ಶಿವಣ್ಣ ಆರೋಗ್ಯಕ್ಕಾಗಿ ಬುಲೆಟ್ ಪ್ರಕಾಶ್ ಪ್ರಾರ್ಥನೆ
Recommended Video

ಶಿವರಾಜ್ ಕುಮಾರ್ ಗಾಗಿ ಪ್ರಾರ್ಥನೆ ಸಲ್ಲಿಸಿದ ಬುಲೆಟ್ ಪ್ರಕಾಶ್ | FILMIBEAT KANNADA
ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಣ್ಣ ಆರೋಗ್ಯವಾಗಿ ಆಸ್ಪತ್ರೆಯಿಂದ ಆಚೆ ಬರಲಿ ಎಂದು ನಟ ಬುಲೆಟ್ ಪ್ರಕಾಶ್ ಪ್ರಾರ್ಥನೆ ಮಾಡಿದ್ದಾರೆ.
''ಜನ ಮೆಚ್ಚಿದ ಮಗ, ಹ್ಯಾಟ್ರಿಕ್ ಹೀರೋ ಡಾ॥ಶಿವರಾಜ್ ಕುಮಾರ್ ರವರು ಜ್ವರ ಬಂದಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ, ಕೋಟ್ಯಾಂತರ ಕನ್ನಡಿಗರ ಆಶೀರ್ವಾದದಿಂದ ಶೀಘ್ರವಾಗಿ ಗುಣಮುಖರಾಗಿ ಮನೆಗೆ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಬುಲೆಟ್ ಪ್ರಕಾಶ್ ಆಸ್ಪತ್ರೆಯಲ್ಲಿ ಇದ್ದಾಗ ಶಿವರಾಜ್ ಕುಮಾರ್ ಹೋಗಿ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಈಗ ಶಿವಣ್ಣ ಗುಣಮುಖರಾಗಲಿ ಎಂದು ಬುಲೆಟ್ ಪ್ರಕಾಶ್ ಪ್ರಾರ್ಥನೆ ಮಾಡಿದ್ದಾರೆ.
ನಿನ್ನೆ ಶಿವಣ್ಣನ ಅರೋಗ್ಯದ ಕುರಿತು ಮಾತನಾಡಿದ ವೈದ್ಯರು ''ಶಿವರಾಜ್ ಕುಮಾರ್ ಫಿಟ್ ಆಗಿದ್ದಾರೆ, ಬರಿ ಜ್ವರ ಇತ್ತು ಅಷ್ಟೇ, ಈಗ ನಾರ್ಮಲ್ ಆಗಿದ್ದಾರೆ. ನಾಳೆ ಡಿಸ್ಚಾರ್ಜ್ ಮಾಡ್ತೀವಿ'' ಎಂದಿದ್ದಾರೆ.
More from Filmibeat
English summary
Actor Bullet Prakash tweets about Shiva Rajkumar. Shiva Rajkumar admitted to Mallya Hospital due to high fever Yesterday (October 15th).
bullet prakash shiva rajkumar health hospital bengaluru ಶಿವರಾಜ್ ಕುಮಾರ್ ಬುಲೆಟ್ ಪ್ರಕಾಶ್ ಆರೋಗ್ಯ ಆಸ್ಪತ್ರೆ ಬೆಂಗಳೂರು


Click it and Unblock the Notifications











