»   » ಲಂಡನ್ ಸೆನ್ಸಾರ್ ಮಂಡಳಿಯಿಂದ 'ಪದ್ಮಾವತಿ'ಗೆ ಕ್ಲೀನ್ ಚಿಟ್

ಲಂಡನ್ ಸೆನ್ಸಾರ್ ಮಂಡಳಿಯಿಂದ 'ಪದ್ಮಾವತಿ'ಗೆ ಕ್ಲೀನ್ ಚಿಟ್

Posted By:
Subscribe to Filmibeat Kannada

ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರಕ್ಕೆ ಭಾರತೀಯ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಿರಲಿಲ್ಲ. ಆದ್ರೀಗ, ಲಂಡನ್ ನಲ್ಲಿ 'ಪದ್ಮಾವತಿ' ಚಿತ್ರ ಸೆನ್ಸಾರ್ ಮುಗಿಸಿದ್ದು, ಲಂಡನ್ ನಲ್ಲಿ ಬಿಡುಗಡೆ ಮಾಡಲು ಕ್ಲೀನ್ ಚಿಟ್ ಪಡೆದುಕೊಂಡಿದೆ.

'ರಾಣಿ ಪದ್ಮಾವತಿ' ಬಗ್ಗೆ ಈ ಚಿತ್ರದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಭಾರತದಲ್ಲಿ 'ಪದ್ಮಾವತಿ' ಚಿತ್ರವನ್ನ ನಿ‍ಷೇಧಿಸಬೇಕು ಎಂದು ರಜಪೂತ ಕರಣಿ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಭಾರತ್ ಬಂದ್ ಗೂ ಕರೆ ನೀಡಿದ್ದರು. ಇದರ ಜೊತೆಗೆ ಭಾರತೀಯ ಸೆನ್ಸಾರ್ ಮಂಡಳಿ ಕೂಡ 'ಪದ್ಮಾವತಿ' ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಿರಲಿಲ್ಲ.

'ಪದ್ಮಾವತಿ' ಎಕ್ಸ್ ಕ್ಲೂಸಿವ್ ವಿಮರ್ಶೆ: ವಿವಾದದ ಮಧ್ಯೆ ಸಿನಿಮಾ ನೋಡಿದ ಪತ್ರಕರ್ತ

British Censor Board clears Padmavati

ಇದೀಗ, ಲಂಡನ್ ಸೆನ್ಸಾರ್ ಮಂಡಳಿ 'ಪದ್ಮಾವತಿ' ಚಿತ್ರಕ್ಕೆ ಕ್ಲೀನ್ ಚಿಟ್ ನೀಡಿರುವುದು, ಭಾರತೀಯ ಸೆನ್ಸಾರ್ ಮಂಡಳಿಯನ್ನ ಪ್ರಶ್ನಿಸುವಂತಿದೆ.

ಡಿಸೆಂಬರ್ 1 ರಂದು ವರ್ಲ್ಡ್ ವೈಡ್ 'ಪದ್ಮಾವತಿ' ಚಿತ್ರವನ್ನ ಬಿಡುಗಡೆ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ಧರಿಸಿದ್ದರು. ಆದ್ರೆ, ಭಾರತದಲ್ಲಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈಗ ಲಂಡನ್ ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯುಕೆಯಲ್ಲಿ ಪದ್ಮಾವತಿ ಡಿಸೆಂಬರ್ 1 ಕ್ಕೆ ತೆರೆ ಕಾಣುತ್ತಾ ಎಂಬುದು ಕುತೂಹಲ ಮೂಡಿಸಿದೆ.

'ಪದ್ಮಾವತಿ' ಬೆಂಬಲಕ್ಕೆ ನಿಂತ ಸಿಎಂ, ಡಿಕೆಶಿ ಮತ್ತು ಸ್ಯಾಂಡಲ್ ವುಡ್

English summary
British Censor Board clears Sanjay Leela Bhansalis Padmavati in UK. ಲಂಡನ್ ನಲ್ಲಿ 'ಪದ್ಮಾವತಿ' ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದ್ದು, ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada