Don't Miss!
- Automobiles
ಭಾರತದಲ್ಲಿ ಆಕರ್ಷಕ ವಿನ್ಯಾಸದ 2023ರ ಬಿಎಂಡಬ್ಲ್ಯು X1 ಎಸ್ಯುವಿ ಬಿಡುಗಡೆ
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಇಂಡಸ್ಟ್ರಿಗೆ ಎಂಟ್ರಿ
ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಬಹಳ ದಿನದಿಂದಲೂ ಚರ್ಚೆಯಲ್ಲಿದೆ. ಆದರೆ ಯಾವ ಸಿನಿಮಾ, ಯಾವಾಗ ಎಂಟ್ರಿ ಎನ್ನುವುದು ನಿಖರವಾಗಿ ತಿಳಿದಿರಲಿಲ್ಲ.
ಆದ್ರೀಗ, ಸಿಕ್ಕಿರುವ ಮಾಹಿತಿ ಪ್ರಕಾರ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಸ್ಟಾರ್ ನಟನ ಚಿತ್ರದಲ್ಲಿ ನಟಿಸುತ್ತಿದ್ದು, ಒಂದು ಹಂತದ ಚಿತ್ರೀಕರಣ ಸಹ ಮುಗಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಬುಲೆಟ್ ಪ್ರಕಾಶ್ ವಾರಸುದಾರ ಸಹ ಚಿತ್ರರಂಗದಲ್ಲಿ ಮುಂದುವರಿಯುವ ಆಸೆ ನೆರವೇರುತ್ತಿದೆ. ಅಷ್ಟಕ್ಕೂ, ರಕ್ಷಕ್ ನಟಿಸುತ್ತಿರುವ ಸಿನಿಮಾ ಯಾವುದು? ಚೊಚ್ಚಲ ಸಿನಿಮಾದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಗುರು ಶಿಷ್ಯರು ಚಿತ್ರದಲ್ಲಿ ರಕ್ಷಕ್
'ಅಧ್ಯಕ್ಷ' ಖ್ಯಾತಿಯ ಶರಣ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಬುಲೆಟ್ ಪ್ರಕಾಶ್ ಪುತ್ರ ನಟಿಸುತ್ತಿದ್ದಾರೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಗುರುಶಿಷ್ಯರು' ಚಿತ್ರದಲ್ಲಿ ಶರಣ್‌ಗೆ ಶಿಷ್ಯನ ಪಾತ್ರದಲ್ಲಿ ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. ತರುಣ್ ಸುಧೀರ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಕಾರ್ಯನಿರ್ವಹಿಸುತ್ತಿದ್ದಾರೆ.
ಬುಲೆಟ್
ಪ್ರಕಾಶ್
ಸಾವಿನ
ಬಗ್ಗೆ
ಮಗ
ರಕ್ಷಕ್
ಹೇಳಿದ
ಆಘಾತಕಾರಿ
ಸಂಗತಿ

ಒಂದು ಶೆಡ್ಯೂಲ್ ಮುಗಿದಿದೆ
'ಗುರುಶಿಷ್ಯರು' ಚಿತ್ರದಲ್ಲಿ ಶರಣ್ ಗುರು ಪಾತ್ರದಲ್ಲಿದ್ದರೆ ಶಿಷ್ಯರ ಪಾತ್ರದಲ್ಲಿ ತುಂಬಾ ಜನ ಹುಡುಗರು ನಟಿಸುತ್ತಿದ್ದಾರೆ. ಅವರ ಪೈಕಿ ರಕ್ಷಕ್ ಸಹ ಒಬ್ಬರು. ಈಗಾಗಲೇ ರಕ್ಷಕ್ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಬಂದಿದ್ದಾರೆ.

ಪ್ರೇಮ್ ಮಗ ಅಭಿನಯ
ಲವ್ಲಿಸ್ಟಾರ್ ಪ್ರೇಮ್ ಪುತ್ರ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅಂಶ ಹೊರಬಿದ್ದಿದೆ. ಈಗಾಗಲೇ ಏಕಾಂತ್ ಕನ್ನಡದ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಈಗ ಗುರುಶಿಷ್ಯರು ಪ್ರಾಜೆಕ್ಟ್‌ನಲ್ಲಿ ಏಕಾಂತ್, ರಕ್ಷಕ್ ಸೇರಿದಂತೆ ಇನ್ನು ಕೆಲವು ಸ್ಟಾರ್ ನಟರ ಮಕ್ಕಳು ಅಭಿನಯಿಸುತ್ತಿದ್ದಾರೆ.
'ಗುರುಶಿಷ್ಯರು'
ಚಿತ್ರಕ್ಕೆ
ನಿಶ್ವಿಕಾ
ನಾಯ್ಡು
ನಾಯಕಿಯಾಗಿದ್ದು
ಏಕೆ?

ಹೀರೋ ಮಾಡುವ ಆಸೆ ಇತ್ತು
ಬುಲೆಟ್ ಪ್ರಕಾಶ್‌ಗೆ ತಮ್ಮ ಮಗನನ್ನು ಹೀರೋ ಮಾಡ್ಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಮಗನಿಗೆ ತಯಾರಿ ಸಹ ಕೊಡ್ತಿದ್ದರು. ಜಿಮ್, ಡ್ಯಾನ್ಸ್‌ನಲ್ಲಿ ಮಗನನ್ನ ಪಳಗಿಸುತ್ತಿದ್ದರು. ದುರಾದೃಷ್ಟವಶಾತ್ ಮಗನ ಯಶಸ್ಸು ನೋಡುವ ಮೊದಲೇ ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಬೇಕಾಯಿತು.
Recommended Video

ನಿಶ್ವಿಕಾ ನಾಯ್ಡು ನಾಯಕಿ
ಗುರುಶಿಷ್ಯರು ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಳ್ಳಿ ಹುಡುಗಿ ಪಾತ್ರದಲ್ಲಿ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಯಾಗಿ ನಿಶ್ವಿಕಾ ಕಾಣಿಸಿಕೊಳ್ಳುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಸಹ ರಿಲೀಸ್ ಆಗಿದೆ.