ಮತ್ತೆ ಖೈದಿಯಾದ ರಿಯಲ್ ಸ್ಟಾರ್ ಉಪೇಂದ್ರ
Recommended Video
ನಟ ಉಪೇಂದ್ರ 'ಬುದ್ಧಿವಂತ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಫೋಟೋವೊಂದು ಬಹಿರಂಗವಾಗಿದೆ.
ಸಿನಿಮಾದಲ್ಲಿ ಉಪೇಂದ್ರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಉಪೇಂದ್ರ ಖೈದಿಯಾಗಿ ಕಾಣಿಸಿಕೊಂಡಿರುವ ಫೋಟೋ ರಿವೀಲ್ ಆಗಿದೆ. ಸದ್ಯ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನದಲ್ಲಿ ದೃಶ್ಯಗಳು ಮೂಡಿ ಬರುತ್ತಿವೆ.
ಈ ಹಿಂದೆ 'ಆರಕ್ಷಕ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಉಪೇಂದ್ರ ಖೈದಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ರಿಯಲ್ ಸ್ಟಾರ್ ಬಿಳಿ ಬಟ್ಟೆ ತೊಟ್ಟಿದ್ದಾರೆ. ಖೈದಿ ಪಾತ್ರ ಸಿನಿಮಾದ ಒಂದು ಭಾಗದಲ್ಲಿ ಮಾತ್ರ ಇರಲಿದೆಯೇ ಎನ್ನುವ ಕುತೂಹಲ ಇದೆ.

'ಬುದ್ಧಿವಂತ 2' ಚಿತ್ರದ ನಿರ್ದೇಶಕ ಬದಲಾಗಿದ್ದಾರೆ. ಜಯರಾಮ್ ಭದ್ರಾವತಿ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಟಿ ಆರ್ ಚಂದ್ರಶೇಖರ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.

'ಪಂಚತಂತ್ರ'ದ ಹುಡುಗಿ ಸೋನಾಲ್ ಹಾಗೂ ಮೇಘನಾ ರಾಜ್ ಸಿನಿಮಾದ ನಾಯಕಿಯರಾಗಿದ್ದಾರೆ. ಮೊದಲ ಬಾರಿಗೆ ಉಪೇಂದ್ರ ಜೊತೆಗೆ ಮೇಘನಾ ರಾಜ್ ನಟಿಸಿದ್ದಾರೆ.


Click it and Unblock the Notifications











