»   » ಕೆಟ್ಟ ಸಿನಿಮಾ ಸಾರಾ ಸಗಟಾಗಿ ತಿರಸ್ಕರಿಸಿ

ಕೆಟ್ಟ ಸಿನಿಮಾ ಸಾರಾ ಸಗಟಾಗಿ ತಿರಸ್ಕರಿಸಿ

Posted By:
Subscribe to Filmibeat Kannada

ಚಿಕ್ಕಮಗಳೂರು: ಕಳಪೆ ಚಿತ್ರಗಳನ್ನೂ ಭ್ರಷ್ಟ ರಾಜಕಾರಣಿಗಳನ್ನೂ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಪದ್ಮಭೂಷಣ ಪ್ರಶಸ್ತಿ ವಿಜೇತ ಹಿರಿಯ ನಟಿ ಬಿ. ಸರೋಜಾದೇವಿ ಜನತೆಗೆ ಕರೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಭವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಸರೋಜಾ ದೇವಿ ಕನ್ನಡ ಚಿತ್ರರಂಗ ಹಾದಿ ತಪ್ಪುತ್ತಿರುವ ಬಗೆಗೆ ವಿಷಾದ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿ ವಿಶ್ವ ಶ್ರೇಷ್ಠವಾಗಿದ್ದು , ಜನರು ಹೋದಲ್ಲೆಲ್ಲ ಹಿಂದಿನಂತೆ ಈಗ ಉತ್ತಮ ಗುಣಮಟ್ಟದ ಚಿತ್ರ ಏಕೆ ಬರುತ್ತಿಲ್ಲ ಎಂದು ಕೇಳುತ್ತಾರೆ. ಆದರೆ, ಕಳಪೆ ಚಿತ್ರಗಳನ್ನು ಜನರೇ ತಿರಸ್ಕರಿಸುವುದಿಲ್ಲ ಎಂದು ಸರೋಜಾದೇವಿ ವಿಷಾದ ವ್ಯಕ್ತಪಡಿಸಿದರು.


ವಯಸ್ಸು ಹೆಚ್ಚಾಗಿರುವುದರಿಂದ ತಾವು ಇತ್ತೀಚೆಗೆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂದ ಮಾಜಿ ನಟಿ, ಹರಟೆ ಹಾಗೂ ಟೀವಿ ವೀಕ್ಷಣೆಯಿಂದ ಕಾಲ ಕಳೆಯುವುದಾಗಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಶುದ್ಥ ಕನ್ನಡ ಬಳಸುವಂತೆ ಮನವಿ ಮಾಡಿದರು. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡ ಮಾತನಾಡಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದು ಅವರು, ಇತರೆ ಭಾಷೆಗಳನ್ನು ದ್ವೇಷಿಸದೆ ತಾಯಿ ಭಾಷೆಗೆ ಪ್ರಥಮ ಆದ್ಯತೆ ನೀಡಿ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ಚಿಕ್ಕಮಗಳೂರು ಜಿಲ್ಲೆ ಕಸಾಪ ಅಧ್ಯಕ್ಷ ಅಜ್ಜಂಪುರ ಜಿ. ಸೂರಿ ಅವರ ಅನ್ವೇಶಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಪತ್ರಿಕೋದ್ಯಮದಲ್ಲಿ ಪ್ರಶಸ್ತಿ ಪಡೆದ ಸ. ಗಿರಿಜಾ ಶಂಕರ್‌ ಮತ್ತು ಗಿರಿಧರ್‌ ಯತೀಶ್‌ ಅವರನ್ನು ಸನ್ಮಾನಿಸಲಾಯಿತು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X