For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರ ತೆರೆಯಲು ಶಿಫಾರಸು: ಆದರೂ ಸಿನಿಮಾ ಹಾಲ್ ಮಾಲೀಕರ ಅಸಮಾಧಾನ

  |

  ದೇಶದಾದ್ಯಂತ ಆಗಸ್ಟ್ ತಿಂಗಳಿನಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಬಹುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

  ನಾವಿದ್ದೇವೆ ಯೋಚನೆ ಮಾಡಬೇಡಿ ಎಂದ ಶಿವಣ್ಣ | Shivarajkumar | Filmibeat Kannada

  ಶುಕ್ರವಾರ ನಡೆದ ಸಿಐಐ ಮಾಧ್ಯಮ ಸಮಿತಿಯೊಂದಿಗೆ ನಡೆದ ಸಿನಿಮಾ ಉದ್ಯಮ ಮಾತುಕತೆಯಲ್ಲಿ ಐಬಿ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ಈ ಮಾಹಿತಿ ನೀಡಿದ್ದಾರೆ. ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  ಕೊರೊನಾ ವೈರಸ್ ಮೂಲ ಚೀನಾದಲ್ಲಿ ಚಿತ್ರಮಂದಿರ ಓಪನ್: ಮೊದಲ ದಿನವೇ ಭರ್ಜರಿ ಕಲೆಕ್ಷನ್ಕೊರೊನಾ ವೈರಸ್ ಮೂಲ ಚೀನಾದಲ್ಲಿ ಚಿತ್ರಮಂದಿರ ಓಪನ್: ಮೊದಲ ದಿನವೇ ಭರ್ಜರಿ ಕಲೆಕ್ಷನ್

  ದೇಶದಾದ್ಯಂತ ಸಿನಿಮಾ ಹಾಲ್‌ಗಳನ್ನು ಮತ್ತೆ ತೆರೆಯಲು ಆಗಸ್ಟ್ 1ರಿಂದ ಅನುಮತಿ ನೀಡಬಹುದು. ಅಥವಾ ಕಡೇಪಕ್ಷ ಆಗಸ್ಟ್ 31ರ ವೇಳೆಗಾದರೂ ಅವಕಾಶ ಕೊಡಬಹುದು ಎಂದು ಶಿಫಾರಸು ಮಾಡಿರುವುದಾಗಿ ಖರೆ ತಿಳಿಸಿದ್ದಾರೆ. ಮುಂದೆ ಓದಿ.

  ಸಾಲುಗಳ ನಡುವೆ ಅಂತರ

  ಸಾಲುಗಳ ನಡುವೆ ಅಂತರ

  ಮೊದಲ ಸಾಲಿನಲ್ಲಿ ಒಂದರ ನಂತರ ಒಂದು ಸೀಟ್‌ನಲ್ಲಿ ಕುಳಿತುಕೊಳ್ಳಲು ಹಾಗೂ ಅದರ ನಂತರದ ಸಾಲನ್ನು ಖಾಲಿ ಬಿಡುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಹುದು. ದೇಶದಾದ್ಯಂತ ಇದೇ ಕ್ರಮವನ್ನು ಅನುಸರಿಸಬಹುದು ಎಂದು ಸಚಿವಾಲಯ ಹೇಳಿದೆ.

  ಎರಡು ಅಡಿ ಸಾಮಾಜಿಕ ಅಂತರ

  ಎರಡು ಅಡಿ ಸಾಮಾಜಿಕ ಅಂತರ

  ಐಬಿ ಸಚಿವಾಲಯವು ಶಿಫಾರಸು ಮಾಡುವಾಗ ಕನಿಷ್ಠ ಎರಡು ಮೀಟರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನು ಪರಿಗಣಿಸಿದೆ. ಆದರೆ ಸಿನಿಮಾ ಹಾಲ್‌ನಲ್ಲಿ ಎರಡು ಮೀಟರ್ ಬದಲು ಎರಡು ಅಡಿ ಅಂತರ ಸಾಧ್ಯವಾಗುತ್ತದೆ ಎಂದಿದೆ. ಗೃಹ ಸಚಿವಾಲಯ ಈ ಶಿಫಾರಸನ್ನು ಇನ್ನೂ ಪರಿಶೀಲಿಸಿ ನಂತರ ತೀರ್ಮಾನ ತೆಗೆದುಕೊಳ್ಳಬೇಕಿದೆ.

  ಮೈಸೂರಿಗರ ಭಾವುಕ ನಂಟು ಅಂತ್ಯ: 'ಶಾಂತಲಾ' ಚಿತ್ರಮಂದಿರ ಇನ್ನು ನೆನಪು ಮಾತ್ರಮೈಸೂರಿಗರ ಭಾವುಕ ನಂಟು ಅಂತ್ಯ: 'ಶಾಂತಲಾ' ಚಿತ್ರಮಂದಿರ ಇನ್ನು ನೆನಪು ಮಾತ್ರ

  ಚಿತ್ರಮಂದಿರ ಮಾಲೀಕರ ವಿರೋಧ

  ಚಿತ್ರಮಂದಿರ ಮಾಲೀಕರ ವಿರೋಧ

  ಈ ಸಭೆಯಲ್ಲಿ ಪಾಲ್ಗೊಂಡಿದ್ದ ಚಿತ್ರಮಂದಿರಗಳ ಮಾಲೀಕರು ಈ ಸೂತ್ರ ಸರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ನಿಯಮದಡಿ ಚಿತ್ರ ಪ್ರದರ್ಶನ ನಡೆಸಿದರೆ ಚಿತ್ರಮಂದಿರದ ಸಾಮರ್ಥ್ಯದ ಶೇ 25ರಷ್ಟು ಮಾತ್ರವೇ ತುಂಬಲು ಸಾಧ್ಯ. ಇದು ಚಿತ್ರಮಂದಿರಗಳನ್ನು ಮುಚ್ಚಿರುವ ಈ ಸನ್ನಿವೇಶಕ್ಕಿಂತಲೂ ಹೆಚ್ಚು ನಷ್ಟ ಉಂಟುಮಾಡುತ್ತದೆ ಎಂದಿದ್ದಾರೆ.

  ಸಭೆಯಲ್ಲಿ ಪಾಲ್ಗೊಂಡಿದ್ದವರು

  ಸಭೆಯಲ್ಲಿ ಪಾಲ್ಗೊಂಡಿದ್ದವರು

  ಚಿತ್ರಪ್ರದರ್ಶನಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸೋನಿ ಸಿಇಒ ಎನ್‌ಪಿ ಸಿಂಗ್, ಮ್ಯಾಡಿಸನ್‌ನ ಸ್ಯಾಮ್ ಬಲ್ಸಾರಾ, ಡಿಸ್ಕವರಿಯ ಮೇಘಾ ಟಾಟಾ, ಅಮೆಜಾನ್ ಪ್ರೈಮ್‌ನ ಗೌರವ್ ಗಾಂಧಿ, ಟ್ವಿಟ್ಟರ್‌ನ ಮನೀಶ್ ಮಹೇಶ್ವರಿ, ಬೆನೆಟ್ ಕೋಲ್ಮನ್ ಆಂಡ್ ಕೋ ಸಂಸ್ಥೆಯ ಎಸ್. ಶಿವಕುಮಾರ್, ಸ್ಟಾರ್ ಆಂಡ್ ಡಿಸ್ನಿಯ ಕೆ. ಮಾಧವನ್ ಮುಂತಾದವರು ಹಾಜರಿದ್ದರು. ಸರ್ಕಾರದ ನಿರ್ಧಾರಕ್ಕೆ ಒಟಿಟಿ ಪ್ಲಾಟ್‌ಫಾರ್ಮ್ ಸಂಸ್ಥೆಗಳು ಮಾತ್ರ ವಿರೋಧ ವ್ಯಕ್ತಪಡಿಸಲಿಲ್ಲ.

  ಮನರಂಜನಾ ಕ್ಷೇತ್ರ ಮತ್ತಷ್ಟು ತುಟ್ಟಿ?: ಹೆಚ್ಚಾಗಲಿದೆಯೇ ಸಿನಿಮಾ ಟಿಕೆಟ್ ದರ?ಮನರಂಜನಾ ಕ್ಷೇತ್ರ ಮತ್ತಷ್ಟು ತುಟ್ಟಿ?: ಹೆಚ್ಚಾಗಲಿದೆಯೇ ಸಿನಿಮಾ ಟಿಕೆಟ್ ದರ?

  English summary
  Information and Broadcasting Ministry has recommended to the Union Ministry to reopen cinema halls in August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X