For Quick Alerts
  ALLOW NOTIFICATIONS  
  For Daily Alerts

  ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಬ್ರಹ್ಮಾನಂದಂ ಮತ್ತು ಸಾಧುಕೋಕಿಲಾ

  |

  ಡಿಸೆಂಬರ್ 5 ರಂದು ಕರ್ನಾಟಕದಲ್ಲಿ ಉಪಚುನಾವಣೆ ನಡೆಯಲಿದೆ. ಅನರ್ಹರಾಗಿದ್ದ ಹದಿನೈದು ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯುತ್ತಿದ್ದು, ಈಗಾಗಲೇ ಎಲ್ಲ ಕಡೆಯೂ ಅಬ್ಬರದ ಪ್ರಚಾರ ಸಾಗಿದೆ.

  ಇದೀಗ ಬೈ ಎಲೆಕ್ಷನ್ ಗೆ ಸ್ಟಾರ್ ನಟರ ಎಂಟ್ರಿಯಾಗಿದೆ. ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಮತ್ತು ಕನ್ನಡ ಹಾಸ್ಯ ನಟ ಸಾಧುಕೋಕಿಲಾ ಉಪಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.

  ಚಿಕ್ಕಬಳ್ಳಾಪುರ: ಸುಧಾಕರ್ ಪರ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರ

  ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಸುಧಾಕರ್ ಅವರ ಪರ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರ ಮಾಡಿದ್ದಾರೆ. ತೆಲುಗು ಭಾಷಿಗರು ಹೆಚ್ಚಿರುವ ಪ್ರದೇಶಗಳಿಗೆ ಬ್ರಹ್ಮಾನಂದಂ ಅವರನ್ನ ಕರೆಸಿ, ಮತಯಾಚನೆ ಮಾಡಿಸಿದ್ದಾರೆ.

  "ಮಂತ್ರಿಗಿರಿಗಷ್ಟೇ ಈ ಉಪಚುನಾವಣೆ" ಎಂದು ಬಿಜೆಪಿ ಜರಿದ ಡಿ ಕೆ ಸುರೇಶ್

  ಈ ಹಿಂದೆ ಹರ್ಷಿಕಾ ಪೂಣಚ್ಛ, ಹರಿಪ್ರಿಯಾ, ಭುವನ್, ದಿಗಂತ್ ಅವರು ಕೂಡ ಪ್ರಚಾರ ಮಾಡಿದ್ದರು. ಮತ್ತೊಂದೆಡೆ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ಅವರ ಪರ ಕನ್ನಡ ಹಾಸ್ಯ ನಟ ಸಾಧುಕೋಕಿಲಾ ಮತಬೇಟೆ ಮಾಡಿದ್ದಾರೆ.

  ರಿಜ್ವಾನ್ ಅರ್ಷಾದ್ ಅವರು ಅಭಿವೃದ್ದಿಗಾಗಿ ಕೆಲಸ ಮಾಡುವ ವ್ಯಕ್ತಿ. ಅವರ ಹಿಂದೆ ಡಿಕೆ ಶಿವಕುಮಾರ್ ಎಂಬ ಹುಲಿ ಇದೆ. ನಿಮ್ಮ ಮತ ಕಾಂಗ್ರೆಸ್ ಗೆ ಇರಲಿ'' ಎಂದು ಸಾಧು ಕೋಕಿಲಾ ಮತದಾರರಲ್ಲಿ ಮನವಿ ಮಾಡಿದ್ದಾರೆ.

  English summary
  Telugu comedy actor Brahmanandam and Kannada actor Sadhu kokila campaigned in By election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X