For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮಾಸ್ತ್ರ ಅವಾಂತರ: ಬೆಂಗಳೂರಿನಲ್ಲಿ ಕನ್ನಡಕ್ಕಿಂತ ತೆಲುಗು ಶೋಗಳೇ ಹೆಚ್ಚು; ಶೋಗಳ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ

  |

  ಬಾಲಿವುಡ್ ಚಿತ್ರರಂಗದ ಕ್ಯೂಟ್ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ಪಾರ್ಟ್ 1 ನಾಳೆ ( ಸೆಪ್ಟೆಂಬರ್ 9 ) ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

  ತನ್ನ ಟ್ರೈಲರ್ ಹಾಗೂ ಹಾಡುಗಳಿಂದ ಸದ್ದು ಮಾಡಿರುವ ಬ್ರಹ್ಮಾಸ್ತ್ರ ಚಿತ್ರದಲ್ಲಿ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಕೂಡ ಅಭಿನಯಿಸಿದ್ದು, ಈ ಚಿತ್ರ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಹೀಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬ್ರಹ್ಮಾಸ್ತ್ರ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಪ್ರಮೋಷನ್ ವಿಷಯವಾಗಿ ಟಾಲಿವುಡ್ ಟಾಪ್ ನಿರ್ದೇಶಕ ರಾಜಮೌಳಿ ಸಾಥ್ ನೀಡಿದ್ದಾರೆ. ಆಯನ್ ಮುಖರ್ಜಿ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.

  ನಟ ದೇವಸ್ಥಾನದ ಒಳಗಡೆಯೇ ಶೂ ಧರಿಸಿ ಡ್ಯಾನ್ಸ್ ಮಾಡುತ್ತಾನೆ ಹಾಗೂ ಓಡಾಡುತ್ತಾನೆ ಅಂತೆಲ್ಲ ನೆಟ್ಟಿಗರು ಕಿಡಿಕಾರಿದ್ದರು. ಅದರಲ್ಲಿಯೂ ಬಾಲಿವುಡ್ ಚಿತ್ರಗಳ ವಿರುದ್ಧ ಸಿನಿ ಪ್ರೇಕ್ಷಕರು ಅಸಮಾಧಾನ ಹೊಂದಿರುವ ವೇಳೆ ಚಿತ್ರದ ಈ ಅಂಶಗಳು ರಿವೀಲ್ ಆದದ್ದು ಚಿತ್ರದ ಮೇಲೆ ದುಷ್ಪರಿಣಾಮ ಬೀರಿದ್ದು ಸುಳ್ಳಲ್ಲ. ಈ ಹಿಂದಿನ ಬಾಲಿವುಡ್ ಚಿತ್ರಗಳಂತೆ ಇದನ್ನು ಸಹ ಬಾಯ್ಕಾಟ್ ಮಾಡ್ತೇವೆ ಎಂದು ಬಾಲಿವುಡ್ ಸಿನಿ ರಸಿಕರು ತೊಡೆತಟ್ಟಿದ್ದಾರೆ. ಇನ್ನು ಇದು ಬಾಲಿವುಡ್ ಸಿನಿ ರಸಿಕರ ಆಕ್ರೋಶವಾದರೆ ಇದೀಗ ಕನ್ನಡ ಸಿನಿ ರಸಿಕರು ಕೂಡ ಬ್ರಹ್ಮಾಸ್ತ್ರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಕಾರಣ ಬೆಂಗಳೂರು ನಗರದಲ್ಲಿಯೇ ಬಹ್ಮಾಸ್ತ್ರ ಚಿತ್ರದ ಕನ್ನಡಕ್ಕಿಂತ ಹೆಚ್ಚು ತೆಲುಗು ಪ್ರದರ್ಶನಗಳನ್ನು ಆಯೋಜಿಸುತ್ತಿರುವುದು ಕನ್ನಡ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ಬಿಡುಗಡೆಯ ದಿನ ಬ್ರಹ್ಮಾಸ್ತ್ರ ಚಿತ್ರದ ಕನ್ನಡದ ಒಟ್ಟು ಎಷ್ಟು ಪ್ರದರ್ಶನಗಳು ಜರುಗಲಿವೆ ಹಾಗೂ ತೆಲುಗಿನ ಎಷ್ಟು ಪ್ರದರ್ಶನಗಳು ಇರಲಿವೆ ಎಂಬುದರ ಕುರಿತ ಮಾಹಿತಿ ಕೆಳಕಂಡಂತಿದೆ.

  ಬೆಂಗಳೂರಲ್ಲಿ ಬ್ರಹ್ಮಾಸ್ತ್ರ ಕನ್ನಡ ಮತ್ತು ತೆಲುಗು ಶೋ ಸಂಖ್ಯೆ

  ಬೆಂಗಳೂರಲ್ಲಿ ಬ್ರಹ್ಮಾಸ್ತ್ರ ಕನ್ನಡ ಮತ್ತು ತೆಲುಗು ಶೋ ಸಂಖ್ಯೆ

  ಸದ್ಯಕ್ಕೆ ( ಸೆಪ್ಟೆಂಬರ್ 8ರ ಬೆಳಗ್ಗೆವರೆಗೆ ) ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಅಪ್ ಡೇಟ್ ಆಗಿರುವ ಶೋಗಳ ಪ್ರಕಾರ ಬೆಂಗಳೂರಿನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಮೊದಲ ದಿನ ಕನ್ನಡಕ್ಕಿಂತ ತೆಲುಗು ವರ್ಶನ್ ಶೋಗಳೇ ಹೆಚ್ಚಿವೆ. ಈ ಸಮಯಕ್ಕೆ ಸರಿಯಾಗಿ ಬ್ರಹ್ಮಾಸ್ತ್ರ ಕನ್ನಡ 3ಡಿ 4 ಪ್ರದರ್ಶನಗಳು ಮತ್ತು 2ಡಿ 12 ಪ್ರದರ್ಶನಗಳು ಸೇರಿದಂತೆ ಒಟ್ಟು 16 ಪ್ರದರ್ಶನಗಳಿದ್ದರೆ, ಅತ್ತ ಇದೇ ಬೆಂಗಳೂರಿನಲ್ಲಿ ತೆಲುಗು 2ಡಿ 13 ಪ್ರದರ್ಶನಗಳು ಹಾಗೂ ತೆಲುಗು 3ಡಿ 14 ಪ್ರದರ್ಶನಗಳು ಸೇರಿದಂತೆ ಒಟ್ಟು 27 ಪ್ರದರ್ಶನಗಳಿವೆ. ಹೀಗೆ ಸದ್ಯಕ್ಕೆ ಅಪ್ಡೇಟ್ ಆಗಿರುವ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಮೊದಲ ದಿನ ಬ್ರಹ್ಮಾಸ್ತ್ರ ಕನ್ನಡ 16 ಶೋಗಳನ್ನು ಹೊಂದಿದ್ದರೆ, ಬ್ರಹ್ಮಾಸ್ತ್ರ ತೆಲುಗು 27 ಶೋಗಳನ್ನು ಹೊಂದಿದೆ.

  ಬೆಂಗಳೂರಿನಲ್ಲಿ ಬ್ರಹ್ಮಾಸ್ತ್ರ ತಮಿಳು ಕೂಡ ಪ್ರದರ್ಶನ!

  ಬೆಂಗಳೂರಿನಲ್ಲಿ ಬ್ರಹ್ಮಾಸ್ತ್ರ ತಮಿಳು ಕೂಡ ಪ್ರದರ್ಶನ!

  ಇದು ತೆಲುಗು ಕತೆಯಾದರೆ ಬೆಂಗಳೂರು ನಗರದಲ್ಲಿ ಬ್ರಹ್ಮಾಸ್ತ್ರ ತಮಿಳು ವರ್ಷನ್ ಮೊದಲ ದಿನ 6 ಪ್ರದರ್ಶನಗಳನ್ನು ಸದ್ಯಕ್ಕೆ ಪಡೆದುಕೊಂಡಿದೆ. ಈ ಪೈಕಿ 3 3ಡಿ ಪ್ರದರ್ಶನಗಳಾಗಿದ್ದರೆ, 3 2ಡಿ ಪ್ರದರ್ಶನಗಳಾಗಿವೆ.

  ಕಿಡಿಕಾರಿದ ಕನ್ನಡ ಪ್ರೇಮಿಗಳು

  ಕಿಡಿಕಾರಿದ ಕನ್ನಡ ಪ್ರೇಮಿಗಳು

  ಈ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಸಿನಿ ಪ್ರೇಮಿಗಳು ಸಹ ಬ್ರಹ್ಮಾಸ್ತ್ರ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡಕ್ಕಿಂತ ತೆಲುಗು ಪ್ರದರ್ಶನಗಳನ್ನು ಹೆಚ್ಚು ಆಯೋಜಿಸಿರುವುದಕ್ಕೆ ಬೇಸರಗೊಂಡ ಕನ್ನಡ ಸಿನಿ ಪ್ರೇಮಿಗಳು ಬ್ರಹ್ಮಾಸ್ತ್ರ ಚಿತ್ರವನ್ನು ಇಲ್ಲಿಯೂ ಬಾಯ್ಕಾಟ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

  ಹೈದರಾಬಾದ್ ಮತ್ತು ಚೆನ್ನೈನಲ್ಲಿ ಈ ಪರಿಸ್ಥಿತಿ ಇಲ್ಲ!

  ಹೈದರಾಬಾದ್ ಮತ್ತು ಚೆನ್ನೈನಲ್ಲಿ ಈ ಪರಿಸ್ಥಿತಿ ಇಲ್ಲ!

  ಬೆಂಗಳೂರಿನಲ್ಲಿ ಹೇಗೆ ಬ್ರಹ್ಮಾಸ್ತ್ರ ಚಿತ್ರದ ತಮಿಳು ಮತ್ತು ತೆಲುಗು ವರ್ಷನ್ ಬಿಡುಗಡೆಯಾಗುತ್ತಿದೆಯೋ, ಆ ರೀತಿ ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಬ್ರಹ್ಮಾಸ್ತ್ರ ಚಿತ್ರದ ಕನ್ನಡ ವರ್ಷನ್ ಯಾವುದೇ ಶೋ ಕೂಡ ಇಲ್ಲ.

  English summary
  Brahmastra telugu version releasing with more shows than Kannada version in Bengaluru. Take a look

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X