ಉಪ್ಪಿಯ 'ಬುದ್ಧಿವಂತ 2' ಸಿನಿಮಾ ನಾಳೆ ಲಾಂಚ್
ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಬಹಳ ಇಷ್ಟ ಆದ ಚಿತ್ರಗಳ ಪೈಕಿ 'ಬುದ್ಧಿವಂತ' ಕೂಡ ಒಂದು. ಉಪೇಂದ್ರ ಅವರ
ಆ ಸಿನಿಮಾದ ಡೈಲಾಗ್ ಇಂದಿಗೂ ಅಭಿಮಾನಿಗಳ ಚೆಪ್ಪಾಳೆ ಪಡೆಯುತ್ತದೆ.
ಈಗ ಅದೇ ಹೆಸರಿನಲ್ಲಿ ಉಪೇಂದ್ರ ಸಿನಿಮಾ ಮಾಡುತ್ತಿದ್ದಾರೆ. 'ಬುದ್ಧಿವಂತ 2' ಚಿತ್ರ ನಾಳೆ ಲಾಂಚ್ ಆಗುತ್ತಿದೆ. ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಸಿನಿಮಾ ಮುಹೂರ್ತ ನಡೆಯುತ್ತಿದೆ.

ನವ ನಿರ್ದೇಶಕ ಮೌರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೆ ಗುರುಕಿರಣ್ ಮತ್ತು ಉಪೇಂದ್ರ ಒಂದಾಗುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಮೌರ್ಯ ಹಾಡುಗಳನ್ನು ಬರೆಯಲಿದ್ದಾರೆ.
'ಅಯೋಗ್ಯ', 'ಚಮಕ್' ಹಾಗೂ 'ಬೀರ್ ಬಲ್' ಸಿನಿಮಾಗಳ ನಿರ್ಮಾಪಕ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.
ನಟ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಂಚತಂತ್ರ ನಟಿ ಸೋನಾಲ್ ಹಾಗೂ ಮೇಘನಾ ರಾಜ್ ಚಿತ್ರದ ನಾಯಕಿಯರಾಗಿದ್ದಾರೆ. 'ಬುದ್ಧಿವಂತ 2' ಎಂಬ ಹೆಸರಿನ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡದಾಗಿದೆ.
English summary
Real Star Upendra's 'Buddhivantha 2' kannada film will be launching tomorrow (May 24th).


Click it and Unblock the Notifications