»   » ನಟ ಜೈ ಜಗದೀಶ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ

ನಟ ಜೈ ಜಗದೀಶ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಖ್ಯಾತ ನಟ ಕಮ್ ನಿರ್ಮಾಪಕ ಜೈ ಜಗದೀಶ್ ಅವರು ಆಚಾನಕ್ಕಾಗಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಚೇತರಿಸಿಕೊಳ್ಳುತ್ತಿದ್ದಾರೆ.

ನಟ ಜೈ ಜಗದೀಶ್ ಪತ್ನಿ ವಿಜಯಲಕ್ಷ್ಮೀ ಸಿಂಗ್ ಅವರು ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರದ ಕಾವೇರಿಪುರ ವಾರ್ಡಿನಿಂದ ಬಿಜೆಪಿ ಪಕ್ಷದ ಪರವಾಗಿ ಸ್ಪರ್ಧಿಸುತ್ತಿದ್ದು, ಪತ್ನಿಯ ಪರವಾಗಿ ಈ ಕೆಲವು ದಿನಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

Busy With #BBMP Elections, Jai Jagadish Hospitalized For Getting Sudden Heart Attack

ಕಾವೇರಿಪುರ ವಾರ್ಡ್ ನಲ್ಲಿ ಕಳೆದ ಒಂದು ವಾರದಿಂದ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ಲಘು ಹೃದಯಾಘಾತಕ್ಕೆ ಒಳಪಟ್ಟಿದ್ದಾರೆ. ತಕ್ಷಣ ನಗರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಇದೀಗ ಜೈ ಜಗದೀಶ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

Busy With #BBMP Elections, Jai Jagadish Hospitalized For Getting Sudden Heart Attack

ಅಂದಹಾಗೆ ಬೆಂಗಳೂರು ಮಹಾನಗರದ ಬಿಬಿಎಂಪಿ ಚುನಾವಣೆ ಎಲ್ಲಾ ಆಭ್ಯರ್ಥಿಗಳಿಗೂ ಬಹಳ ದೊಡ್ಡ ಕದನವಾಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ಚುನಾವಣೆ ಆರಂಭವಾಗಲಿದೆ.

ಇನ್ನೂ ನಟ ಜೈಜಗದೀಶ್ ಅವರು ಆದಷ್ಟು ಬೇಗನೆ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ನಾವು ಹಾರೈಸೋಣ.

English summary
Actor Jai Jagadish has been hospitalized for getting sudden heart attack! Yes, if the reports are to be believed, the actor was busy with #BBMP Elections 2015 and was seen supporting BJP party. Vijayalakshmi Singh wife of actor-producer Jai Jagadish is participating in the #BBMP elections as a BJP contestant for Vijayanagara's Kaveripura ward.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada