ಮೇ.10ರಿಂದ ರಾಜ್ಯದಾದ್ಯಂತ ಬುಲ್ ಬುಲ್ ಆಟ ಶುರು

By Rajendra

ಸಾರಥಿ ,ಸಂಗೊಳ್ಳಿ ರಾಯಣ್ಣ ಚಿತ್ರಗಳ ನಂತರ ಯಶಸ್ಸಿನ ಉತ್ತುಂಗದಲ್ಲಿರುವ ಕನ್ನಡ ಚಿತ್ರರಂಗದ 'ಬಾಕ್ಸ್ ಆಫೀಸ್ ಸುಲ್ತಾನ್', ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಅಭಿನಯಿಸಿರುವ ಅಪಾರ ನಿರೀಕ್ಷೆಯ ಚಿತ್ರ ' ಬುಲ್ ಬುಲ್ '. ಈ ಚಿತ್ರ ಮೇ.10ರಂದು ತೆರೆಗೆ ಅಪ್ಪಳಿಸುತ್ತಿದೆ.

ಫ್ರೆಂಡ್ಸ್, ಪೊರ್ಕಿ, ಚೆಲ್ಲಾಟ, ಕೃಷ್ಣ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಎಂ.ಡಿ. ಶ್ರೀಧರ್ ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬಂದಿದೆ. ಇತ್ತೀಚಿನ ದಿನಗಳಲ್ಲಿ ಹಿಟ್ ಕೃಷ್ಣ ಎಂದೇ ಖ್ಯಾತರಾಗಿರುವ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಎವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು ಕವಿರಾಜ್ ಅವರ ಸಾಹಿತ್ಯ ಮತ್ತು ಸಂಭಾಷಣೆ ಇದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರ ಸೇರಿದಂತೆ ಪ್ರಸನ್ನ, ನವರಂಗ್, ಉಮಾ, ಮೋಹನ್, ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಸಿನೆಪೊಲೀಸ್, ಫೇಮ್, ಸಿನೆಮ್ಯಾಕ್ಸ್, ಫನ್, ಗೋಪಾಲನ್, ರಾಕ್ ಲೈನ್, ಪಿವಿಆರ್, ಐನಾಕ್ಸ್ ಚಿತ್ರಮಂದಿರಗಳು 'ಬುಲ್ ಬುಲ್' ಆಟಕ್ಕೆ ರೆಡಿಯಾಗಿವೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ವಿಶೇಷಣಕ್ಕೆ ಬುಲ್ ಬುಲ್ ಚಿತ್ರ ಪಾತ್ರವಾಗುತ್ತಿದೆ.

ಕಿರುತೆರೆಯಲ್ಲಿ ಹೆಸರು ಮಾಡಿದ್ದ ರಚಿತಾ ರಾಮ್ ಚಿತ್ರದ ನಾಯಕಿ. ದರ್ಶನ್ ಅವರ ಹೋಂ ಬ್ಯಾನರ್ ತೂಗುದೀಪ ಪ್ರೊಡಕ್ಷನ್ ನಿರ್ಮಾಣದ ಚಿತ್ರ ಇದಾಗಿದೆ. ವಿ ಹರಿಕೃಷ್ಣ, ಗೀತಸಾಹಿತಿ ಕವಿರಾಜ್ ಹಾಗೂ ಕೆಲವು ತಂತ್ರಜ್ಞರು ಚಿತ್ರದ ನಿರ್ಮಾಣದ ಪಾಲುದಾರರು. ಬುಲ್ ಬುಲ್ ಚಿತ್ರ ತೆಲುಗಿನ 'ಡಾರ್ಲಿಂಗ್' ರೀಮೇಕ್.

ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ ದಿನಕರ್ ತೂಗುದೀಪ ನಿರ್ಮಾಪಕರು.

ದರ್ಶನ್ ಚಿತ್ರಗಳು ರೀಮೇಕ್ ಆದರೂ ಸರಿ ಸ್ವಮೇಕ್ ಆದರೂ ಸರಿ ಅಭಿಮಾನಿಗಳು ತಲೆಕೆಡಿಸಿಕೊಳ್ಳಲ್ಲ. ಇನ್ನು ಇಂಡಸ್ಟ್ರಿಯಲ್ಲಿ ಚಿತ್ರ ದುಡ್ಡು ಮಾಡ್ತಾ ಇಲ್ವಾ ಎಂಬ ಎರಡೇ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತದೆ. ದುಡ್ಡು ಮಾಡಿದರೆ ಇನ್ನೊಂದು ರೀಮೇಕ್. ಇಲ್ಲದಿದ್ದರೆ ಹೊಸ ಪ್ರಯತ್ನ. (ಒನ್ಇಂಡಿಯಾ ಕನ್ನಡ)

More from Filmibeat

English summary
Challenging star Darshan's upcoming film BulBul is slated for release on 10th May. In Bangalore Nartaki is main theatre and also released in PVR, INOX, Cinepolis and other multiplex theatres. The film directed by MD Sridhar has Darshan, Ambareesh and newbie Rachita Ram in lead roles. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X