»   » 'ಜಾಗ್ವಾರ್' ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ ಕಿಕ್!

'ಜಾಗ್ವಾರ್' ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ ಕಿಕ್!

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಜಾಗ್ವಾರ್' ನಲ್ಲಿ ಟಾಲಿವುಡ್ ನ ಖ್ಯಾತ ನಟ ಬ್ರಹ್ಮಾನಂದಂ ಕಾಮಿಡಿ ಇಂಜೆಕ್ಷನ್ ಕೊಡಲಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಮೈಸೂರಿನಲ್ಲಿ 'ಜಾಗ್ವಾರ್' ಚಿತ್ರದ ಚಿತ್ರೀಕರಣದ ಮೂರನೇ ಶೆಡ್ಯೂಲ್ ಶುರುವಾಗಲಿದ್ದು, ಬ್ರಹ್ಮಾನಂದಂ ಕೂಡ 'ಜಾಗ್ವಾರ್' ಚಿತ್ರತಂಡ ಸೇರಿಕೊಳ್ಳಲಿದ್ದಾರೆ. [ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ]


Brahmanandam in Nikhil Kumar starrer 'Jaguar'

'ಜಾಗ್ವಾರ್' ಚಿತ್ರಕ್ಕಾಗಿ ಬರೋಬ್ಬರಿ ಒಂದು ತಿಂಗಳ ಕಾಲ ಕಾಲ್ ಶೀಟ್ ನೀಡಿದ್ದಾರೆ ಬ್ರಹ್ಮಾನಂದಂ. ನಿಜ ಹೇಳ್ಬೇಕಂದ್ರೆ, 'ಜಾಗ್ವಾರ್' ಚಿತ್ರದ ಕನ್ನಡ ಅವತರಣಿಕೆಯಲ್ಲಿ ಬ್ರಹ್ಮಾನಂದಂ ಕಾಣಿಸಿಕೊಳ್ಳುತ್ತಿಲ್ಲ.


ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ 'ಜಾಗ್ವಾರ್' ರೆಡಿ ಆಗುತ್ತಿರುವುದರಿಂದ ತೆಲುಗು ವರ್ಷನ್ ನಲ್ಲಿ ಮಾತ್ರ ಬ್ರಹ್ಮಾನಂದಂ ಮಿಂಚಲಿದ್ದಾರೆ. [ನಿಖಿಲ್ ಕುಮಾರ್ 'ಜಾಗ್ವಾರ್' ಸ್ಪೆಷಾಲಿಟೀಸ್ ಏನು ಗೊತ್ತಾ?]


ಕನ್ನಡದಲ್ಲಿ ಬ್ರಹ್ಮಾನಂದಂ ಜಾಗಕ್ಕೆ ಸಾಧು ಕೋಕಿಲ ಎಂಟ್ರಿ ಕೊಡಲಿದ್ದಾರೆ. ಅಲ್ಲಿಗೆ, 'ಜಾಗ್ವಾರ್' ನಲ್ಲಿ ನಗೆ ಸುನಾಮಿ ಗ್ಯಾರೆಂಟಿ ಬಿಡಿ.


ಅಂದ್ಹಾಗೆ, 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ತಂದೆ ಪಾತ್ರದಲ್ಲಿ ಜಗಪತಿ ಬಾಬು ಮಿಂಚ್ತಿದ್ರೆ, ನಾಯಕಿ ಪಾತ್ರದಲ್ಲಿ ದೀಪ್ತಿ ಸತಿ ಇದ್ದಾರೆ. ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದಿರುವ ಚಿತ್ರಕಥೆಗೆ ನಿರ್ದೇಶಕ ಮಹದೇವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ ಇಲ್ಲಿದೆ. ನೋಡಿ...


'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

-
-
-
-
-
-
-
-
-
-
-
-
-
-
-
-
-
-
'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

'ಜಾಗ್ವಾರ್' ಚಿತ್ರದ ಫೋಟೋ ಆಲ್ಬಂ

English summary
Popular Telugu Comedian Brahmanandam to play a prominent role in Karnataka Ex CM H.D.Kumaraswamy son Nikhil Kumar's debut movie 'Jaguar' (Telugu Version). In Kannada Version, Sadhu Kokila will be playing comedian. The Film stars Jagapathi Babu, Deepthi Sathi and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada