ಉಪೇಂದ್ರ ಹುಟ್ಟುಹಬ್ಬಕ್ಕೆ ಬುದ್ಧಿವಂತ 2 ಸಿನಿಮಾ ತಂಡದಿಂದ ಉಡುಗೊರೆ
ಉಪೇಂದ್ರ ರಾಜಕೀಯದ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರಕ್ಕೆ ಸವಾಲುಗಳು ಎಸೆದಿದ್ದ ಉಪೇಂದ್ರ, ಲಾಕ್‌ಡೌನ್ ಸಮಯ ಸದುಪಯೋಗದ ಬಗ್ಗೆ ಜನರಿಗೆ ಪಾಠವನ್ನೂ ಮಾಡಿದ್ದರು.
Recommended Video
ಇದೀಗ ಉಪೇಂದ್ರ ಗಮನ ಮತ್ತೆ ಸಿನಿಮಾದತ್ತ ಹೊರಳಿದಂತೆ ಕಾಣುತ್ತಿದೆ. ಉಪೇಂದ್ರ ಅವರ ಹುಟ್ಟುಹಬ್ಬ ಸಹ ಸನಿಹವಾಗುತ್ತಿದ್ದು, ಸಿನಿಮಾ ಕುರಿತಾದ ಹೊಸದೇನನ್ನಾದರೂ ಅಭಿಮಾನಿಗಳಿಗೆ ನೀಡುವ ಉಮೇದಿನಲ್ಲಿದ್ದಾರೆ.
ಉಪೇಂದ್ರ ಅವರ ಎರಡು ಸಿನಿಮಾಗಳು ಪ್ರಸ್ತುತ ಬಹುವಾಗಿ ಸದ್ದು ಮಾಡುತ್ತಿವೆ. ಕಬ್ಜ ಮತ್ತು ಬುದ್ಧಿವಂತ 2 ಸಿನಿಮಾ ಅತಿಯಾಗಿ ಕ್ರೇಜ್ ಹುಟ್ಟಿಸಿವೆ. ಎರಡೂ ಸಿನಿಮಾಗಳ ಚಿತ್ರೀಕರಣ ಬಹುತೇಕ ಅಂತ್ಯದಲ್ಲಿದ್ದು ಬಿಡುಗಡೆಗೆ ರೆಡಿಯಾಗಿದೆ.

ಉಡುಗೊರೆ ನೀಡಲಿದೆ ಬುದ್ಧಿವಂತ 2 ತಂಡ
ಇದೀಗ ಉಪೇಂದ್ರ ಅವರ ಹುಟ್ಟುಹಬ್ಬ ಸನಿಹವಾಗುತ್ತಿದ್ದು, ಬುದ್ಧಿವಂತ 2 ಸಿನಿಮಾ ತಂಡ ಅದೇ ದಿನ ಉಪೇಂದ್ರ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಲು ಸಜ್ಜಾಗಿದೆ.

ಸೆಪ್ಟೆಂಬರ್ 18 ರಂದು ಉಪೇಂದ್ರ ಹುಟ್ಟುಹಬ್ಬ
ಸೆಪ್ಟೆಂಬರ್ 18 ರಂದು ಉಪೇಂದ್ರ ಹುಟ್ಟುಹಬ್ಬವಿದ್ದು, ಅದೇ ದಿನ ಬುದ್ಧಿವಂತ 2 ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಪೋಸ್ಟರ್ ಮೇಲೆ ಹಲವು ರೀತಿಯ ಚರ್ಚೆಗಳು ನಡೆದಿವೆ.

ಮ್ಯಾಡ್‌ಮ್ಯಾಕ್ಸ್ ಸಿನಿಮಾದ ಕಾಪಿ
ಬುದ್ಧಿವಂತ 2 ಸಿನಿಮಾ ಪೋಸ್ಟರ್ ಮ್ಯಾಡ್‌ಮ್ಯಾಕ್ಸ್ ಫ್ಯೂರಿ ರೋಡ್ ಸಿನಿಮಾದ ಪೋಸ್ಟರ್‌ನ ಕಾಪಿ ಎನ್ನಲಾಗುತ್ತಿದೆ. ಪೋಸ್ಟರ್ ನೋಡಿದರೆ ಇದು ನಿಜ ಎನಿಸದೇ ಇರದು. ಮ್ಯಾಡ್‌ಮ್ಯಾಕ್ಸ್ ಸಿನಿಮಾದ ನಾಯಕನಂತೆ ಮುಖಕ್ಕೆ ಕಬ್ಬಿಣದ ಸರಳು ಹಾಕಿಕೊಂಡು ಒಂದು ಕೈಯಲ್ಲಿ ಬಂದೂಕು ಹಿಡಿದು ನಿಂತಿದ್ದಾರೆ ಉಪೇಂದ್ರ.

ಕಬ್ಜ ಸಿನಿಮಾ ಸಹ ಕುತೂಹಲ ಕೆರಳಿಸಿದೆ
ಇನ್ನು ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಸಹ ಸಾಕಷ್ಟು ಕುತೂಹಲ ಕೆರಳಿಸಿದೆ. ಆರ್.ಚಂದ್ರು ನಿರ್ದೇಶನದ ಈ ಸಿನಿಮಾ, ಭೂಗತ ಲೋಕದ ಕತೆ ಹೊಂದಿದೆ. ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಕಾಜಲ್ ಅನ್ನು ಸಂಪರ್ಕಿಸಲಾಗಿತ್ತು, ಆದರೆ ಕಾಜಲ್ ಒಲ್ಲೆ ಎಂದರಂತೆ.


Click it and Unblock the Notifications











