ಅತಿಯಾಗಿ ನಂಬಿ ಜೀವನದಲ್ಲಿ ಎಡವಿದ ನಟಿ ಶ್ರುತಿ

By Rajendra
<ul id="pagination-digg"><li class="previous"><a href="/news/not-playing-drama-actress-shruthi-077603.html">« Previous</a>

ನಾನು ಒಬ್ಬ ಡೈವೋರ್ಸಿ. ನನಗೇನು ನೋವಿಲ್ಲ. ಯಾಕೆಂದರೆ ಅದು ಮೊದಲೇ ನಿರ್ಧಾರವಾಗಿತ್ತು. ಆ ರೀತಿ ಆದರೆ ಪರವಾಗಿಲ್ಲ. ಇಬ್ಬರಿಗೂ ಇಷ್ಟವಿದ್ದು ದೂರವಾದರೆ ಅದು ನಿಜಕ್ಕೂ ನೋವಿನ ಸಂಗತಿ. ಮಧ್ಯಸ್ಥಿಕೆ ಕೇಂದ್ರದಲ್ಲಿ ಅವರನ್ನು ಒಂದು ಮಾಡಬಹುದು.

ನಾನು ನನ್ನ ಕುತ್ತಿಗೆವರೆಗೂ ಪ್ರಯತ್ನಪಟ್ಟಿದ್ದೇನೆ. ಮೊದಲ ದಿನವೇ ಈ ರೀತಿಯ ಕಷ್ಟಗಳನ್ನು ಅನುಭವಿಸಿ ತಾನೇನು ತಪ್ಪು ಮಾಡದಿದ್ದರೂ ಮದುವೆಯನ್ನು ಅಸಿಂಧುಗೊಳಿಸಿ ಎಂದು ಕೇಳಿಕೊಳ್ಳುತ್ತಾಳಲ್ಲಾ ಅದಕ್ಕಿಂತಲೂ ದೊಡ್ಡ ತ್ಯಾಗ ಇನ್ನೊಂದಿಲ್ಲ. ನಾನು ಅದನ್ನು ಮಾಡಿದ್ದೇನೆ ಅವರಿಗಾಗಿ.

ಮಂಜುಳಾ ಅವರು ತಮ್ಮ ಪತಿಯನ್ನು ತಮಗೆ ಕೊಡಿಸಿ ಎಂದು ಕೇಳಿದ್ದರಲ್ಲಿ ತಪ್ಪಿಲ್ಲ. ಚಂದ್ರಚೂಡ್ ಅವರು ಆರು ವರ್ಷ ಒಂಟಿಯಾಗಿದ್ದರು. ಈಗ ಆ ಚರ್ಚೆ ಬೇಡ. ಆರು ವರ್ಷದಿಂದ ಅವರು ಯಾಕೆ ಸುಮ್ಮನಿದ್ದರು. ನನಗೆ ಅನ್ಯಾಯ ಆಗಿದೆ ಎಂದು ನ್ಯಾಯಾಲಯಕ್ಕೆ ಬಂದಿದ್ದಾರೆ. ಸಮಾಜದ ಕಣ್ಣಿಗೆ, ಜನರ ಕಣ್ಣಿಗೆ ನಾನು ತಪ್ಪಿತಸ್ಥಳಾಗಬಾರದು ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ.

ದುರಾದೃಷ್ಟವಂತೆ ನಾನು. ಸಿನಿಮಾಗಳಲ್ಲಿ ಜೀವನ ಬೇರೆ ರೀತಿ ಎಂಡ್ ಆಗುತ್ತಿತ್ತು. ಆದರೆ ನಿಜ ಜೀವನದಲ್ಲಿ ನನಗೆ ಮಗಳಿದ್ದಾರಳೆ ತಂದೆತಾಯಿ ಇದ್ದಾರೆ. ಅಲ್ಲಿ ಆದಂತೆ ಇಲ್ಲಿ ಆಗಲ್ಲ. ಜೀವನದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ. ಇಷ್ಟಕ್ಕೇ ಫುಲ್ ಸ್ಟಾಪ್ ಇಡಲ್ಲ.

ಅತಿಯಾಗಿ ನಂಬಿದ್ದೆ. ಪ್ರೀತಿಗಿಂಗಲೂ ದೊಡ್ಡದು ನಂಬಿಕೆ. ನಾನು ಎಡವಿದ್ದೂ ಅಲ್ಲೇ. ಮೊದಲನೆ ರಿಲೇಷನ್ ಬಗ್ಗೆ ಈಗ ಮಾತನಾಡುವುದು ಬೇಡ. ಯಾಕೆಂದರೆ ಅವರು ಈಗ ಸಂತೋಷದಿಂದ ಬಾಳ್ವೆ ನಡೆಸುತ್ತಿದ್ದಾರೆ. ಅವರ ಜೀವನದಲ್ಲಿ ನನ್ನ ಹೆಸರು ಬರುವುದು ಬೇಡ.

ಆದಷ್ಟು ಈ ನೋವನ್ನು ಮರೆಯಲು ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ತಂದೆತಾಯಿ, ಸ್ನೇಹಿತರ ಬೆಂಬಲದಿಂದ, ಅಭಿಮಾನಿಗಳ ಪ್ರೀತಿಯಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ. ನೋಡೋಣ ಏನಾಗುತ್ತದೋ ಎಂದು ಹೇಳಿ ಶ್ರುತಿ ಮಾತು ಮುಗಿಸಿದರು.

<ul id="pagination-digg"><li class="previous"><a href="/news/not-playing-drama-actress-shruthi-077603.html">« Previous</a>

More from Filmibeat

English summary
After Bangalore family court annuled Kannada actress Shruti second marriage with journalist-turned-filmmaker Chandrachud, she reacts on courts judgement. She said leave me my faith. Chandrachud’s first wife Manjula, a teacher, approaching the family court alleging that the filmmaker had not divorced from her before marrying Shruthi, which is illegal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X