Boycott RRR: ಕರ್ನಾಟಕದಲ್ಲಿ 'RRR' ಬಹಿಷ್ಕಾರ, ಚಿತ್ರತಂಡದ ನಡೆಗೆ ಭಾರಿ ಖಂಡನೆ!

ಭಾರತದ ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ಚಿತ್ರ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ದಿನ ಕಳೆದರೆ 'ಆರ್‌ಆರ್‌ಆರ್' ಚಿತ್ರಮಂದಿರ ತೆರೆಗೆ ಅಪ್ಪಳಿಸಲಿದೆ. ಮಾರ್ಚ್ 25ಕ್ಕೆ 'ಆರ್‌ಆರ್‌ಆರ್' ಚಿತ್ರ ರಿಲೀಸ್ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಕನ್ನಡದಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ದೇಶಾದ್ಯಂತ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. 'RRR' ಕನ್ನಡದಲ್ಲೂ ಕೂಡ ತೆರೆಗೆ ಬರುತ್ತಿದೆ ಎನ್ನುವುದು ಕನ್ನಡಿಗರಿಗೆ ಖುಷಿಯ ವಿಚಾರ ಆಗಿತ್ತು. ಕನ್ನಡ ಭಾಷೆಯಲ್ಲೇ 'RRR' ಚಿತ್ರವನ್ನು ನೋಡಬಹುದಲ್ಲಾ ಎಂದು ಕನ್ನಡಿಗರು ಸಂತಸಗೊಂಡಿದ್ದರು. ಆದರೆ ಈಗ ಕನ್ನಡಿಗರು 'ಆರ್‌ಆರ್‌ಆರ್' ಚಿತ್ರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಪ್ಯಾನ್ ಇಂಡಿಯಾ ಹೆಸರಲ್ಲಿ, ಸಿನಿಮಾ ತಂಡ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ಬಾಯ್‌ಕಾಟ್ 'ಆರ್‌ಆರ್‌ಆರ್' ಎಂದು ಅಭಿಯಾನ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ 'ಆರ್‌ಆರ್‌ಆರ್' ಚಿತ್ರ ರಿಲೀಸ್ ಬೇಡ ಎಂದು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಅದ್ಯಾಕೆ ಎನ್ನುವುದನ್ನು ಮುಂದೆ ಓದಿ...

ಕರುನಾಡಲ್ಲಿ 'ಬಾಯ್‌ಕಾಟ್ RRR'!

ಕರುನಾಡಲ್ಲಿ 'ಬಾಯ್‌ಕಾಟ್ RRR'!

'ಆರ್‌ಆರ್‌ಆರ್' ಚಿತ್ರದ ರಿಲೀಸ್ ಹತ್ತಿರ ಆಗಿದೆ. ಇದೇ ಬೆನ್ನಲ್ಲಿ ಕರ್ನಾಟಕದಲ್ಲಿ 'ಆರ್‌ಆರ್‌ಆರ್' ಸಿಕ್ಕಾಪಟ್ಟೆ ಜೋರಾಗಿ ಸದ್ದು ಮಾಡುತ್ತಾ ಇದೆ. ಅದಕ್ಕೆ ಕಾರಣ ಚಿತ್ರದ ರಿಲೀಸ್ ಅಲ್ಲ. ಕರ್ನಾಟಕದಲ್ಲಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ ಎನ್ನುವುದು. ಹಲವು ಕನ್ನಡ ಪರ ಸಂಘಟನೆಗಳು, ಕನ್ನಡಿಗರು 'ಆರ್‌ಆರ್‌ಆರ್' ಚಿತ್ರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'ಬಾಯ್‌ಕಾಟ್ ಆರ್‌ಆರ್‌ಆರ್' ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ.

ಕರ್ನಾಟಕದಲ್ಲೇ 'RRR' ಕನ್ನಡ ಅವತರಣಿಗೆ ರಿಲೀಸ್ ಇಲ್ಲ!

'RRR' ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ. ವಿಪರ್ಯಾಸ ಎಂದರೆ ಕನ್ನಡ ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಯಾವುದೇ ಶೂಗಳು ಕೂಡ ಇಲ್ಲ. ಕನ್ನಡ ಅವತರಣಿಕೆಯಲ್ಲಿ 'ಆರ್‌ಆರ್‌ಆರ್' ಚಿತ್ರದ ಟಿಕೆಟ್ ಬುಕ್ ಮಾಡಲು ಹೋದವರಿಗೆ ಕನ್ನಡದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವೇ ಇಲ್ಲ. ಕರ್ನಾಟಕದಲ್ಲಿ ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ನೋಡಬಹುದು. ಆದರೆ ಕನ್ನಡದಲ್ಲಿ ಸಿನಿಮಾ ನೋಡಲು ಅವಕಾಶ ಇಲ್ಲದಂತಾಗಿದೆ.

ಪ್ಯಾನ್ ಇಂಡಿಯಾ ಹೆಸರಲ್ಲಿ 'RRR' ಮಹಾಮೋಸ!

ಇದೇ ಕಾರಣಕ್ಕೆ ಕನ್ನಡಿಗರು 'ಆರ್‌ಆರ್‌ಆರ್' ಚಿತ್ರದ ವಿರುದ್ಧ ಗರಂ ಆಗಿದ್ದಾರೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಕನ್ನಡಿಗರಿಗೆ ಮಾತ್ರ ಚಿತ್ರತಂಡ ಮಹಾ ಮೋಸ ಮಾಡುತ್ತಿದೆ ಎಂದು ಗುಡುಗುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ 'ಬಾಯ್‌ಕಾಟ್ ಆರ್‌ಆರ್‌ಆರ್' ಅಭಿಯಾನ ಶುರುವಾಗಿದೆ. ಸಾಕಷ್ಟು ಕನ್ನಡಿಗರು ಇದಕ್ಕೆ ಬೆಂಬಲ ನೀಡಿ, ಚಿತ್ರತಂಡದ ನಡೆಯನ್ನು ಖಂಡಿಸುತ್ತಿದ್ದಾರೆ. ಈಗಲಾದರೂ ಸಿನಿಮಾ ತಂಡ ಎಚ್ಚೆತ್ತುಕೊಂಡು, ಕನ್ನಡ ಅವತರಣಿಕೆಯಲ್ಲಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡುತ್ತಾ ನೋಡಬೇಕು.

ಬಾಹುಬಲಿ ಚಿತ್ರ ರಿಲೀಸ್ ಸಮಯದಲ್ಲೂ ಹೀಗೆ ಆಗಿತ್ತು!

ಬಾಹುಬಲಿ ಚಿತ್ರ ರಿಲೀಸ್ ಸಮಯದಲ್ಲೂ ಹೀಗೆ ಆಗಿತ್ತು!

ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಇದೇ ಮೊದಲೇನಲ್ಲ. ಈ ಹಿಂದೆ 'ಬಾಹುಬಲಿ' ಸಿನಿಮಾ ರಿಲೀಸ್ ಆಗುವಾಗಲು ಕೂಡ ಹೀಗೆ ಆಗಿತ್ತು. ಆಗಲೂ ಕೂಡ ಕನ್ನಡ ಪರ ಸಂಘಟನೆಗಳು ಸಿನಿಮಾದ ವಿರುದ್ಧ ಹೋರಾಟ ಮಾಡಿದ್ದವು. ಈ ಚಿತ್ರವನ್ನು ರಿಲೀಸ್ ಮಾಡದಂತೆ ಪ್ರತಭಟಿಸಿದ್ದವು. ಆದರೆ ಆಗಲೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ 'ಆರ್‌ಆರ್‌ಆರ್' ಏನು ಮಾಡುತ್ತೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

More from Filmibeat

English summary
Boycott RRR in karnataka Is Trending In Karnataka Because RRR Kannada Version Is Not Available In Cinemas,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X