ಮೋದಿಯನ್ನ ಅಣುಕಿಸಿದ ರಮ್ಯಾ: 'ಪದ್ಮಾವತಿ' ಕಿವಿ ಹಿಂಡಿದ ಬುಲೆಟ್ ಪ್ರಕಾಶ್

Recommended Video

ರಮ್ಯಾ ವಿರುದ್ದ ತಿರುಗಿಬಿದ್ದ ಬುಲೆಟ್..! ನಾಳೆ ವಿಡಿಯೋ ಬಿಡ್ತಾರಂತೆ..!? | FILMIBEAT KANNADA

ನಟಿ ಮತ್ತು ರಾಜಕಾರಣಿ ರಮ್ಯಾ ಮತ್ತೊಂದು ವಿವಾದವನ್ನು ತೆಲೆಮೇಲೆ ಎಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವಗಾವಾಗ ಟ್ವೀಟ್ ಮಾಡುವ ಮೂಲಕ ಪ್ರತ್ಯಕ್ಷರಾಗುವ ಟ್ವಿಟ್ಟರ್ ರಮ್ಯಾ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಬಾಲಕನ ಕಿವಿ ಹಿಂಡುತ್ತಿರುವ ಫೋಟೋವನ್ನು ಹಿಟ್ಲರ್ ಗೆ ಹೋಲಿಸಿ ಸಾಮಾಜಿಕಾ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಲ್ಲದೆ 'ಈ ಫೋಟೋ ಬಗ್ಗೆ ಏನು ಹೇಳುತ್ತೀರಿ' ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಈ ಫೋಟೋ ಹಾಕುತ್ತಿದ್ದಂತೆ ರಮ್ಯಾ ವಿರುದ್ಧ ಮೋದಿ ಭಕ್ತರು ರೊಚ್ಚಿಗೆದಿದ್ದಾರೆ. ರಮ್ಯಾ ಅಭಿನಯದ ಕೆಲವು ಸಿನಿಮಾಗಳ ಹಾಟ್ ಫೋಟೋಗಳನ್ನು ಹಾಕಿ ಇದಕ್ಕೆ ಏನು ಹೇಳುತ್ತೀರಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ ನಟ ಬುಲೆಟ್ ಪ್ರಕಾಶ್ ರಮ್ಯಾಗೆ ಟಾಂಗ್ ಕೊಡುವ ಮೂಲಕ ಮೋಹಕ ತಾರೆಯ ಕಿವಿ ಹಿಂಡಿದ್ದಾರೆ. ಮೋದಿ ವಿರುದ್ಧ ಟ್ವೀಟ್ ಮಾಡಿದ ಪದ್ಮಾಪತಿಯನ್ನು ಟ್ವಿಟರ್ ನಲ್ಲಿ ಬುಲೆಟ್ ಪ್ರಕಾಶ್ ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ಓದಿ..

ಪದ್ಮಾಪತಿಗೆ ಟಾಂಗ್ ಕೊಟ್ಟ ಬುಲೆಟ್ ಪ್ರಕಾಶ್

ರಮ್ಯಾ ಮಾಡಿದ ಟ್ವೀಟ್ ಗೆ ನಟ ಬುಲೆಟ್ ಪ್ರಕಾಶ್ ಕೂಡ ವಿರೋದ ವ್ಯಕ್ತ ಪಡಿಸಿದ್ದಾರೆ. "ರಮ್ಯಾ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ" ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತ ಬುಲೆಟ್ ಪ್ರಕಾಶ್

ಬಿಜೆಪಿ ಕಾರ್ಯಕರ್ತ ಬುಲೆಟ್ ಪ್ರಕಾಶ್

ನಟ ಬುಲೆಟ್ ಪ್ರಕಾಶ್ ಅಭಿಮಾನಿಗಳ ಮುಂದೆ ಬರದೆ ವರ್ಷಗಳೆ ಆಗಿದೆ. ಇತ್ತೀಚಿಗಷ್ಟೆ ಅನಾರೋಗ್ಯದಿಂದ ಚೇತರಿಸಿ ಕೊಂಡಿರುವ ಬುಲೆಟ್ ಪ್ರಕಾಶ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಬಿ ಜೆ ಪಿ ಕಾರ್ಯಕರ್ತರಾಗಿರುವ ಬುಲೆಟ್ ಪ್ರಕಾಶ್ ಹೆಸರಿನ ಮುಂದೆ ಚೌಕಿದಾರ್ ಅಂತ ಹಾಕಿಕೊಂಡಿದ್ದಾರೆ. ಈಗ ಮೋದಿ ಕೆಣಕಿದ ರಮ್ಯಾ ವಿರುದ್ದ ಸಿಡಿದೇಳುವ ಮೂಲಕ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಮ್ಯಾ ಹಳೆ ಫೋಟೋ ಹಾಕಿ ಟ್ರೋಲ್

ರಮ್ಯಾ ಹಳೆ ಫೋಟೋ ಹಾಕಿ ಟ್ರೋಲ್

ನರೇಂದ್ರ ಮೋದಿ ಪುಟ್ಟ ಬಾಲಕನ ಕಿವಿ ಹಿಂಡುತ್ತಿರುವ ಫೋಟೋವನ್ನು ಹಿಟ್ಲರ್ ಗೆ ಹೋಲಿಸಿ ಈ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಟ್ವೀಟ್ ಮಾಡಿದ ರಮ್ಯಾ ವಿರುದ್ಧ ಮೋದಿ ಭಕ್ತರು ತಿರುಗಿ ಬಿದ್ದಿದ್ದಾರೆ. ಪದ್ಮಾಪತಿಯ ಹಳೆಯ ಸಿನಿಮಾಗಳ ಹಾಟ್ ಹಾಟ್ ಫೋಟೋಗಳನ್ನು ಹಾಕಿ ಇದಕ್ಕೆ ಏನು ಹೇಳುತ್ತೀರಾ ಎಂದು ಕ್ಯಾಪ್ಷನ್ ಹಾಕಿ ಮೋಹಕ ತಾರೆಯನ್ನು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.

ವಿವದಾತ್ಮಕ ಟ್ವೀಟ್ ಗೆ ನೆಟ್ಟಿಗರ ತಿರುಗೇಟು

ವಿವದಾತ್ಮಕ ಟ್ವೀಟ್ ಗೆ ನೆಟ್ಟಿಗರ ತಿರುಗೇಟು

ವಿವದಾತ್ಮಕ ಫೋಟೋ ಪೋಸ್ಟ್ ಮಾಡಿರುವ ರಮ್ಯಾ ವಿರುದ್ಧ ಅನೇಕರು ಮತ ಚಲಾಯಿಸದೆ ಇರುವುದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ವೋಟ್ ಮಾಡಿ ರಮ್ಯಾ ಅವರೆ ಎಂದು ಹೇಳುತ್ತಿದ್ದಾರೆ. ಫೋಟೋಶಾಪ್ ಮಾಡಿದ ಫೋಟೋವನ್ನು ಶೇರ್ ಮಾಡುವುದಕ್ಕೆ ಆಗುತ್ತೆ ಆದ್ರೆ ವೋಟ್ ಮಾಡಲು ಆಗುವುದಿಲ್ಲ ಎಂದು ಟ್ವೀಟಿಗರು ಕಾಲೆಳೆಯುತ್ತಿದ್ದಾರೆ.

ಫೋಟೋಶಾಪ್ ಮಾಡಿದ ಹಿಟ್ಲರ್ ಫೋಟೋ ಫೋಸ್ಟ್

ಹಿಟ್ಲರ್ ಮಗಗವಿನ ಕಿವಿ ಹಿಂಡುತ್ತಿರುವ ಹಾಗೆ ಫೋಟೋಶಾಪ್ ಮಡಿದ ಫೋಟೋವನ್ನು ನರೇಂದ್ರ ಮೋದಿ ಬಾಲಕನ ಕಿವಿ ಹಿಂಡುತ್ತಿರುವ ಫೋಟೋಗೆ ಹೋಲಿಸಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಇಮ್ಮ ಅಭಿಪ್ರಾಯ ಏನು ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋ ಈಗ ಕೇಸರಿಪಡೆಯ ಆಕ್ರೋಶಕ್ಕೆ ಕಾರಣವಾಗಿದೆ.

More from Filmibeat

English summary
Kannada comedy actor Bullet Prakash reacts to actress and politician Ramya's controversial tweet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X