ಸೆನ್ಸಾರ್ ಪರೀಕ್ಷೆ ಮುಗಿಸಿದ ಪಾರುಲ್ ಯಾದವ್ 'ಬಟರ್ ಫ್ಲೈ'

ನಟಿ ಪಾರುಲ್ ಯಾದವ್ ಅಭಿನಯದ 'ಬಟರ್ ಪ್ಲೈ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಬಟರ್ ಫ್ಲೈ' ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ತಯಾರಾಗಿದೆ. 'ಬಟರ್ ಫ್ಲೈ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಿನಿಮಾದಲ್ಲಿ ನಟಿ ಪಾರುಲ್ ಯಾದವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ವರ್ಷಗಳ ಹಿಂದೆಯೇ ಸೆಟ್ಟೇರಿದ್ದ 'ಬಟರ್ ಫ್ಲೈ' ಸಿನಿಮಾಗೀಗ ಸೆನ್ಸಾರ್ ಬೋರ್ಡ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ಯಾವುದೇ ದೃಶ್ಯ ಅಥವಾ ಡೈಲಾಗ್ ಗಳಿಗೆ ಕತ್ತರಿ ಹಾಕದೆ ಯು/ಎ ಪ್ರಮಾಣ ಪತ್ರ ಪಡೆದಿರುವ 'ಬಟರ್ ಫ್ಲೈ' ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಲಗ್ಗೆ ಇಡಲಿದೆ.

ಪಾರುಲ್ ಅಭಿನಯದ ಜೊತೆಗೆ ಸಹ ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನು ವಿಶೇಷ ಅಂದ್ರೆ ಚಿತ್ರದ ಬಹುತೇಕ ಸ್ಕ್ರೀನ್ ಪ್ಲೇ ಕೆಲಸಗಳಲ್ಲಿ ಪಾರುಲ್ ಭಾಗಿಯಾಗುವ ಮೂಲಕ ನಿರ್ದೇಶನದಲ್ಲೂ ಕೈ ಜೋಡಿಸಿದ್ದಾರೆ. ಸದ್ಯ ಸೆನ್ಸಾರ್ ಆಗಿರುವ 'ಬಟರ್ ಫ್ಲೈ' ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾದ್ಯತೆ ಇದೆ.

Butterfly kannada movie Censored With U/A Certificate

ಅಂದ್ಹಾಗೆ ಕನ್ನಡದ 'ಬಟರ್ ಫ್ಲೈ' ಹಿಂದಿಯ ಸೂಪರ್ ಹಿಟ್ 'ಕ್ವೀನ್' ಸಿನಿಮಾದ ರಿಮೇಕ್. ಕಂಗನಾ ರಣಾವತ್ ನಾಯಕಿಯಾಗಿ ಅಭಿನಯಿಸಿದ್ದ 'ಕ್ವೀನ್ ಚಿತ್ರಕ್ಕೆ ವಿಕಾಸ್ ಬಾಲ್ ಕಟ್ ಹೇಳಿದ್ದರು. ಹಿಂದಿಯ 'ಕ್ವೀನ್' ಸದ್ಯ ದಕ್ಷಿಣ ಭಾರತ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದೆ.

More from Filmibeat

English summary
Actress Parul Yadav starrer 'Butterfly' Kannada movie got u/a certificate from center board. This movie is directed by Ramesh Aravind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X