»   » ಸುದೀಪ್ ಜೊತೆಗೆ ತೆರೆ ಹಂಚಿಕೊಂಡ 'ಬ್ರಹ್ಮಗಂಟು' ಗುಂಡಮ್ಮ

ಸುದೀಪ್ ಜೊತೆಗೆ ತೆರೆ ಹಂಚಿಕೊಂಡ 'ಬ್ರಹ್ಮಗಂಟು' ಗುಂಡಮ್ಮ

Posted By:
Subscribe to Filmibeat Kannada
ಸುದೀಪ್ ಜೊತೆ ತೆರೆ ಹಂಚಿಕೊಂಡ ಗುಂಡಮ್ಮ | Filmibeat Kannada

ಜೀ ಕನ್ನಡ ವಾಹಿನಿಯ 'ಬ್ರಹ್ಮಗಂಟು' ಧಾರಾವಾಹಿಯ ಮುಖ್ಯ ಪಾತ್ರ ಗುಂಡಮ್ಮನ ಪಾತ್ರ. ಈ ಧಾರಾವಾಹಿಯಿಂದ ಗುಂಡಮ್ಮ ಪಾತ್ರ ದೊಡ್ಡ ಜನಪ್ರಿಯತೆಗಳಿಸಿತ್ತು. ಆ ಪಾತ್ರದಲ್ಲಿ ನಟಿಸಿದ್ದ ಗೀತಾ ಭಾರತಿ ಭಟ್ ಕೂಡ ಒಳ್ಳೆಯ ಹೆಸರು ಮಾಡಿದರು. ಗಾಯಕಿ ಆಗಬೇಕು ಅಂತ ಬಣ್ಣದ ಲೋಕಕ್ಕೆ ಬಂದ ಗೀತಾ ಆಕಸ್ಮಿಕವಾಗಿ ನಟಿ ಆದರು.

ಸಿಂಪಲ್ ಸುದೀಪ ಈ ರೀತಿಯ ಬಟ್ಟೆ ತೊಟ್ಟು 11 ವರ್ಷ ಆಗಿತ್ತು

ನಟಿ ಗೀತಾ ಈಗ ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಅದರಲ್ಲಿಯೂ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೌದು, ಗೀತಾ ಭಾರತಿ ಭಟ್ ಈಗ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಒಂದು ಸಣ್ಣ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಳ್ಳಿ ಹುಡುಗಿಯಾಗಿರುವ ನಟಿ ಶೃತಿ ಹರಿಹರನ್ ಗೆಳತಿಯ ಪಾತ್ರವನ್ನು ಗೀತಾ ನಿರ್ವಹಿಸಿದ್ದಾರೆ. ಇದೀಗ ಈ ಸಿನಿಮಾದ ಕೆಲ ಮೇಕಿಂಗ್ ಫೋಟೋಗಳು ಹೊರ ಬಂದಿದೆ. ಸುದೀಪ್, ಶೃತಿ ಹರಿಹರನ್, ಗೀತಾ ಭಾರತಿ ಭಟ್ ಲುಕ್ ರಿವೀಲ್ ಆಗಿದೆ.

Bramha Gantu serial gundamma fame Geetha played small role in Ambi Ninge Vaiyasayitho movie

ಅಂದಹಾಗೆ, 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಸಿನಿಮಾದಲ್ಲಿ ಅಂಬರೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ತಯಾರಾಗುತ್ತಿದ್ದು, ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕೆ ಇರಲಿದೆ. ತಮಿಳಿನ 'ಪವರ್ ಪಾಂಡಿ' ಚಿತ್ರದ ರಿಮೇಕ್ ಇದಾಗಿದ್ದು, ಗುರುದತ್ ನಿರ್ದೇಶನ ಮಾಡುತ್ತಿದ್ದಾರೆ.

English summary
Zee Kannada channel's 'Bramha Gantu' serial Gundamma fame Geetha Bharathi Bhat played a small role in Ambi Ninge Vaiyasayitho movie. Kannada actors Sudeep and Ambareesh combination 'Ambi Ninge Vaiyasayitho' kannada movie making stilts out.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X