಲಿ ಯಾಕೆ ಬಾಯ್‌ಕಾಟ್ ಮಾಡ್ಬೇಕು ಅಂತಿರೋದು ಯಾಕೆ? ವಿಜಯ್ ದೇವರಕೊಂಡ ಸಿನಿಮಾ ಮೇಲೆ ಆ ಮುನಿಸು ಯಾಕೆ? ಅನ್ನೋದನ್ನು ತಿಳಿಯೋಕೆ ಮುಂದೆ ಓದಿ.

  ಉತ್ತರ ಭಾರತದಲ್ಲಿ 'ಲೈಗರ್ ಬಾಯ್‌ಕಾಟ್'

  ಉತ್ತರ ಭಾರತದಲ್ಲಿ 'ಲೈಗರ್ ಬಾಯ್‌ಕಾಟ್'

  ಕಳೆದೊಂದು ವಾರದಿಂದ ಟಾಲಿವುಡ್‌ ನಟನ ಪ್ಯಾನ್‌ ಇಂಡಿಯಾ ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೊತೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಾಯ್‌ಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಯಾನ ಶುರುವಾಗಿದೆ. ಇದು ವಿಜಯ್ ದೇವರಕೊಂಡ ಹಾಗೂ ತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈಗ ಈ ಅಭಿಯಾನ ಕರ್ನಾಟಕದಲ್ಲೂ ಶುರುವಾಗಿದೆ.

  'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?

  ಕರ್ನಾಟಕದಲ್ಲಿ ಬಾಯ್‌ಕಾಟ್‌ ಲೈಗರ್‌ಗ ಏನು ಕಾರಣ?

  ಕರ್ನಾಟಕದಲ್ಲಿ ಬಾಯ್‌ಕಾಟ್‌ ಲೈಗರ್‌ಗ ಏನು ಕಾರಣ?

  'ಲೈಗರ್' ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದೆ. ಆಗಲೇ ಈ 'ಲೈಗರ್' ಸಿನಿಮಾವನ್ನು ಕರ್ನಾಟಕದಲ್ಲಿ ಬಾಯ್‌ಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. 'ಲೈಗರ್' ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರೂ, ಅದು ಕರ್ನಾಟಕದಲ್ಲಿ ಕೇವಲ 5 ರಿಂದ 6 ಶೋಗಳನ್ನು ಮಾತ್ರ ನೀಡಲಾಗಿದೆ. ಉಳಿದ ಬಹುತೇಕ ಶೋಗಳು ತೆಲುಗಿನಲ್ಲಿ ಇವೆ. ಕನ್ನಡದಲ್ಲಿ ಡಬ್ ಮಾಡಿದ ಸಿನಿಮಾವನ್ನು ಬೇರೆ ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವುದಕ್ಕೆ 'ನೋ ಕನ್ನಡ.. ನೋ ಬ್ಯುಸಿನೆಸ್' ಅಂತ ಅಭಿಯಾನ ಶುರು ಮಾಡುತ್ತಿದ್ದಾರೆ.

  ಕನ್ನಡದ ನಿರ್ಮಾಪಕರೇ ವಿತರಕರು

  ಕನ್ನಡದ ನಿರ್ಮಾಪಕರೇ ವಿತರಕರು

  ಅಂದ್ಹಾಗೆ 'ಲೈಗರ್' ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಿರುವವರು ಕನ್ನಡದ ನಿರ್ಮಾಪಕರುಗಳೇ. ಈಗಾಗಲೇ 'ಅಯೋಗ್ಯ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಚಂದ್ರಶೇಖರ್ ಹಾಗೂ ಧ್ರುವ ಸರ್ಜಾ ನಟಿಸಿದ 'ಪೊಗರು' ಸಿನಿಮಾದ ನಿರ್ಮಾಪಕ ಗಂಗಾಧರ್ ಇಬ್ಬರೂ 'ಲೈಗರ್' ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದಾರೆ. ಆದರೂ, ಕರ್ನಾಟಕದಲ್ಲಿ 'ಲೈಗರ್' ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ ಅನ್ನೋ ಕರ್ನಾಟಕದಲ್ಲಿ ಬಾಯ್‌ಕಾಟ್ ಮಾಡ್ಬೇಕು ಅನ್ನುತ್ತಿರೋದಕ್ಕೆ ಪ್ರಮುಖ ಕಾರಣ.

  ಹೇಗಿದೆ 'ಲೈಗರ್' ಕ್ರೇಜ್?

  ಹೇಗಿದೆ 'ಲೈಗರ್' ಕ್ರೇಜ್?

  ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನೇಷನ್‌ ಮೇಲೆ ಎಲ್ಲೆಡ ನಿರೀಕ್ಷೆ ಹೆಚ್ಚಿದೆ. ವಿಜಯ್ ದೇವರಕೊಂಡ ಪ್ರಚಾರಕ್ಕೆ ಹೋದಲ್ಲೆಲ್ಲಾ ಆಡಿಯನ್ಸ್ ರೆಸ್ಪಾನ್ಸ್ ಅದ್ಭುತವಾಗಿಯೇ ಇದೆ. ಹೀಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿರೋದ್ರಿಂದ ಸಹಜವಾಗಿಯೇ ಆತಂಕವಿದೆ. 'ಲಾಲ್ ಸಿಂಗ್ ಚಡ್ಡ' ,'ರಕ್ಷಾ ಬಂಧನ್' ನಂತಯೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡದೇ ಹೋದರೇ ಅನ್ನೋ ಭಯವಿದೆ. ನಾಳೆ (ಆಗಸ್ಟ್ 25) 'ಲೈಗರ್' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ.

  Recommended Video

  ಅಣ್ಣನ ಜೊತೆಗೆ ಯುವರಾಜಕುಮಾರ್ ಲಕ್ಕಿಮ್ಯಾನ್ ಇವೆಂಟ್ ನಲ್ಲಿ | Yuva Rajkumar | Luckyman
  English summary
  Boycott Liger In Karnataka: No Kannada No Business Says Netizens, Know More.
  Wednesday, August 24, 2022, 17:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X