RJ Rachana: ಹೃದಯಾಘಾತದಿಂದ ಬದುಕಿನ ಪಯಣ ಮುಗಿಸಿದ ಆರ್ ಜೆ ರಚನಾ
ಕನ್ನಡದ ಹೆಸರಾಂತ ರೇಡಿಯೋ ನಿರೂಪಕಿ ಆರ್ ಜೆ ರಚನಾ ಇನ್ನಿಲ್ಲ. ತೀವ್ರ ಹೃದಯಾಘಾತದಿಂದ ರಚನಾ ನಿಧನ ಹೊಂದಿದ್ದಾರೆ.
Recommended Video
ಆರ್ ಜೆ ರಚನಾ ತಮ್ಮ ಕಂಠ ಸಿರಿಯಿಂದಲೇ ಹೆಸರುವಾಸಿ ಆಗಿದ್ದರು. ರೇಡಿಯೋ ಮಿರ್ಚಿ ಮೂಲಕ ಅವರು ತಮ್ಮ ರೇಡಿಯೋ ಜಾಕಿ ಪಯಣ ಆರಂಭಿಸಿದ್ದರು. ನಂತರ ರೇಡಿಯೋ ಸಿಟಿಯಲ್ಲಿಯೂ ಅವರು ಕೆಲಸ ಮಾಡಿದ್ದಾರೆ. ಆರ್ ಜೆ ರಚನಾ ಕಾರ್ಯಕ್ರಮಗಳು ಎಂದರೆ ಅತ್ಯಂತ ಜನಪ್ರಿಯ ಆಗಿದ್ದವು. ಆದರೆ ಕಿರಿವಯಸ್ಸಿನಲ್ಲೇ ರಚನಾ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.

ಕೇವಲ ರೇಡಿಯೋ ಜಾಕಿ ಆಗಿ ಮಾತ್ರ ಅಲ್ಲಾ, ಅವರು ಹಲವಾರು ವೇದಿಕೆ ಕಾರ್ಯಕ್ರಮಗಳನ್ನು ಕೂಡ ನಿರೂಪಣೆ ಮಾಡಿದ್ದಾರೆ, ಕನ್ನಡ ಚಿತ್ರರಂಗದ ಹಲವಾರು ತಾರೆಯರ ಸಂದರ್ಶನ ಮಾಡಿ ರಚನಾ ಸೈ ಎನಿಸಿಕೊಂಡಿದ್ದಾರೆ.
ಆರ್ ಜೆ ಆಗಿ ಹೆಸರು ಮಾಡಿದ್ದ ರಚನಾ ಅವರು ಆರೇಳು ವರ್ಷಗಳ ಹಿಂದೆಯೇ ರೇಡಿಯೋ ಜಾಕಿ ವೃತ್ತಿಗೆ ವಿದಾಯ ಹೇಳಿದ್ದರು. ನಂತರ ಅವರು ಸ್ನೇಹಿತರ ವಲಯದಿಂದಲೂ ದೂರ ಉಳಿದಿದ್ದರಂತೆ. ಇವರ ಅಚಾನಕ್ ಸಾವು ಆರ್ ಜೆ ವಲಯಕ್ಕೆ ಶಾಕ್ ನೀಡಿದೆ. ರಚನಾಗೆ ಹೀಗೆ ಆಗಲು ಹೇಗೆ ಸಾಧ್ಯ ಎಂದು ಎಲ್ಲರು ಶಾಕ್ ಆಗಿದ್ದಾರೆ.
ಅಷ್ಟೇ ಅಲ್ಲ ರಚನಾ ಅವರು ತುಂಬಾನೇ ಡಿಪ್ರೆಷನ್‌ನಲ್ಲಿ ಇದ್ದರಂತೆ. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುತ್ತಿದೆ ರಚನಾ ಸ್ನೇಹಿತರ ಬಳಗ. ಸದ್ಯ ಕಾರ್ಡಿಯಾ ಕರೆಸ್ಟ್‌ನಿಂದ ಅವರು ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಖಿನ್ನತೆಯಿಂದ ಏನಾದರು ಹೆಚ್ಚು ಕಡಿಮೆ ಆಗಿರಬೇಕು ಎನ್ನುತ್ತಿದೆ ಸ್ನೇಹಿತ ವಲಯ. ಶಾಕ್‌ಗೆ ಒಳಗಾದ ಸ್ನೇಹಿತ ವರ್ಗ ದುಖಃದಿಂದಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.


Click it and Unblock the Notifications











