twitter
    For Quick Alerts
    ALLOW NOTIFICATIONS  
    For Daily Alerts

    ಕನಸು ಈಡೇರಿಸಿಕೊಳ್ಳದೆ ಇಹಲೋಕ ತ್ಯಜಿಸಿದ ಬುಲೆಟ್ ಪ್ರಕಾಶ್

    |

    ಕೇವಲ ತಮ್ಮ 41 ನೇ ವಯಸ್ಸಿನಲ್ಲಿ ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಾವನ್ನಪ್ಪಿದ್ದಾರೆ. ಕಿಡ್ನಿ ಮತ್ತು ಲಿವರ್ ವಿಫಲತೆಗೆ ಒಳಗಾಗಿ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ.

    Recommended Video

    ದೇಹದ ತೂಕ ಇಳಿಸಿಕೊಳ್ಳಲು ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಜೀವಕ್ಕೆ ಮುಳುವಾಯ್ತಾ??| Bullet Prakash No More

    ತೆರೆಯ ಮೇಲೆ ಭಿನ್ ಹಾವ-ಭಾವಗಳಿಂದ, ತಮ್ಮ ದಡೂತಿ ದೇಹ ಬಳಸಿ ಹಾಸ್ಯಾತ್ಮಕ ಭಾವ-ಭಂಗಿಗಳನ್ನು ಪ್ರದರ್ಶಿ ಪ್ರೇಕ್ಷಕರನ್ನು ನಕ್ಕು-ನಗಿಸುತ್ತಿದ್ದ ಬುಲೆಟ್ ಪ್ರಕಾಶ್, ನಿಜ ಜೀವನದಲ್ಲಿ ಬಹಳ ಸೀರಿಯಸ್ ಮನುಷ್ಯರಂತೆ.

    ಹೌದು, ಬುಲೆಟ್ ಪ್ರಕಾಶ್ ಸದಾ ಯೋಚನೆ ಮಾಡುವಂತ, ಭವಿಷ್ಯದ ಬಗ್ಗೆ ನೂರಾರು, ಸಾವಿರಾರು ಕನಸುಗಳನ್ನು ಹೊಂದಿದ್ದಂತಹಾ ವ್ಯಕ್ತಿಯಾಗಿದ್ದರು.

    ಬುಲೆಟ್ ಪ್ರಕಾಶ್ ಅವರನ್ನು ಹತ್ತಿರದಿಂದ ನೋಡಿದಂತಹಾ ಅವರ ಸಿನಿ ಗೆಳೆಯರು ಸಹ ಇದನ್ನೇ ಹೇಳುತ್ತಾರೆ. ಆದರೆ ಬುಲೆಟ್ ಪ್ರಕಾಶ್ ಅವರಿಗೆ ಒಂದು ಮಹತ್ತರವಾದ ಕನಸೊಂದಿತ್ತು, ಆದರೆ ಅದನ್ನು ಈಡೇರಿಸಿಕೊಳ್ಳದೇ ಇಹಲೋಕ ತ್ಯಜಿಸಿದ್ದಾರೆ ಅವರು. ಏನದು ಆಸೆ? ಮುಂದೆ ಓದಿ...

    ಬುಲೆಟ್ ಪ್ರಕಾಶ್ ಗೆ ಇದ್ದ ಕನಸೇನು?

    ಬುಲೆಟ್ ಪ್ರಕಾಶ್ ಗೆ ಇದ್ದ ಕನಸೇನು?

    ಬುಲೆಟ್ ಪ್ರಕಾಶ್ ಅತ್ಯಂತ ಮಹಾತ್ವಾಕಾಂಕ್ಷೆಗಳು ಇದ್ದ ವ್ಯಕ್ತಿ ಎಂದು ಅವರನ್ನು ಹತ್ತಿರದಿಂದ ಕಂಡ ಹಿರಿಯ ನಟ ಮಂಡ್ಯ ರಮೇಶ್ ಹೇಳುತ್ತಾರೆ. ಬುಲೆಟ್ ಪ್ರಕಾಶ್‌ ಗೆ ಶಾಸಕರಾಗಬೇಕು ಎಂಬ ಬಹುದೊಡ್ಡ ಆಸೆಯಿತ್ತಂತೆ. ಇದಕ್ಕಾಗಿ ಶ್ರಮವಹಿಸಲು ಸಹ ಅವರು ಪ್ರಾರಂಭಿಸಿದ್ದರು, ಆದರೆ ಅರ್ಧದಲ್ಲಿಯೇ ಹೋಗಿಬಿಟ್ಟಿದ್ದಾರೆ.

    ಬಿಜೆಪಿ ಪಕ್ಷ ಸೇರಿದ್ದ ಬುಲೆಟ್ ಪ್ರಕಾಶ್

    ಬಿಜೆಪಿ ಪಕ್ಷ ಸೇರಿದ್ದ ಬುಲೆಟ್ ಪ್ರಕಾಶ್

    ಬುಲೆಟ್ ಪ್ರಕಾಶ್ ಅವರು ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು, ಪಕ್ಷದ ಪರ ಕಳೆದ ಚುನಾವಣೆಯಲ್ಲಿ ಪ್ರಚಾರವನ್ನೂ ಮಾಡಿದ್ದರು. ಬಿಜೆಪಿಯ ಸಾಂಸ್ಕೃತಿಕ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಸಹ ಬುಲೆಟ್ ಪ್ರಕಾಶ್ ಕಾರ್ಯ ನಿರ್ವಹಿಸಿದ್ದರು.

    ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ

    ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದರು ಬುಲೆಟ್ ಪ್ರಕಾಶ್, ಬುಲೆಟ್ ಅವರ ತಾಯಿ ಗೌರಮ್ಮ 1989 ರಲ್ಲಿ ಸ್ಥಳೀಯ ಕಾರ್ಪೊರೇಟರ್ ಆಗಿದ್ದರು. ಹಾಗೂ ಅವರು ಬಿಜೆಪಿಯ ಹಿರಿಯ ಸದಸ್ಯರೂ ಆಗಿದ್ದರು.

    ಗೆಳೆಯರ ಬಳಿ ಹೇಳಿಕೊಂಡಿದ್ದ ಬುಲೆಟ್ ಪ್ರಕಾಶ್

    ಗೆಳೆಯರ ಬಳಿ ಹೇಳಿಕೊಂಡಿದ್ದ ಬುಲೆಟ್ ಪ್ರಕಾಶ್

    ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಬಹು ಉತ್ಸಾಹದಿಂದ ಬುಲೆಟ್ ಪ್ರಕಾಶ್ ಅವರು, ತಮ್ಮ ಗೆಳೆಯರ ಬಳಿ ತಾವು ಶಾಸಕ ಆಗಿಯೇ ತೀರುವುದಾಗಿ ಹೇಳಿಕೊಂಡಿದ್ದರಂತೆ. ಈ ಬಗ್ಗೆ ಮಂಡ್ಯ ರಮೇಶ್ ನೆನಪಿಸಿಕೊಂಡಿದ್ದಾರೆ. ಮಹಾತ್ವಾಕಾಂಕ್ಷೆ ಇದ್ದ ವ್ಯಕ್ತಿ ಬಹು ಬೇಗನೇ ಹೋಗಿಬಿಟ್ಟಿದ್ದಾರೆ.

    English summary
    Actor Bullet Prakash has dream of elected as MLA. He has joined BJP and campaign for the party. But he passed away today.
    Saturday, May 30, 2020, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X