Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸೆಯಂತೇ ರೈತನ ಕೈಹಿಡಿದ ನಟಿ ಅದಿತಿ ಪ್ರಭುದೇವ; ಶುಭಕೋರಿದ, ಅಭಿಮಾನಿಗಳು ಹಾಗೂ ಗಣ್ಯರು
ಕನ್ನಡ ಚಲನಚಿತ್ರರಂಗದ ನಟಿ ಅದಿತಿ ಪ್ರಭುದೇವ ತಮ್ಮ ಆಸೆಯಂತೇ ಯುವ ರೈತ ಹಾಗೂ ಉದ್ಯಮಿ ಆಗಿ ಕೆಲಸ ನಿರ್ವಹಿಸುತ್ತಿರುವ ಯಶಸ್ ಪಾಟ್ಲಾ ಅವರ ಜತೆ ಸಪ್ತಪದಿ ತುಳಿದಿದ್ದಾರೆ. ಇಂದು ( ನವೆಂಬರ್ 28 ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ ಪಾಟ್ಲಾ ವಿವಾಹ ಅದ್ಧೂರಿಯಾಗಿ ನೆರವೇರಿದೆ.
ಇನ್ನು ಕಳೆದ ವರ್ಷವೇ ನಿಶ್ವಿತಾರ್ಥಾವಾಗಿದ್ದ ಈ ಜೋಡಿ ಇದೀಗ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದು, ನಿನ್ನೆ ( ನವೆಂಬರ್ 27 ) ಬೆಂಗಳೂರಿನ ಅರಮನೆಮ ಮೈದಾನದಲ್ಲಿ ನಡೆದ ಅದಿತಿ ಪ್ರಭುದೇವ ಹಾಗೂ ಯಶಸ್ ಅವರ ಅದ್ಧೂರಿಯಾದ ಆರತಕ್ಷತೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಯಶ್, ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಮೇಘಾ ಶೆಟ್ಟಿ ಹಾಗೂ ಇತರೆ ಕಲಾವಿದರು ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಗಣ್ಯರೂ ಸಹ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ನವ ಜೋಡಿಗೆ ಶುಭ ಕೋರಿದರು.
ಇನ್ನು ಸೋಮವಾರ ( ನವೆಂಬರ್ 28 ) ಬೆಳಗ್ಗೆ 9 ಗಂಟೆಯಿಂದ 10.32ರವರೆಗೆ ಇದ್ದ ಮುಹೂರ್ತದ ಸಮಯದಲ್ಲಿ ಯಶಸ್ ಅದಿತಿ ಪ್ರಭುದೇವ ಅವರಿಗೆ ಮಾಂಗಲ್ಯ ಕಟ್ಟಿದ್ದು, ನೆರೆದಿದ್ದ ಕುಟುಂಬಸ್ಥರು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳು ಅಕ್ಷತೆ ಹಾಕಿ ನೂರಾರು ಕಾಲ ಸುಖವಾಗಿ ಬಾಳಿ ಎಂದು ನವ ಜೋಡಿಗೆ ಹರಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅದಿತಿ ತಾಳಿ ಕಟ್ಟಿಸಿಕೊಂಡ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದ ತುಂಬಾ ವೈರಲ್ ಆಗಿವೆ.

ಶುಭ ಕೋರಿದ ಸಿಎಂ ಬೊಮ್ಮಾಯಿ
ಅದಿತಿ ಪ್ರಭುದೇವ ಹಾಗೂ ಯಶಸ್ ಮದುವೆ ಸಮಾರಂಭಕ್ಕೆ ಸಿ ಎಂ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಿಮಿಸಿದ್ದರು. ನವ ಜೋಡಿಗೆ ಶುಭಕೋರಿದ ಬಳಿಕ ಸಿ ಎಂ ಮಾಧ್ಯಮಗಳಿಗೆ ಅದಿತಿ ತಮ್ಮ ಸಂಬಂಧಿ ಅನ್ನೋ ಸಂಗತಿಯನ್ನು ರಿವೀಲ್ ಮಾಡಿದ್ದರು. " ಅದಿತಿ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ನನಗೆ ಆತ್ಮೀಯವಾಗಿ ಕರೆದಿದ್ದರು. ಹೀಗಾಗಿ ಬಂದು ಅವರಿಗೆ ಶುಭಾಶಯಗಳನ್ನು ಹೇಳಿದ್ದೇನೆ. ನಮ್ಮ ತಾಯಿ ಕಡೆಯಿಂದಾನೂ ಸಂಬಂಧ ಆಗಬೇಕು. ಹೀಗಾಗಿ ಬಂದು ಹಾರೈಸಿದ್ದೇನೆ. ಅವರ ಬದುಕು ಒಳ್ಳೆಯದಾಗಲಿ ಅಂತ ನಿಮ್ಮ ಮೂಲಕನೂ ಹಾರೈಸುತ್ತೇನೆ." ಎಂದು ಸಿ ಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನೂರು ವರ್ಷ ಚೆನ್ನಾಗಿರಿ ಎಂದ ಯಶ್ - ರಾಧಿಕಾ
ಇನ್ನು ಅದಿತಿ ಪ್ರಭುದೇವ ಹಾಗೂ ಯಶಸ್ ಆರತಕ್ಷತೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಯಶ್ ಹಾಗೂ ರಾಧಿಕಾ ಯಶ್ "ಗಂಡು ಹೆಣ್ಣಿಗೆ ಒಳ್ಳೆಯದಾಗಲಿ, ನೂರಾರು ವರ್ಷ ಚೆನ್ನಾಗಿರಲಿ" ಎಂದು ಆಶಿಸಿದರು.

ಶುಭಕೋರಿದ ಹಲವಾರು ಅಭಿಮಾನಿಗಳು
ಇನ್ನು ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ವಿವಾಹದ ಫೊಟೊಗಳು ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೊಗಳನ್ನು ಟ್ವಿಟರ್, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುವ ನೆಟ್ಟಿಗರು ನವ ಜೋಡಿಗೆ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಹಲವಾರು ಸೆಲೆಬ್ರಿಟಿಗಳೂ ಸಹ ಅದಿತಿಗೆ ಮದುವೆಯ ಶುಭಾಶಯ ಕೋರಿದ್ದಾರೆ.