'ಕೆಜಿಎಫ್' ಬಿಡುಗಡೆ ದಿನ ರಮೇಶ್ ಅರವಿಂದ್ ಸರ್ಪ್ರೈಸ್.!
ಡಿಸೆಂಬರ್ 21ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗ್ತಿದೆ. ಸದ್ಯಕ್ಕೆ ಡಿಸೆಂಬರ್ 21 ಅಂದ್ರೆ 'ಕೆಜಿಎಫ್ ಡೇ' ಎನ್ನವಂತಾಗಿದೆ.
ಇದೀಗ, ಅದೇ ದಿನ ಕನ್ನಡ ನಟ, ನಿರ್ದೇಶಕ ರಮೇಶ್ ಅರವಿಂದ್ ಸರ್ಪ್ರೈಸ್ ಕೊಡ್ತಿದ್ದಾರೆ. ರಮೇಶ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ 'ಬಟರ್ ಫ್ಲೈ' ಚಿತ್ರದ ಟೀಸರ್ ಡಿಸೆಂಬರ್ 21ಕ್ಕೆ ತೆರೆಕಾಣ್ತಿದೆ.
ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಕ್ವೀನ್' ಚಿತ್ರದ ರೀಮೇಕ್ ಇದಾಗಿದ್ದು, ಹಿಂದಿನಲ್ಲಿ ಕಂಗನಾ ರಣಾವತ್ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ಪಾರೂಲ್ ಯಾದವ್ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ತಮಿಳಿನಲ್ಲಿ ಕಾಜಲ್, ತೆಲುಗಿನಲ್ಲಿ ತಮನ್ನಾ, ಮಲಯಾಳಂನಲ್ಲಿ ಮಂಜಿಮ ಮೋಹನ್ ಅಭಿನಯಿಸುತ್ತಿದ್ದಾರೆ.

ಕನ್ನಡ ಹಾಗೂ ತಮಿಳಿನಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಮುಂದಿನ ವರ್ಷ ಆರಂಭದಲ್ಲಿ ತೆರೆಕಾಣಲಿದೆ.
More from Filmibeat
English summary
Parul yadav starrer and ramesh aravind directional Butterfly movie teaser will be releasing on december 21st.


Click it and Unblock the Notifications











