ಮತ್ತೆ ಕನ್ನಡಕ್ಕೆ ಬಂದ ಹಾಸ್ಯ ನಟ ಬ್ರಹ್ಮಾನಂದಂ

ಟಾಲಿವುಡ್ ಚಿತ್ರರಂಗದ ಹೆಸರಾಂತ ಹಾಸ್ಯ ನಟ ಬ್ರಹ್ಮಾನಂದಂ ಈಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಉಪೇಂದ್ರ ನಟನೆಯ ಸಿನಿಮಾಗಾಗಿ ಅವರು ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ನಿನ್ನಿಂದಲೆ' ಸಿನಿಮಾ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬ್ರಹ್ಮಾನಂದಂ ಪ್ರವೇಶ ಪಡೆದಿದ್ದರು. ಆ ಬಳಿಕ ನಿಖಿಲ್ ಕುಮಾರ್ ನಟನೆಯ 'ಜಾಗ್ವರ್' ಸಿನಿಮಾದಲ್ಲಿಯೂ ಕಾಣಿಸಿಕೊಂಡರು.

ಇದೀಗ 'ಐ ಲವ್ ಯೂ' ಚಿತ್ರದಲ್ಲಿ ಬ್ರಹ್ಮಾನಂದಂ ನಟಿಸಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣ ಆಗಿದ್ದು, ಬ್ರಹ್ಮಾನಂದಂ ಎರಡೂ ಭಾಷೆಗಳಲ್ಲಿ ನಟಿಸಿದ್ದಾರೆ. ಬ್ರಹ್ಮಾನಂದಂ ರನ್ನು ಆರ್ ಚಂದ್ರು ತಮ್ಮ ಚಿತ್ರಕ್ಕಾಗಿ ಕರೆ ತಂದಿದ್ದಾರೆ.

bramhanandam did a comedy role in i love you kannada movie

ಮತ್ತೊಂದು ವಿಶೇಷ ಅಂದರೆ, ಈ ಹಿಂದೆ 'ಸನ್ ಆಫ್ ಸತ್ಯಮೂರ್ತಿ' ತೆಲುಗು ಸಿನಿಮಾದಲ್ಲಿ ಉಪೇಂದ್ರ ಹಾಗೂ ಬ್ರಹ್ಮಾನಂದಂ ಒಟ್ಟಿಗೆ ನಟಿಸಿದ್ದರು. ಈಗ ಮತ್ತೆ ಈ ಕಾಂಬಿನೇಶನ್ ಒಂದಾಗಿದೆ.

ಆರ್ ಚಂದ್ರು ನಿರ್ದೇಶನ ಮತ್ತು ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಚಿತಾ ರಾಮ್ ಸಿನಿಮಾದ ನಾಯಕಿಯಾಗಿದ್ದಾರೆ. ಜೂನ್ 14 ರಂದು 'ಐ ಲವ್ ಯೂ' ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.

More from Filmibeat

English summary
Actor Bramhanandam did a comedy role in I Love You kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X