ಟ್ವಿಟ್ಟರ್ ಬಿಟ್ಟು ಹೋದ ರಮ್ಯಾರನ್ನ ಕುಟುಕಿದ ಬುಲೆಟ್ ಪ್ರಕಾಶ್
Recommended Video
ಸ್ಯಾಂಡಲ್ ವುಡ್ ನಟಿ, ರಾಜಕಾರಣಿ ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ದಿಢೀರ್ ಅಂತ ಟ್ವಿಟ್ಟರ್ ನಿಂದ ಹೊರಹೋಗಿರುವುದು ಅಚ್ಚರಿ ಮೂಡಿಸಿದೆ.
ಸದಾ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದ ರಮ್ಯಾ ಈಗ ಟ್ವಿಟ್ಟರ್ ಲೋಕದಿಂದ ಮಾಯವಾಗಿರುವ ಬಗ್ಗೆ ಹಲವರು ಕಾಲೆಳೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹಾಸ್ಯನಟ ಹಾಗೂ ಬಿಜೆಪಿ ಬೆಂಗಲಿಗ ಬುಲೆಟ್ ಪ್ರಕಾಶ್ ರಮ್ಯಾ ಅವರನ್ನ ಕುಟುಕಿದ್ದಾರೆ.
'ಎಲೆಕ್ಷನ್ನಲ್ಲಿ ವೋಟ್ ಹಾಕದೆ ಜೂಟು, ಊರೆಲ್ಲ ಜನರ ಜೊತೆ ಫೈಟು, ಮಂಡ್ಯ ಟು ಬೆಂಗಳೂರು ಶಿಫ್ಟು, ಮೋದಿ ಹವಾಗೆ ಟ್ವಿಟರ್ ಅಕೌಂಟ್ ಡಿಲಿಟ್ಟು, ಬೇಕಿತ್ತ ಮೆಡಮ್ ಇಷ್ಟೆಲ್ಲಾ ಗಿಲಿಟ್ಟು' ಎಂದು ಹಲವು ವಿಷ್ಯಗಳನ್ನ ಪ್ರಸ್ತಾಪ ಮಾಡುವುದರ ಮೂಲಕ ಟೀಕಿಸಿದ್ದಾರೆ.

ರಮ್ಯಾ ಅವರು ಮಂಡ್ಯ ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ಮಂಡ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಮಂಡ್ಯದಲ್ಲಿ ಮಾಡಲಾಗಿದ್ದ ಮನೆಯನ್ನ ಕೂಡ ಖಾಲಿ ಮಾಡಿದರು. ಕಳೆದ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಮತ ಚಲಾಯಿಸಿಲ್ಲ. ಈ ಬಗ್ಗೆ ಬುಲೆಟ್ ಪ್ರಕಾಶ್ ಉಲ್ಲೇಖಿಸಿ ವ್ಯಂಗ್ಯ ಮಾಡಿದ್ದಾರೆ.


Click it and Unblock the Notifications











