'ಬಟರ್ ಪ್ಲೈ' ಸಿನಿಮಾ ಬಿಡುಗಡೆ ಆಗುವುದು ಯಾವಾಗ?
ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'ಕ್ವೀನ್' ಸೌತ್ ಚಿತ್ರರಂಗಕ್ಕೆ ಕಾಲಿಟ್ಟಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್ ಆಗುತ್ತಿದೆ. ಈಗಾಗಲೇ ಆ ಸಿನಿಮಾ ಚಿತ್ರೀಕರಣ ಶುರುವಾಗಿ ಅನೇಕ ತಿಂಗಳುಗಳೆ ಕಳೆದಿದ್ದು, ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಇತ್ತು.
ಇದೀಗ 'ಬಟರ್ ಪ್ಲೈ' ರೆಕ್ಕೆ ಬಿಚ್ಚಿ ಹಾರುವ ಕಾಲ ಬಂದಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೆಯುತ್ತಿದೆ. ಅದರ ನಂತರ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ವಿಶೇಷ ಅಂದರೆ, ನಾಲ್ಕು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರ ಒಂದೇ ಸಮಯದಲ್ಲಿ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆಯಂತೆ.

ರಮೇಶ್ ಅರವಿಂದ್ ಈ ಬಿಗ್ ಚಿತ್ರದ ಸೂತ್ರಧಾರ ಅರ್ಥಾತ್ ನಿರ್ದೇಶಕರಾಗಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಿಗೆ ರಮೇಶ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್', ತೆಲುಗಿನಲ್ಲಿ 'ಒನ್ಸ್ ಅಗೈನ್ ಕ್ವೀನ್' ಮತ್ತು ಮಲೆಯಾಳಂ ನಲ್ಲಿ 'ಜಮ್ ಜಮ್' ಎಂಬ ಹೆಸರಿನಲ್ಲಿ 'ಕ್ವೀನ್' ಸಿನಿಮಾ ದಕ್ಷಿಣ ಭಾರತಕ್ಕೆ ಬಂದಿದೆ. ತಮಿಳಿನಲ್ಲಿ ಕಾಜಲ್, ಹಾಗೂ ತೆಲುಗಿನಲ್ಲಿ ತಮನ್ನಾ ಲೀಡ್ ರೋಲ್ ಪ್ಲೇ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಈ ಚಿತ್ರಕ್ಕೆ ಪಾರೂಲ್ ಯಾದವ್ ನಾಯಕಿ ಆಗಿದ್ದಾರೆ. ಕಂಗಾನ ಮಾಡಿದ್ದ ಪಾತ್ರಕ್ಕೆ ಇಲ್ಲಿ ಪಾರೂಲ್ ಜೀವ ತುಂಬಿದ್ದಾರೆ. ಸಿನಿಮಾ ಅವರ ಲುಕ್ ತುಂಬನೇ ಮುದ್ದಾಗಿದೆ. ಪಾರೂಲ್ ಕೆರಿಯರ್ ನಲ್ಲಿ ಇದೊಂದು ವಿಶೇಷ ಸಿನಿಮಾ ಆಗಲಿದೆ. ತುಂಬ ಇಷ್ಟ ಪಟ್ಟು ಪಾರೂಲ್ ಈ ಸಿನಿಮಾ ಮಾಡುತ್ತಿದ್ದು, ತಮ್ಮ ಪಾತ್ರ ನೋಡಿ ಜನ ಏನ್ ಹೇಳುತ್ತಾರೆ ಎಂದು ಉತ್ಸುಕರಾಗಿದ್ದಾರೆ.


Click it and Unblock the Notifications











