ಮತ್ತೆ ಕನ್ನಡಕ್ಕೆ ಬಂದ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ
Recommended Video

ಟಾಲಿವುಡ್ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಬ್ರಹ್ಮಾನಂದಂ ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ನಟನೆಯ 'ನಿನ್ನಿಂದಲೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖಾತೆ ತೆರೆದಿದ್ದ ಬ್ರಹ್ಮಾನಂದಂ ಈಗ ಎರಡನೇ ಸಿನಿಮಾ ಮಾಡುತ್ತಿದ್ದಾರೆ.
ಬ್ರಹ್ಮಾನಂದಂ ಸದ್ಯ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉಪೇಂದ್ರ ಅವರ 'ಐ ಲವ್ ಯೂ' ಸಿನಿಮಾದಲ್ಲಿ ಬ್ರಹ್ಮಾನಂದಂ ಅವರ ಕಾಮಿಡಿ ಇರಲಿದೆ. ಅವರ ಭಾಗದ ಚಿತ್ರೀಕರಣ ಬೆಂಗಳೂರಿನ ಹೋಟೆಲ್ ವೊಂದರಲ್ಲಿ ನಡೆಯಲಿದೆ.

'ಐ ಲವ್ ಯೂ' ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣ ಆಗುತ್ತಿದ್ದು, ಇದೇ ಕಾರಣದಿಂದ ಚಿತ್ರಕ್ಕೆ ಬ್ರಹ್ಮಾನಂದಂ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಅಂದಹಾಗೆ, 'ಬ್ರಹ್ಮ' ಸಿನಿಮಾದ ನಂತರ ಮತ್ತೆ ಆರ್.ಚಂದ್ರು ಮತ್ತು ಉಪೇಂದ್ರ ಈ ಚಿತ್ರದ ಮೂಲಕ ಒಂದಾಗಿದ್ದಾರೆ.

ಉಪೇಂದ್ರ ಅವರ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ರಚಿತಾ ಕಾಣಿಸಿಕೊಂಡಿದ್ದಾರಂತೆ.


Click it and Unblock the Notifications











