twitter
    For Quick Alerts
    ALLOW NOTIFICATIONS  
    For Daily Alerts

    ಸಂಚಾರಿ ವಿಜಯ್ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ನಿರ್ದೇಶಕ ಲಿಂಗದೇವರು ಆಕ್ರೋಶ

    |

    ಸ್ಯಾಂಡಲ್‌ವುಡ್ ಖ್ಯಾತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ದಿನದ ಬಳಿಕ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಪ್ರತಿಭಾವಂತ ನಟನ ಸಾವಿನ ಬೆನ್ನಲ್ಲೇ ಹರಿದಾಡುತ್ತಿರುವ ಗೊಂದಲದ ಮಾಹಿತಿಗಳ ವಿರುದ್ಧ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅವಕಾಶಗಳ ಕೊರತೆ, ಜಾತಿ ಅವಮಾನ, ಬಡತನ ಹೀಗೆ ಅನೇಕ ವಿಚಾರಗಳು ವಿಜಯ್ ಬಗ್ಗೆ ಸಾವಿನ ಬಳಿಕ ಸದ್ದು ಮಾಡುತ್ತಿವೆ.

    ವಿಜಯ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ 'ನಾನು ಅವನಲ್ಲ ಅವಳು' ಸಿನಿಮಾದ ನಿರ್ದೇಶಕ ಲಿಂಗದೇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯ್ ಆಪ್ತರು ಎಂದು ಹೇಳಿಕೊಂಡು ವಿಜಯ್ ಬಗ್ಗೆ ಸುಳ್ಳು ಮಾಹಿತಿ ಪ್ರಚಾರ ಮಾಡುತ್ತಿರುವವರಿಗೆ ಲಿಂಗದೇವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

    ನೀವು ಮನುಷ್ಯರೇ?: ಲಿಂಗದೇವರು

    ನೀವು ಮನುಷ್ಯರೇ?: ಲಿಂಗದೇವರು

    "ಅನಿರೀಕ್ಷಿತ ಘಟನೆಯಿಂದ ಒಬ್ಬ ವ್ಯಕ್ತಿ ಸತ್ತಾಗ ಆ ವ್ಯಕ್ತಿಯ ತಂದೆ ತಾಯಿಯ ಪೂರ್ವಾಪರಗಳನ್ನು ಕೆದಕಿ ಬದುಕಿ ಉಳಿದವರ ಬದುಕನ್ನೇ ಪ್ರಶ್ನೆ ಮಾಡುವ ನೀವು ಮನುಷ್ಯರೇ? ತನ್ನ ತಂದೆ ತಾಯಿಯವರು ನಮಗಿಂತಲೂ ಕಷ್ಟ, ಚಿಂತೆ, ಹತಾಶೆಗಳನ್ನು ಅನುಭವಿಸಿದ್ದರೂ ಕೂಡ ಅದನ್ನು ಮೀರಿ ಸಮಾಜದಲ್ಲಿ ಮತ್ತು ನಾನು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ನನ್ನ ಅಸ್ಮಿತೆಗಾಗಿ ಹುಡುಕುತ್ತಿರುತ್ತೇನೆ'' ಎಂದಿದ್ದಾರೆ.

    ಧರ್ಮ, ಜಾತಿ ತಳುಕು ಹಾಕಿ ರಾಡಿ ಮಾಡುತ್ತಿದ್ದಾರೆ

    ಧರ್ಮ, ಜಾತಿ ತಳುಕು ಹಾಕಿ ರಾಡಿ ಮಾಡುತ್ತಿದ್ದಾರೆ

    "ಈ ಸಮಾಜ ಎಷ್ಟೊಂದು ನಾಗರಿಕ, ಸ್ವಸ್ಥ, ಜೀವಪರ ಎಂದೆಲ್ಲ ಹೇಳುವ ಜನಗಳೇ ಅನಾಗರಿಕ, ಅಸ್ವಸ್ಥ ಮತ್ತು ಜೀವ ವಿರೋಧಿ ಲೇಖನವನ್ನು ಬರೆದು, ಬೇರೆಯವರ ಮನೆಗೆ ಬೆಂಕಿ ಬಿದ್ದಾಗ ಇವರು ಚಳಿ ಕಾಯಿಸುತ್ತಿದ್ದಾರೆ ಎಂದು ಭಾಸವಾಗುತ್ತಿದೆ ಮತ್ತು ಸಾವಿನಲ್ಲೂ ಸಾರ್ಥಕತೆ ಮೆರೆದ ಸುಸಂಸ್ಕೃತ ಕುಟುಂಬವನ್ನು ಅಂಗಡಿಗಳಲ್ಲಿ ಬಿಕರಿಯಾಗುವ ಸರಕನ್ನಾಗಿಸಿ, ಧರ್ಮ ಮತ್ತು ಜಾತಿಗಳನ್ನು ತಳಕು ಮಾಡಿಕೊಂಡು ರಾಡಿ ಮಾಡುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಿಮ್ಮಂತವರ ಬಗ್ಗೆ ಹೇಸಿಗೆಯಾಗುತ್ತದೆ

    ನಿಮ್ಮಂತವರ ಬಗ್ಗೆ ಹೇಸಿಗೆಯಾಗುತ್ತದೆ

    "ಮೇಲ್ನೋಟಕ್ಕೆ ಜಾತಿ ಸಂಘರ್ಷದ ಬಗ್ಗೆ ತಿಳಿಸುವ ಆಶಯದಿಂದ ಕೂಡಿದೆ ಅನಿಸುತ್ತದೆ. ಆದರೆ ಆ ನೆಪದಲ್ಲಿ ಜಾತಿ ಸಂಘರ್ಷವನ್ನು ಬಿತ್ತಲು ಹೊರಟಿದೆ. ಸಾವನ್ನು ಬಳಸಿ ಜಾತಿ ಜಗಳ ಹುಟ್ಟು ಹಾಕಲು ಹೊರಟ ನಿಮ್ಮಂತವರ ಬಗ್ಗೆ ಹೇಸಿಗೆಯಾಗುತ್ತದೆ. ಮನುಷ್ಯತ್ವವನ್ನು ಮೈಗೂಡಿಸಿಕೊಂಡಿದ್ದ ವಿಜಯ್ ಒಬ್ಬ ಶ್ರೇಷ್ಠ ಕಲಾವಿದ‌ ಮಾತ್ರವಲ್ಲ ಅವರ ಇಡೀ ಕುಟುಂಬವೇ ನಮಗೆಲ್ಲ ಮಾದರಿಯಾಗಿರುವ ಈ ಸಂದರ್ಭದಲ್ಲಿ ಗತಿಸಿರುವ ತಂದೆ ತಾಯಿಗಳು ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ಊಹಿಸಲು ಅಸಾಧ್ಯ" ಎಂದು ಲಿಂಗದೇವರು ಹೇಳಿದ್ದಾರೆ.

    ರಾಷ್ಟ್ರಪ್ರಶಸ್ತಿ ಬಂದ ಬಳಿಕ 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ

    ರಾಷ್ಟ್ರಪ್ರಶಸ್ತಿ ಬಂದ ಬಳಿಕ 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ

    "ಇನ್ನೂ ಕೆಲವರ ಸುಳ್ಳುಗಳ ಸರಮಾಲೆಯ ಲೇಖನದ ಶೈಲಿಗೆ ಮಾರುಹೋಗಿ ಅದೇ ಸತ್ಯ ಎಂದು ವಾದಿಸುತ್ತಿದ್ದಾರೆ ಮತ್ತು ವಿಜಯ್ ಅವರಿಗೆ ಅವಕಾಶಗಳೇ ಇರಲಿಲ್ಲ ಎಂದು ಭಾವಿಸಿದ್ದಾರೆ. ಅಂತಹವರಿಗೆ ನಾನು ಹೇಳೋದು ಇಷ್ಟೇ, ವಿಜಯ್ ಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಸುಮಾರು 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಒಂದು ಮಲೆಯಾಳಂ ಸಿನಿಮಾ ಕೂಡ ಚಿತ್ರೀಕರಣ ಮುಗಿದಿದೆ" ಎಂದು ಲಿಂಗದೇವರು ತಿಳಿಸಿದ್ದಾರೆ.

    ಕಲೆಗೆ ಸರಿಯಾದ ಪಾತ್ರಗಳು ಸಿಗುತ್ತಿಲ್ಲ ಎನ್ನುವ ಕೊರಗಿತ್ತು

    ಕಲೆಗೆ ಸರಿಯಾದ ಪಾತ್ರಗಳು ಸಿಗುತ್ತಿಲ್ಲ ಎನ್ನುವ ಕೊರಗಿತ್ತು

    "2014 ಕ್ಕೂ ಮುಂಚೆ ಸುಮಾರು 9 ಸಿನಿಮಾಗಳಲ್ಲಿ ಅಭಿನಯಿಸಿದ್ದರು ಅವುಗಳಲ್ಲಿ 'ನಾನು ಅವನಲ್ಲ ಅವಳು' ಮತ್ತು 'ಹರಿವು' ಕೂಡ ಸೇರಿದೆ. ಒಟ್ಟು 33 ಕ್ಕೂ ಹೆಚ್ಚು ಸಿನಿಮಾ ಪಯಣ ವಿಜಯ್ ದು. ಕಲಾವಿದನಾದ ವಿಜಯ್ ಇದಕ್ಕಿಂತ ಹೆಚ್ಚು ಅವಕಾಶ ಬಯಸಲಿಲ್ಲ, ಅವನಿಗೆ ಇದ್ದ ಕೊರಗು ಒಂದೇ ಒಂದು ಅದು ನನ್ನಲ್ಲಿರುವ ಕಲೆಗೆ ಸರಿಯಾದ ಪಾತ್ರಗಳು ಸಿಗುತ್ತಿಲ್ಲ ಎಂಬುದಾಗಿತ್ತು. ಇದು 99% ಕಲಾವಿದರ ಕೊರಗು ಕೂಡ" ಎಂದು ನಾನು ಅವನಲ್ಲ ಅವಳು ಸಿನಿಮಾದ ನಿರ್ದೇಶಕ ಲಿಂಗದೇವರು ಹೇಳಿದ್ದಾರೆ.

    ನಾಲ್ಕು ಜನರಿಗೆ ಮಾದರಿಯಾಗಿ ಬದುಕಿದ್ದಾನೆ ವಿಜಯ್

    ನಾಲ್ಕು ಜನರಿಗೆ ಮಾದರಿಯಾಗಿ ಬದುಕಿದ್ದಾನೆ ವಿಜಯ್

    "ಪ್ರತಿಯೊಂದು ಸಿನಿಮಾವೂ ಪ್ರಶಸ್ತಿ ತರುವುದಿಲ್ಲ ಮತ್ತು ಪ್ರತಿ ಸಿನಿಮಾಗೂ ಯಶಸ್ಸು ಕೂಡ ಸಿಗಲ್ಲ ಎನ್ನುವ ಸತ್ಯ ಅರಿತಿದ್ದ ವಿಜಯ್, ತನ್ನ ಇತಿ ಮಿತಿಯೊಳಗೆ ಇದ್ದಷ್ಟು ದಿನ ನಾಲ್ಕು ಜನರಿಗೆ ಮಾದರಿಯಾಗಿ ಬದುಕಿದ್ದಾನೆ. ಅಂತಹ‌ ಮಾನವತಾವಾದಿಯನ್ನು ತಮ್ಮ ಸಂಕುಚಿತ ಮನೋಭಾವ ದಿಂದ ನೋಡಬೇಡಿ" ಎಂದಿದ್ದಾರೆ.

    ಅದು ಗೊತ್ತು, ಇದು ಗೊತ್ತು ಎಂದು ಬಡ್ಕೋಬೇಡಿ

    ಅದು ಗೊತ್ತು, ಇದು ಗೊತ್ತು ಎಂದು ಬಡ್ಕೋಬೇಡಿ

    "ಮತ್ತೊಂದು, ಕೆಲ ನಟ/ ನಟಿಯರು ವಿಜಯ್ ಗೆ ನಾನು ತುಂಬಾ ಹತ್ತಿರ ಇದ್ದೆ, ನನಗೆ ಅದು ಗೊತ್ತು, ಇದು ಗೊತ್ತು, ಅವನು ಅನುಭವಿಸಿದ ಅವಮಾನವೆಲ್ಲಾ ಗೊತ್ತು, ಎಂದು ಬಾಯಿ ಬಡ್ಕೋಬೇಡಿ. ವಿಜಯ್ ಆತ್ಮೀಯರು ಮತ್ತು ಬಂದು ಬಳಗ ಇನ್ನೂ ಬದುಕಿದ್ದಾರೆ, ಯಾರು ಹತ್ತಿರ ಇದ್ದವರು? ಯಾರು ಕಷ್ಟದಲ್ಲಿ ಆದವರು? ಎಲ್ಲವೂ ಗೊತ್ತಿದೆ" ಎಂದು ಲಿಂಗದೇವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    'ನಾನು ಅವನಲ್ಲ ಅವಳು' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

    'ನಾನು ಅವನಲ್ಲ ಅವಳು' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

    "ವಿಜಯ್ ಕನ್ನಡಿಗರ ಮನೆ ಮನೆಗಳಲ್ಲಿ ಶಾಶ್ವತವಾಗಿ ಇದ್ದಾನೆ ಎನ್ನುವುದಕ್ಕೆ 'ನಾನು ಅವನಲ್ಲ ಅವಳು' ಚಿತ್ರ ಯು ಟ್ಯೂಬ್ ನಲ್ಲಿ ಬಿಡುಗಡೆಯಾದ ಕೇವಲ ನಾಲ್ಕು ದಿನಕ್ಕೆ ಸುಮಾರು 17 ಲಕ್ಷ ಜನ ನೋಡಿದ್ದಾರೆ, ಇದು ಅಧಿಕೃತ ವಾಗಿ ಸಿರಿ ಕನ್ನಡ ಚಾನಲ್ ನವರ ಯು ಟ್ಯೂಬ್ ನಲ್ಲಿನ ಸಂಖ್ಯೆ. ಅನಧಿಕೃತವಾಗಿ ಅಪ್ಲೋಡ್ ಆಗಿದ್ದ ಲಿಂಕ್ ಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಕಳೆದ ಒಂದು ವಾರದಲ್ಲಿ ನೋಡಿದ್ದಾರೆ. ವೀಕ್ಷಕರ ಸಂಖ್ಯೆಯನ್ನು ನೋಡಿ ಈಗ ಹೇಗೆ ಪ್ರತಿಕ್ರಿಯಿಸಬೇಕು ಅಂತಲೇ ತಿಳಿಯುತ್ತಿಲ್ಲ. ಸಿನಿಮಾ ನೋಡಿದ ಎಲ್ಲರೂ ವಿಜಯ್ ಮೇಲಿಟ್ಟ ಅಭಿಮಾನವನ್ನು ತೋರಿಸುತ್ತದೆ" ಎಂದಿದ್ದಾರೆ.

    Recommended Video

    Sanchari Vijay ಬಗ್ಗೆ ಅವರ ಸಹೋದರ ಹೇಳೋದೇನು | Filmibeat Kannada
    ಒಡೆದು ಆಳುವ ನೀತಿಗೆ ಪುಷ್ಟಿ ಕೊಟ್ಟಿರುವ ಲೇಖನಕ್ಕೆ ನನ್ನ ದಿಕ್ಕಾರ

    ಒಡೆದು ಆಳುವ ನೀತಿಗೆ ಪುಷ್ಟಿ ಕೊಟ್ಟಿರುವ ಲೇಖನಕ್ಕೆ ನನ್ನ ದಿಕ್ಕಾರ

    "ಒಂದು ವೇಳೆ ಈಗ ವಿಜಯ್ ಇದ್ದಿದ್ದರೆ ಎಂದು ಒಂದು ಕ್ಷಣ ಅನ್ನಿಸುತ್ತದೆ. ಒಬ್ಬ ನಿರ್ದೇಶಕನಾಗಿ ನನಗೆ ನಾನು ಅವನಲ್ಲ ಅವಳು ಸಿನಿಮಾ ಮುಖ್ಯ, ಅದೇ ವೇಳೆ ವಿಜಯ್ ನಟಿಸಿರದಿದ್ದರೆ ಆ ಸಿನಿಮಾ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿತ್ತು ಎಂದು ಊಹಿಸುವುದು ಕೂಡ ಕಷ್ಟವಾಗುತ್ತದೆ. ನನಗೆ ಈಗಲೂ ಅನ್ನಿಸುವುದು ಒಂದೇ, ವಿಜಯ್ ನಮ್ಮ ಜೊತೆ ಇರಬೇಕಿತ್ತು. ಜಾತಿ ವ್ಯವಸ್ಥೆಯನ್ನು ಸರಕನ್ನಾಗಿಸಿಕೊಂಡು, ಒಡೆದು ಆಳುವ ನೀತಿಗೆ ಪುಷ್ಟಿ ಕೊಟ್ಟಿರುವ ಲೇಖನಕ್ಕೆ ನನ್ನ ದಿಕ್ಕಾರ" ಎದು ಲಿಂಗದೇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    English summary
    BS Lingadevaru Fires on Those Who Spreading false information about Sanchari Vijay.
    Tuesday, June 22, 2021, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X