ಹಾರಲು ಸಿದ್ಧವಾದ ಬಣ್ಣ ಬಣ್ಣದ ನಾಲ್ಕು ಚಿಟ್ಟೆಗಳು
ಬಾಲಿವುಡ್ 'ಕ್ವೀನ್' ಸಿನಿಮಾ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗುತ್ತಿರುವುದು ಹಳೆಯ ವಿಚಾರ. ಆದರೆ, ಈಗ ಈ ಸಿನಿಮಾಗಳ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.
ಕನ್ನಡದಲ್ಲಿ 'ಬಟರ್ ಫ್ಲೈ' ಹೆಸರಿನಲ್ಲಿ ಈ ಸಿನಿಮಾ ಬರುತ್ತಿದೆ. ಪಾರೂಲ್ ಯಾದವ್ ಚಿತ್ರದ ನಾಯಕಿ ಆಗಿದ್ದಾರೆ. ಪಾರ್ವತಿ ಎಂಬ ಗೋಕರ್ಣದ ಹುಡುಗಿಯಾಗಿ ಪಾರೂಲ್ ಕಾಣಿಸಿಕೊಂಡಿದ್ದಾರೆ.
ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿರುವ ಅವರು ''ನನ್ನ ವೃತ್ತಿ ಬದುಕಿನ ಅತ್ಯುತ್ತಮ ಅನುಭವ.. ನಾನು ಜೀವಿಸಿರುವ ಪಾತ್ರ.. ಹೊತ್ತು ಬರುತ್ತಿದ್ದೇನೆ..ನನ್ನ ಚಿತ್ರ 'ಬಟರ್ ಫ್ಲೈ' ಫಸ್ಟ್ ಲುಕ್ ಈಗ ನಿಮ್ಮ ಮುಂದೆ.'' ಎಂದು ಟ್ವೀಟ್ ಮಾಡಿದ್ದಾರೆ.

ರಮೇಶ್ ಅರವಿಂದ್ ಈ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ತಮಿಳು, ತೆಲುಗು ಮಲೆಯಾಳಂ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ತಮನ್ನಾ, ಕಾಜಲ್ ಅಗರ್ವಾಲ್, ಮಂಜಿಮ್ ಮೋಹನ್ ಸಿನಿಮಾದಲ್ಲಿ ನಟಿಸಿದ್ದಾರೆ.

ಸದ್ಯದಲ್ಲಿಯೇ 'ಬಟರ್ ಫ್ಲೈ' ಸಿನಿಮಾದ ಹಾಡುಗಳು ಬಿಡುಗಡೆಯಾಗಲಿದ್ದಿ, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.


Click it and Unblock the Notifications