For Quick Alerts
  ALLOW NOTIFICATIONS  
  For Daily Alerts

  ಯಡಿಯೂರಪ್ಪ ಸಿಎಂ.! ಈ ಸಿನಿಮಾ ಸ್ಟಾರ್ ಗಳಿಗೆ ಫುಲ್ ಖುಷ್

  |

  Recommended Video

  ಯಡಿಯೂರಪ್ಪ CM ಆಗಿದ್ದಕ್ಕೆ ಖುಷಿಯಾಧ ಸ್ಯಾಂಡಲ್ ವುಡ್..? | Oneindia Kannada

  ಬಿಎಸ್ ಯಡಿಯೂರಪ್ಪ ಮೂರು ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರೂ ಪೂರ್ಣಾವಧಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಮತ್ತೆ ಯಡಿಯೂರಪ್ಪ ಸಿಎಂ ಆಗಬೇಕು ಎಂಬ ಆಸೆ, ಕೋರಿಕೆ, ಬೇಡಿಕೆ ಅನೇಕರಲ್ಲಿತ್ತು. ಆ ಅದ್ಭುತ ಕ್ಷಣ ಈಗ ಬಂದಿದೆ.

  2018ರ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರ್ಕಾರ ರಚಿಸಲು ಅವಕಾಶ ಪಡೆದುಕೊಂಡು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ಕೊಟ್ಟಿದ್ದರು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿತು.

  ಸಂಜೆ ಆರು ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

  ಆ ಕ್ಷಣದಿಂದ ಇಲ್ಲಿಯವರೆಗೂ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಈ ಸಿನಿಮಾ ಕಲಾವಿದರು ಕಾಯುತ್ತಿದ್ದಾರೆ. ಈಗ ಆ ಸಮಯ ಬಂದಿದೆ. ಇಂದು (ಜುಲೈ 26) ಸಂಜೆ ರಾಜಭವನದಲ್ಲಿ ಬಿಎಸ್ ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾಗಿ, ಸ್ಯಾಂಡಲ್ ವುಡ್ ಸ್ಟಾರ್ ಗಳ ಸಂಭ್ರಮ ಕೂಡ ಸ್ವಲ್ಪ ಜೋರಾಗಿದೆ. ನಮ್ಮ ನೆಚ್ಚಿನ ನಾಯಕರು ಸಿಎಂ ಆಗ್ತಿದ್ದಾರೆ ಎಂದು ಖುಷಿ ಪಡ್ತಿದ್ದಾರೆ. ಅಷ್ಟಕ್ಕೂ, ಯಾವೆಲ್ಲಾ ಸಿನಿ ಕಲಾವಿದರಿಗೆ ಇದು ಖುಷಿ ಕೊಟ್ಟಿದೆ. ಮುಂದೆ ಓದಿ.....

  ಸಿಹಿ ತಿಂದು ಸಂಭ್ರಮಿಸಿದ ನಟಿ

  ಸಿಹಿ ತಿಂದು ಸಂಭ್ರಮಿಸಿದ ನಟಿ

  ಇತ್ತ ವಿಧಾನಸಭೆಯಲ್ಲಿ ಸಮ್ಮಿಶ್ರ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಾಣುತ್ತಿದ್ದಂತೆ, ನಟಿ ಮಾಳವಿಕಾ ಅವಿನಾಶ್ ಅವರು ಯಡಿಯೂರಪ್ಪ ಅವರ ಮನೆಗೆ ಓಡೋಡಿ ಹೋಗಿದ್ದರು. 'ನಮ್ಮ ನಾಯಕರು ಮತ್ತೆ ಸಿಎಂ ಆಗ್ತಿದ್ದಾರೆ ಎಂದು ಸಿಹಿ ತಿಂದು ಸಂಭ್ರಮಿಸಿ' ಬಂದಿದ್ದರು. ಅದಕ್ಕೂ ಮುಂಚೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎಲ್ಲಿಯೂ ಮಾಳವಿಕಾ ಕಾಣಿಸಿಕೊಂಡಿರಲಿಲ್ಲ.

  3 ಶಾಸಕರು ಅನರ್ಹ, ಬಿಎಸ್ವೈ ಸಿಎಂ, ಸದನದ ಬಲಾಬಲ?

  ನನ್ನ ನೆಚ್ಚಿನ ನಾಯಕ ಯಡಿಯೂರಪ್ಪ

  ನನ್ನ ನೆಚ್ಚಿನ ನಾಯಕ ಯಡಿಯೂರಪ್ಪ

  ಯಡಿಯೂರಪ್ಪ ನನ್ನ ನೆಚ್ಚಿನ ನಾಯಕರು ಎಂದು ಯಾವಾಗಲೂ ಹೇಳುವ ನಟ ಬುಲೆಟ್ ಪ್ರಕಾಶ್ ಅವರಿಗೆ ಈ ಸುದ್ದಿ ಸಂತಸ ತಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಹಾಸ್ಯ ನಟ ''ಇಂದು ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ನನ್ನ ನೆಚ್ಚಿನ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರಿಗೆ ಶುಭಾಶಯಗಳು'' ಎಂದು ಖುಷಿ ಹಂಚಿಕೊಂಡಿದ್ದಾರೆ.

  ಜಗ್ಗೇಶ್ ಫುಲ್ ಖುಷ್

  ಜಗ್ಗೇಶ್ ಫುಲ್ ಖುಷ್

  ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೊದಲ ಖುಷಿಯಾಗ್ತಿದ್ದ ಸಿನಿಮಾ ಕಲಾವಿದರಲ್ಲಿ ಜಗ್ಗೇಶ್ ಮೊದಲಿಗರು. 2018ರ ವಿಧಾನಸಭೆ ಚುನಾವಣೆಯಲ್ಲಿ ತಾನು ಸೋತರು, ಯಡಿಯೂರಪ್ಪ ಸಿಎಂ ಆಗಬಹುದು ಎಂಬ ನಂಬಿಕೆಯಲ್ಲಿದ್ದರು. ಆದರೆ, ಅಲ್ಲಿ ಅದೃಷ್ಟ ಕೈಹಿಡಿಯಲಿಲ್ಲ. ಆದ್ರೀಗ, ಮತ್ತೆ ಆ ಕ್ಷಣ ಬಂದಿದೆ. ಈ ಬಗ್ಗೆ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ನಾಡಿಗೆ ದೀನ ದಲಿತ ಅಲ್ಪಸಂಖ್ಯಾತ ರೈತಬಂಧುಗಳಿಗೆ ಕ್ಷೇಮ ಸ್ನೇಹಮಯವಾಗಿರಲಿ ನಿಮ್ಮ ನಾಯಕತ್ವ ಆಡಳಿತ ಎಂದು ಶುಭಹಾರುಸುವೆ.. ವಂದೇಮಾತರಮಂ..ಜೈಹಿಂದ್..'' ಎಂದು ಟ್ವೀಟ್ ಮಾಡಿದ್ದಾರೆ.


  ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ; ಸಿದ್ದರಾಮಯ್ಯ ಹೇಳಿದ್ದೇನು?

  ಶಿಲ್ಪಾ ಗಣೇಶ್ ಅದ್ಯಾಕೋ ಸೈಲೆಂಟ್

  ಶಿಲ್ಪಾ ಗಣೇಶ್ ಅದ್ಯಾಕೋ ಸೈಲೆಂಟ್

  ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತೆ ಶಿಲ್ಪಾ ಗಣೇಶ್ ಅದ್ಯಾಕೋ ಸೈಲೆಂಟ್ ಆಗಿದ್ದಾರೆ. ಬಿಜೆಪಿ ಹಾಗೂ ಮೋದಿ ಬಗ್ಗೆ ನಟಿ ರಮ್ಯಾ ಟೀಕಿಸಿದಾಗಲೆಲ್ಲ ಹೆಣ್ಣು ಹುಲಿಯಂತೆ ಘರ್ಜಿಸುತ್ತಿದ್ದ ಶಿಲ್ಪಾ ಗಣೇಶ್ ಅವರು, ಈಗ ಯಡಿಯೂರಪ್ಪ ಸಿಎಂ ಆಗ್ತಿದ್ದಾರೆ ಅಂದಾಗಲೂ ಸದ್ದಿಲ್ಲದೇ ಇದ್ದಾರೆ. ಆದರೂ, ಈ ಸುದ್ದಿ ಅವರಿಗೆ ಬಹಳ ಸಂತೋಷ ಕೊಟ್ಟಿದೆ ಎಂದು ಊಹಿಸಬಹುದು.

  ತಾರಾ-ಶ್ರುತಿ ಕನಸು ನನಸು

  ತಾರಾ-ಶ್ರುತಿ ಕನಸು ನನಸು

  ಹೇಗಾದರೂ ಮಾಡಿ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು, ಯಡಿಯೂರಪ್ಪ ಅವರನ್ನ ಸಿಎಂ ಮಾಡಬೇಕು ಎಂದು ಕನಸು ಕಂಡಿದ್ದವರಲ್ಲಿ ನಟಿ ಶ್ರುತಿ ಮತ್ತು ತಾರಾ ಕೂಡ ಇದ್ದಾರೆ. ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿರುವ ಯಡಿಯೂರಪ್ಪ ಅವರಿಗೆ ಇವರಿಬ್ಬರ ಶುಭಾಶಯ ಆಗಾಗಲೇ ತಲುಪಿರಬಹುದು.

  ಸಮ್ಮಿಶ್ರ ಸರ್ಕಾರ ಪತನದ ನಂತರ ಜಗ್ಗೇಶ್ ಹೇಳಿದ್ದೇನು?ಸಮ್ಮಿಶ್ರ ಸರ್ಕಾರ ಪತನದ ನಂತರ ಜಗ್ಗೇಶ್ ಹೇಳಿದ್ದೇನು?

  ರಾಗಿಣಿ-ರಕ್ಷಿತಾಗೂ ಖುಷಿ ಆಗಿರಬಹುದು.!

  ರಾಗಿಣಿ-ರಕ್ಷಿತಾಗೂ ಖುಷಿ ಆಗಿರಬಹುದು.!

  ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿರುವುದು ನಟಿ ರಕ್ಷಿತಾ ಪ್ರೇಮ್ ಗೆ ಕೂಡ ಖುಷಿ ಕೊಟ್ಟಿದೆ. ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ, ಅಧಿಕೃತವಾಗಿ ಸೇರಿರಲಿಲ್ಲ. ಬಟ್, ಬಿಜೆಪಿ ಬಗ್ಗೆ ಒಲವು ಹೊಂದಿದ್ದ ರಾಗಿಣಿ ಅವರಿಗೆ, ಯಡಿಯೂರಪ್ಪ ಸಿಎಂ ಆಗೋದು ಸಂತಸ ತಂದಿರುತ್ತೆ.

  English summary
  Karnataka BJP leader B.S. Yeddyurappa will Take Oath as Chief Minister at 6 pm. so Actress Tara, shruthi, bullet prakash, jaggesh, malavika abinash is the most happiest persons in film industry
  Friday, July 26, 2019, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X