G20 Summit: 'ಆರ್‌ಆರ್‌ಆರ್' ನನ್ನನ್ನು ಮೋಡಿ ಮಾಡಿದೆ ಎಂದ ಬ್ರೆಜಿಲ್ ಅಧ್ಯಕ್ಷ, ರಾಜಮೌಳಿ ಪ್ರತಿಕ್ರಿಯೆ ಹೀಗಿದೆ

ಭಾರತದಲ್ಲಿ G20 ಶೃಂಗಸಭೆ ನಡೆದಿದ್ದು, ಇದರಲ್ಲಿ ಹಲವು ದೇಶದ ಗಣ್ಯರು ಭಾಗವಹಿಸಿದ್ದಾರೆ. ಶೃಂಗಸಭೆಗೆ ಬಂದಿದ್ದ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಸೂಪರ್ ಹಿಟ್ ತೆಲುಗು ಸಿನಿಮಾ 'ಆರ್‌ಆರ್‌ಆರ್‌' ಬಗಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಹಾಸ್ಯ ಮತ್ತು ನೃತ್ಯಗಳಿಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಎಸ್‌ಎಸ್‌ ರಾಜಮೌಳಿ ನಿರ್ದೇಶನದ ತೆಲುಗು ಚಿತ್ರ 'ಆರ್‌ಆರ್‌ಆರ್' ಗೋಲ್ಡನ್ ಗ್ಲೋಬ್ಸ್ ಮತ್ತು ಆಸ್ಕರ್ ಪ್ರಶಸ್ತಿಗಳನ್ನು ದೇಶಕ್ಕೆ ತಂದಿದೆ. ಇದರಿಂದಾಗಿ ಇಡೀ ದೇಶವೇ ಈ ಸಿನಿಮಾ ತಂಡದ ಬಗ್ಗೆ ಹೆಮ್ಮೆ ಪಟ್ಟಿದೆ.

Brazilian President Luiz Inácio Lula da praised RRR, director SS Rajamouli reacts

ಸದ್ಯ ಭಾರತದಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಭಾಗವಹಿಸಿದ್ದು, ಚಲನಚಿತ್ರವನ್ನು ಶ್ಲಾಘಿಸಿದ್ದಾರೆ. ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, " ಆರ್‌ಆರ್‌ಆರ್' ಮೂರು ಗಂಟೆಗಳ ಚಲನಚಿತ್ರವಾಗಿದೆ. ಚಿತ್ರದಲ್ಲಿ ಸುಂದರವಾದ ನೃತ್ಯಗಳು ಮತ್ತು ಉತ್ತಮ ತಮಾಷೆಯ ದೃಶ್ಯಗಳಿವೆ. ಭಾರತ ಮತ್ತು ಭಾರತೀಯರ ಮೇಲೆ ಬ್ರಿಟಿಷರ ನಿಯಂತ್ರಣದ ಬಗ್ಗೆ ಆಳವಾದ ಟೀಕೆ ಇದೆ. ಈ ಚಿತ್ರವು ಪ್ರಪಂಚದಾದ್ಯಂತ ಬ್ಲಾಕ್‌ಬಸ್ಟರ್ ಆಗಿರಬೇಕು ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಏಕೆಂದರೆ ನನ್ನೊಂದಿಗೆ ಮಾತನಾಡುವ ಪ್ರತಿಯೊಬ್ಬರೊಂದಿಗೂ ನಾನು ಹೇಳುವ ಮೊದಲ ವಿಷಯವೆಂದರೆ, ನೀವು ಆ ಮೂರು ಗಂಟೆಗಳ ದಂಗೆ ಮತ್ತು ಕ್ರಾಂತಿಯನ್ನು ನೋಡಿದ್ದೀರಾ..? ಎಂದು. ಹಾಗಾಗಿ, ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಈ ಸಿನಿಮಾ ನನ್ನನ್ನು ಮೋಡಿ ಮಾಡಿದೆ" ಎಂದಿದ್ದಾರೆ.

ನಿರ್ದೇಶಕ ಎಸ್ ಎಸ್ ರಾಜಮೌಳಿ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿರುವ 'ಆರ್‌ಆರ್‌ಆರ್' ನಿರ್ದೇಶಕ ಎಸ್‌ಎಸ್ ರಾಜಮೌಳಿ ಬ್ರೆಜಿಲ್ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು "ಸರ್, ನಿಮ್ಮ ಈ ರೀತಿಯ ಮಾತುಗಳಿಗೆ ತುಂಬಾ ಧನ್ಯವಾದಗಳು. ನೀವು ಭಾರತೀಯ ಸಿನಿಮಾವನ್ನು ಉಲ್ಲೇಖಿಸಿದ್ದೀರಿ ಮತ್ತು ಆರ್‌ಆರ್‌ಆರ್‌ ಅನ್ನು ನೋಡಿ ಸಂರೋಷಪಟ್ಟಿದ್ದೀರಿ ಎಂದು ತಿಳಿದುಕೊಳ್ಳಲು ಇದು ಖುಷಿಯಾಗಿದೆ!! ನಮ್ಮ ತಂಡ ಭಾವಪರವಶವಾಗಿದೆ. ನೀವು ನಮ್ಮ ದೇಶದಲ್ಲಿ ಉತ್ತಮ ಸಮಯವನ್ನು ಕಳೆದಿದ್ದಿರಿ ಎಂದು ಭಾವಿಸುತ್ತೇವೆ" ಎಂದು ಹೇಳಿದ್ದಾರೆ.

ಬಾಹುಬಲಿ ಖ್ಯಾತಿಯ ಎಸ್‌ಎಸ್ ರಾಜಮೌಳಿ ನಿರ್ದೇಶನದ, 'ಆರ್‌ಆರ್‌ಆರ್' ಇಬ್ಬರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಕಾಲ್ಪನಿಕ ಕಥೆ. ಅಲ್ಲೂರಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮರಂ ಭೀಮ (ಜೂನಿಯರ್ ಎನ್‌ಟಿಆರ್ ) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಇಬ್ಬರ ಒಡನಾಟ ಮತ್ತು ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಅವರ ಹೋರಾಟವನ್ನು ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ನಟಿ ಆಲಿಯಾ ಭಟ್, ಶ್ರೆಯಾ ಶರಣ್, ಅಜಯ್ ದೇವಗನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

Brazilian President Luiz Inácio Lula da praised RRR, director SS Rajamouli reacts

95ನೇ ಆಸ್ಕರ್ ಅವಾರ್ಡ್ಸ್‌ನಲ್ಲಿ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಇದಲ್ಲದೆ, 'ಆರ್‌ಆರ್‌ಆರ್‌' ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ನಾಮನಿರ್ದೇಶನಗಳನ್ನು ಪಡೆದ ಮೊದಲ ತೆಲುಗು ಚಲನಚಿತ್ರವಾಗಿ. ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನವಾಗಿತ್ತು. 'ನಾಟು ನಾಟು' ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.

More from Filmibeat

English summary
Brazilian President Luiz Inácio Lula da praised RRR, Rajamouli reacts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X