twitter
    For Quick Alerts
    ALLOW NOTIFICATIONS  
    For Daily Alerts

    ತಮ್ಮನ್ನು ಚಿಂತನೆಗೊಳಪಡಿಸುವ ಚಿತ್ರಗಳಿಗಾಗಿ ಪ್ರೇಕ್ಷಕರು ಚಲನಚಿತ್ರೋತ್ಸವಕ್ಕೆ ಬರ್ತಾರೆ: ಬಿ.ಎಸ್.ಲಿಂಗದೇವರು

    By ಬಿ.ಎಸ್.ಲಿಂಗದೇವರು
    |

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಚರ್ಚೆ ಆಗುತ್ತಿದೆ ಅಂತ ನನ್ನ ಭಾವನೆ. ಅದು ಸಿನಿಮಾಗಳ ಆಯ್ಕೆ ಇರಬಹುದು, ಫಿಲಂ ಬಜಾರ್ ಇರಬಹುದು, ಬುಕ್ ಮೈ ಶೋ ಹೀಗೆ ಹಲವು ವಿಷಯಗಳಲ್ಲಿ ಚರ್ಚೆ ಆಗುತ್ತಿದೆ.

    Recommended Video

    ನನ್ನ ಸಿನಿ ಪಯಣ ಆರಂಭವಾಗಿದ್ದೇ ಕರ್ನಾಟಕದಿಂದ | Boney Kapoor | Filmibeat Kannada

    ಜಗತ್ತಿನಲ್ಲಿ ಈ ಚಲನಚಿತ್ರೋತ್ಸವಗಳು ಹುಟ್ಟಿಕೊಂಡಿದ್ದೇ ವ್ಯಾಪಾರಿ ದೃಷ್ಟಿಕೋನ ಇಟ್ಟುಕೊಳ್ಳದೆ ಇರುವ ಸಿನಿಮಾಗಳಿಗೆ. ತನ್ನ ಸಂಸೃತಿಯನ್ನ, ಪರಂಪರೆಯನ್ನ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಸೃಜನಾತ್ಮಕವಾಗಿ ಹೇಳುವ ಮತ್ತು ಸಾಂಪ್ರದಾಯಿಕ ಪ್ರದರ್ಶನ ವ್ಯವಸ್ಥೆಯಿಂದ ವಂಚಿತಗೊಳಪಟ್ಟ ಸಿನಿಮಾಗಳಿಗೆ ಮಾತ್ರ ಅನ್ನುವುದು ಸತ್ಯ. ಸಿನಿಮಾವನ್ನು ಒಂದು ಕಲೆಯಾಗಿ ಪರಿಗಣಿಸಿ, ಕೇವಲ ಮನರಂಜನೆ ದೃಷ್ಟಿಯಿಂದ ನೋಡದೆ, ಸಿನಿಮಾಗಳು ಸಮಾಜವನ್ನು ಚಿಂತನೆ ಮಾಡುವಂತೆ ಮಾಡುವ ಮಾಧ್ಯಮ ಮತ್ತು ಸಿನಿಮಾ ಎನ್ನುವುದು ಎಲ್ಲಾ ಕಲಾಪ್ರಕಾರಗಳ ಸಂಯೋಜಿತ ಕಲೆ ಎಂದು ಅಭಿವ್ಯಕ್ತ ಪಡಿಸುವ ಸಿನಿಮಾಗಳಿಗೆ ಮಾತ್ರ ಚಲನಚಿತ್ರೋತ್ಸವಗಳು ವೇದಿಕೆ ಆಗಿರುವ ಇತಿಹಾಸ ನಮ್ಮ ಮುಂದೆ ಇದೆ.

    bs-lingadevaru-opinion-about-12th-bengaluru-international-film-festival

    ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಸಿನಿಮಾಗಳು ಆಯಾ ರಾಜ್ಯದ, ದೇಶದ ಅಸ್ಮಿತೆಯಾಗಿರುತ್ತವೆ ಮತ್ತು ಅಲ್ಲಿನ ಪ್ರಾದೇಶಿಕತೆಗೆ ಹೆಚ್ಚು ಒತ್ತು ಕೊಟ್ಟು ಅಭಿವ್ಯಕ್ತಿಗಾಗಿಯೇ ಸಿನಿಮಾ ಆಗಿರುತ್ತದೆ ವಿನಃ ವ್ಯವಹಾರಿಕ ನೆಲೆ ಇರಲ್ಲ. ಸಿನಿಮಾ ತೋರಿಸುವ ಉದ್ದೇಶ ಇದ್ದರೂ ಕೂಡ, ಪ್ರದರ್ಶನ ಅನ್ನೋದು ವ್ಯವಹಾರಿಕ ನೆಲೆ ಆದರೂ ಸಹ, ಮೂಲ ಉದ್ದೇಶ ವ್ಯವಹಾರಿಕ ನೆಲೆಯ ಸಿನಿಮಾ ಮಾಡೋದು ಅಲ್ಲ. ವ್ಯವಹಾರದೊಳಗೆ ಆ ನಿರ್ದೇಶಕ ಕೆಲಸ ಮಾಡುತ್ತಾನೆ ಹೊರತು ವ್ಯವಹಾರಿಕ ನೆಲೆಗಾಗಿಯೇ ಸಿನಿಮಾ ಮಾಡಲ್ಲ. ಪ್ರಪಂಚದಲ್ಲಿ ಈ ರೀತಿಯ ಸಿನಿಮಾಗಳಿಗೆ Art house ಸಿನಿಮಾ ಅಥವಾ ಕಲಾತ್ಮಕ ಸಿನಿಮಾಗಳು ಎಂದು ಕರೆದರು ಮತ್ತು ಅವುಗಳನ್ನು Indie films ಅಂತಲೂ ಕರೆದರು. (Independent films). ಈಗ ಒಳ್ಳೆಯ ಅಥವ ಕೆಟ್ಟ ಸಿನಿಮಾ ಅಷ್ಟೇ ಅನ್ನುವ ಮಟ್ಟಕ್ಕೆ ಬಂದು ನಿಂತಿದ್ದರೂ ಸಹ, ಕಲಾತ್ಮಕ ಮತ್ತು ವ್ಯಾಪಾರಿ ಸಿನಿಮಾ ಎನ್ನುವ ವರ್ಗೀಕರಣ ಬೇಕೆ ಬೇಕು ಎಂಬ ಭಾವನೆ ನನ್ನದು. ಅದು ಚಲನಚಿತ್ರೋತ್ಸವದಲ್ಲಿನ ಸಿನಿಮಾಗಳ ಆಯ್ಕೆಗಾಗಿ ಮಾತ್ರ.

    ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬರ್ತಾರೆ ಸೋನು ನಿಗಮ್ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಬರ್ತಾರೆ ಸೋನು ನಿಗಮ್

    ಪ್ರಪಂಚದಲ್ಲಿ ಮೊದಲ ಚಿತ್ರೋತ್ಸವ ನಡೆದದ್ದು ಇಟಲಿಯ ವೆನಿಸ್ ನಲ್ಲಿ, 87 ವರ್ಷಗಳ ಹಿಂದೆ. ವೆನಿಸ್ ನಲ್ಲಿ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳೇ ಪ್ರದರ್ಶನ ಆಗ್ತಾ ಇದ್ದ ಕಾಲ ಅದು. ಆಗ ಅಲ್ಲಿನ ಸರ್ಕಾರ, ಸ್ಥಳೀಯವಾಗಿ ಸಿನಿಮಾ ಸಂಸ್ಕ್ರತಿಯನ್ನು ಹುಟ್ಟು ಹಾಕಲು ನಿರ್ಧರಿಸಿ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಾರಂಭ ಮಾಡಿತು. ನಂತರದ ದಿನಗಳಲ್ಲಿ, ಈಗ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರೋತ್ಸವಗಳು ನಡೆಯುತ್ತಿವೆ. ಅವುಗಳಲ್ಲಿ ಕಾನ್, ಬರ್ಲಿನ್, ಟೋರಾಂಟೊ, ಬೂಸಾನ್, ರೈನ್ ಡ್ಯಾನ್ಸ್ ಇತ್ಯಾದಿ ಚಿತ್ರೋತ್ಸವಗಳು ಪ್ರಮುಖವಾಗಿದ್ದರೆ, ಭಾರತದಲ್ಲಿ ಗೋವಾದಲ್ಲಿನ IFFI, ಕೋಲ್ಕತಾದ KIFF, ತಿರುವನಂತಪುರಂನಲ್ಲಿನ IFFK. ಮುಂಬಯಿನಲ್ಲಿನ MAMI ಮತ್ತು ಬೆಂಗಳೂರಿನ BIFFes ಚಿತ್ರೋತ್ಸವಗಳು ಪ್ರಮುಖವಾಗಿವೆ. ಇವೆಲ್ಲ ಚಿತ್ರೋತ್ಸವಗಳನ್ನ ಕೈ ಹಿಡಿದು ಮುನ್ನೆಡೆಸಿದ್ದು ಫಿಲಂ ಸೊಸೈಟಿ ಮತ್ತು ಫಿಲ್ಮ್ ಕ್ಲಬ್ಗಳು ಎನ್ನುವುದನ್ನು ಮರೆಯಬಾರದು. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಬಂದಿದ್ದು ಸಹ ಸುಚಿತ್ರ ಫಿಲ್ಮ್ ಸೊಸೈಟಿ ಮುಖಾಂತರ.

    bs-lingadevaru-opinion-about-12th-bengaluru-international-film-festival

    12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಗಳ ಪಟ್ಟಿ12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಗಳ ಪಟ್ಟಿ

    ಕಳೆದ ಕೆಲ ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ನವರ ಸರ್ಕಾರ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆ ಮಾಡಿ ಮತ್ತು ಚಲನಚಿತ್ರೋವಗಳ ಮಹತ್ವವನ್ನು ಅರಿತು ಇಲ್ಲಿಯೂ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿತು. ಸುಚಿತ್ರದವರು ನಡೆಸುವಾಗ "ಪ್ರಪಂಚವೇ ಬೆಂಗಳೂರಿನಲ್ಲಿ " (World in Bengaluru) ಎನ್ನುವ ಅಡಿಬರಹದೊಂದಿಗೆ ಇದ್ದಿದ್ದರ ಜೊತೆ "ಜಗತ್ತಿಗೆ ಬೆಂಗಳೂರು" (Bengaluru to the world) ಎಂದು ಸೇರಿಸಲಾಯಿತು.

    ಬೆಂಗಳೂರು ಚಿತ್ರೋತ್ಸವದ ಬಗ್ಗೆ ಬೇಸರ ಹೊರಹಾಕಿದ ಕವಿರಾಜ್ಬೆಂಗಳೂರು ಚಿತ್ರೋತ್ಸವದ ಬಗ್ಗೆ ಬೇಸರ ಹೊರಹಾಕಿದ ಕವಿರಾಜ್

    bs-lingadevaru-opinion-about-12th-bengaluru-international-film-festival

    ದಿನಗಳು ಉರುಳಿದಂತೆ ಚಿತ್ರೋತ್ಸವಗಳ ಬೆಳವಣಿಗೆ ಆಯ್ತು ಮತ್ತು ವ್ಯಾಪಾರಿ ಚಿತ್ರಗಳು ಸಹ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಪ್ರಾರಂಭ ಆಯಿತು. ಪ್ರಪಂಚದ ಅತ್ಯಂತ ದೊಡ್ಡ ಚಿತ್ರೋತ್ಸವಗಳಲ್ಲಿ ಒಂದಾದ ಕಾನ್ ಚಿತ್ರೋತ್ಸವದಲ್ಲಿ ಸುಮಾರು 1500 ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಆಗುತ್ತಿವೆ. ಆದರೆ ಅಧಿಕೃತವಾಗಿ ಆಯ್ಕೆಗೊಂಡು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಇರೋದು 100 ಮಾತ್ರ. ಈ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಮತ್ತು ಮನ್ನಣೆ ಮಿಕ್ಕೆಲ್ಲವೂ ಪ್ರದರ್ಶನ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ. ಭಾರತದಲ್ಲೂ ಸಹ ಇಂಡಿಯನ್ ಪನೋರಮಾದಲ್ಲಿ ಪ್ರದರ್ಶನಗೊಳ್ಳುವ ಒಟ್ಟು 26 ಸಿನಿಮಾಗಳಲ್ಲಿ 21 ಸಿನಿಮಾಗಳು ಸಮಿತಿಯಿಂದ ಆಯ್ಕೆಗೊಂಡು ಉಳಿದ 5 ಸಿನಿಮಾಗಳು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದವರು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡ ಸಿನಿಮಾಗಳನ್ನು ಕಳುಹಿಸುತ್ತಾರೆ. ಆದರೆ ಆ 5 ಸಿನಿಮಾಗಳು ಸ್ಪರ್ಧೆಯಲ್ಲಿ ಇರಲ್ಲ ಮತ್ತು ಪ್ರಶಸ್ತಿಗೆ ಅರ್ಹತೆ ಪಡೆಯಲ್ಲ.

    'ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದ ವಿರುದ್ಧ ನಿರ್ದೇಶಕ ಮಂಸೋರೆ ಬೇಸರ'ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದ ವಿರುದ್ಧ ನಿರ್ದೇಶಕ ಮಂಸೋರೆ ಬೇಸರ

    ಚಿತ್ರೋತ್ಸವಗಳ ಬೆಳವಣಿಗೆ, ಮೂಲ ಆಶಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾನ್ ಚಿತ್ರೋತ್ಸವ ನಡೆಯುತ್ತಿದೆ ಎನ್ನುತ್ತಾರೆ ಹಿರಿಯರು ಮತ್ತು ಅವರು ಕೊಟ್ಟ ಉದಾಹರಣೆ, ನಮ್ಮೂರಿನ ಜಾತ್ರೆಗಳು. ಜನ ಸೇರಬೇಕು ಅಂತ ಚಲನಚಿತ್ರ ನಟ ನಟಿಯರನ್ನ ಕರೆಸುವ ಮತ್ತು ಆರ್ಕೆಸ್ಟ್ರಾ ಅಥವಾ ಮುಂತಾದ ಮನರಂಜನೆ ಕಾರ್ಯ ಕ್ರಮಗಳನ್ನು ಕೇವಲ ಆಕರ್ಷಣೆಗಾಗಿ, ಜನರನ್ನು ಜಾತ್ರೆಗೆ ಕರೆತರಲು ಇತ್ತೀಚಿನ ದಿನಗಳಲ್ಲಿ ಮಾಡುತ್ತಿದ್ದಾರೆ. ಬಂದ ಜನಗಳಲ್ಲಿ ದೇವರ ದರ್ಶನ ಮಾಡದೇ ಮನರಂಜನಾ ಕಾರ್ಯಕ್ರಮಗಳನ್ನು ನೋಡಿ ಹೋಗುವವರೂ ಇದ್ದಾರೆ. ಆದರೆ ನಿಜವಾದ ಭಕ್ತರು ದೇವರ ದರ್ಶನ ಮಾಡಿ ಮನಸ್ಸು ಇದ್ದರೆ ಮನರಂಜನಾ ಕಾರ್ಯಕ್ರಮ ನೋಡಿ ಹೋಗುತ್ತಾರೆ. ಹಾಗೆಯೇ ಚಲನಚಿತ್ರ್ರೋವಗಳಲ್ಲಿ ಅಧಿಕೃತವಾಗಿ ಆಯ್ಕೆಗೊಂಡ ಸಿನಿಮಾಕ್ಕಾಗಿಯೇ ಪ್ರೇಕ್ಷಕರಿದ್ದಾರೆ ಮತ್ತು ಅವರು ಬಯಸುವುದು ವ್ಯಾಪಾರಿ ಚಿತ್ರಗಳನ್ನು ಅಲ್ಲ ಎನ್ನುವುದು ಸತ್ಯ.

    ಈಗ ನಮ್ಮ ಮುಂದಿರುವ ಪ್ರಶ್ನೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮೂಲ ಆಶಯ ಮತ್ತು ಮೌಲ್ಯವನ್ನು ಉಳಿಸಿಕೊಂಡು ಇದೆಯೇ?

    ಸರ್ಕಾರದ ಸಹಾಯದಿಂದ ನಡೆಯುತ್ತಿರುವ ಚಿತ್ರೋತ್ಸವ ಇದಾಗಿರುವುದರಿಂದ ಕೆಲವು ಮಾರ್ಪಾಡು ಸಹಜವಾಗಿ ಬಂದಿವೆ. ಉದಾಹರಣೆಗೆ, ಕಲಾತ್ಮಕ ಚಿತ್ರಗಳಿಗೆ ಸೀಮಿತವಾಗಿದ್ದ ಚಿತ್ರೋತ್ಸವದಲ್ಲಿ ವ್ಯಾಪಾರಿ ನೆಲೆಯ ಸಿನಿಮಾಗಳಿಗೂ ಅವಕಾಶ ಮತ್ತು ಪ್ರಶಸ್ತಿ! ಇದು ಸಾಧ್ಯವಾಗಿದ್ದು ನಮ್ಮ ಚಂದನವನದವರೇ ರಾಜಕೀಯ ಒತ್ತಡವನ್ನು ತಂದಿದ್ದರ ಫಲ ಎಂಬ ನಂಬಿಕೆ ನನ್ನದು. ಜಗತ್ತಿನ ಯಾವುದೇ ಚಲನಚಿತ್ರೋತ್ಸವದಲ್ಲಿ ಈ ರೀತಿಯ ಸಿನಿಮಾಗಳಿಗೆ ಪ್ರಶಸ್ತಿ ಇಲ್ಲ ಎಂದು ನಾನು ಭಾವಿಸುತ್ತೇನೆ. ತಪ್ಪಿದ್ದರೆ ಕ್ಷಮೆ ಇರಲಿ. ಕರ್ನಾಟಕದಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಚಲನಚಿತ್ರಗಳ ಆಯ್ಕೆ ಮಾಡೋದು? ಸುಮಾರು 400 ಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣ ಆಗುತ್ತಿರುವ ಈ ಕಾಲಘಟ್ಟದಲ್ಲಿ ಮಾರುಕಟ್ಟೆಗೆ ಬರದೆ ಇರುವ ಸಿನಿಮಾಗಳೆಲ್ಲಾ ಕಲಾತ್ಮಕ ಸಿನಿಮಾಗಳು ಎಂದು ವಾದ ಮಾಡಿ, ಆಯ್ಕೆ ಆಗದಿದ್ದರೆ ಕೋರ್ಟ್ ಕೇಸ್ ಕೂಡ ಹಾಕುತ್ತಿದ್ದಾರೆ.! ನಮ್ಮ ಕನ್ನಡ ಸಿನಿಮಾಗಳ ವಸ್ತು/ಕತೆ ಮಾತ್ರ ಶ್ರೇಷ್ಠವಾಗಿರುತ್ತದೆ. ಆದರೆ ಹೇಳುವ ಕ್ರಮ, ನಿರೂಪಣೆ ಶೈಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಲ್ಲುವುದಿಲ್ಲ ಎಂಬುದನ್ನು ಅನೇಕ ಹಿರಿಯರು ಹೇಳುತ್ತಾರೆ. ಹೀಗಿದ್ದರೂ ನಮ್ಮ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕೆಲ ಕನ್ನಡ ಸಿನಿಮಾಗಳನ್ನು ಅಂತರರಾಷ್ಟ್ರೀಯ ಜ್ಯೂರಿಗಳು ಮತ್ತು NETPAC ಜ್ಯೂರಿಗಳು ವೀಕ್ಷಿಸುವುದರಿಂದ ಹಲವು ದೇಶಗಳಲ್ಲಿ ಪ್ರದರ್ಶನ ಆಗಿವೆ ಅನ್ನೋದು ಹೆಮ್ಮೆಯ ವಿಷಯ.

    ದೃಶ್ಯ ಮಾಧ್ಯಮದ ಸಾಧ್ಯತೆಗಳನ್ನು ಹೊಸ ರೀತಿಯಲ್ಲಿ ಹುಡುಕುವ ಮತ್ತು ಶೋಧನ ಮನೋಭಾವ ಇಟ್ಟುಕೊಂಡು, ಕೇವಲ ತಂತ್ರಜ್ಞಾನದ ಸಹಾಯದಿಂದ ವೈಭವೀಕರಿಸದೆ ಕತೆಗಳಲ್ಲಿ ಹೆಚ್ಚು ತಮ್ಮ ಪ್ರಾದೇಶಿಕ ತೆಗೆ ಒತ್ತು ಕೊಟ್ಟರೆ ಚಲನಚಿತ್ರೋತ್ಸವಗಳ ಮುಖಾಂತರ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡತನವನ್ನ ಪ್ರತಿನಿಧಿಸುವುದರ ಜೊತೆಗೆ ವೃತ್ತಿಯಲ್ಲೂ ವೈಯಕ್ತಿಕ ಬೆಳವಣಿಗೆ ಸಾಧ್ಯ ಎಂದು ನಂಬಿದ್ದೇನೆ.

    ಈಗ ಆಗಿರುವ ಆಯ್ಕೆಯನ್ನು ಯಾರೂ ಪ್ರಶ್ನೆ ಮಾಡಲು ಬರುವುದಿಲ್ಲ ಮತ್ತು ಮಾಡಬಾರದು ಕೂಡ. ಆದರೆ ಚಿತ್ರೋತ್ಸವದ ಮೂಲ ಆಶಯ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವ ಚಲನಚಿತ್ರಗಳು ಆಯ್ಕೆ ಆಗಿದ್ದಾವೆಯೇ ಎಂದು ಅಕಾಡೆಮಿ ಚಿಂತನೆ ಮಾಡಿಲಿ ಮತ್ತು ಸಾರ್ವಜನಿಕರಿಗೂ ನೋಡುವ ಅವಕಾಶ ಇರುವುದರಿಂದ ಅವರೂ ಕೂಡ ತುಲನೆ ಮಾಡುತ್ತಾರೆ.

    ಕೊನೆಯ ಮಾತು, ವ್ಯಾಪಾರಿ ನೆಲೆಯಲ್ಲಿ ನಿರ್ಮಾಣವಾದ ಸಿನಿಮಾಗಳು ಅನ್ನುವ ಕಾರಣಕ್ಕೆ ಅವುಗಳನ್ನು ವಿರೋಧ ಮಾಡಲು ಬರುವುದಿಲ್ಲ. ಆದರೆ ಈಗಾಗಲೇ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿದ ಚಿತ್ರಗಳಿಗೇ ಚಲನಚಿತ್ರೋತ್ಸವದಲ್ಲೂ ವೇದಿಕೆ ಕೊಡುವಾಗ ಅವುಗಳ ಪ್ರಮಾಣವನ್ನು ಸಂಬಂಧಪಟ್ಟವರು ಆಯ್ಕೆ ಸಮಿತಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಇರುತ್ತದೆ.

    ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರು ಬರುವುದು ಮನರಂಜನೆಗಾಗಿ ಅಲ್ಲ, ತಮ್ಮನ್ನು ಚಿಂತನೆಗೊಳಪಡಿಸುವ ಚಿತ್ರಗಳಿಗಾಗಿ.
    - ಬಿ.ಎಸ್.ಲಿಂಗದೇವರು.

    English summary
    BS Lingadevaru opinion about 12th Bengaluru Internation Film Festival.
    Sunday, February 23, 2020, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X