For Quick Alerts
  ALLOW NOTIFICATIONS  
  For Daily Alerts

  ಈ ಸಿನಿಮಾ ನೋಡಿದ್ರೆ.. ನಿಮ್ಮ ಹೆಸರು ಟೈಟಲ್ ಕಾರ್ಡ್ ನಲ್ಲಿ ಬರುತ್ತೆ

  |

  ಕನ್ನಡದಲ್ಲಿ 'ಮದುವೆ ಊಟ' ಎನ್ನುವ ಹೊಸ ಸಿನಿಮಾವೊಂದು ವಿಭಿನ್ನ ಕಾನ್ಸೆಪ್ಟ್ ಹೊತ್ತು ಬರುತ್ತಿದೆ. ಈ ಸಿನಿಮಾದ ಮೂಲಕ ಹಳ್ಳಿಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದು, #Savethevillages ಅಭಿಯಾನ ಶುರು ಮಾಡಿದೆ.

  ಜೀರೋ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕಲಾವಿದರು, ತಂತ್ರಜ್ಞರು, ಕ್ಯಾಮರಾ, ಸಾರಿಗೆ, ಊಟ ಹೀಗೆ ಯಾವುದಕ್ಕೂ ಚಿತ್ರತಂಡ ಹಣ ಖರ್ಚು ಮಾಡದೆ ಸಿನಿಮಾ ನಿರ್ಮಾಣ ಮಾಡಿದೆಯಂತೆ. ಬಂಡವಾಳ ಇಲ್ಲದೆ ಸಿನಿಮಾ ಹೇಗೆ ನಿರ್ಮಾಣ ಮಾಡಲು ಸಾಧ್ಯ ಎನ್ನುವ ಪ್ರಶ್ನೆಗೆ ನಿರ್ದೇಶಕ ಮಹೇಶ್ ಲೋಣಿ ಉತ್ತರ ನೀಡಿದ್ದಾರೆ.

  ಶನಿವಾರ ಹಾಗೂ ಭಾನುವಾರ ಸಿನಿಮಾದ ಚಿತ್ರೀಕರಣಗಳು ನಡೆಯುವುದು ಕಡಿಮೆ ಹಾಗೂ ಆಷಾಡದಲ್ಲಿಯೂ ಶೂಟಿಂಗ್ ಗಳು ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಪರಿಚಯ ಇದ್ದವರ ಬಳಿ ಉಚಿತವಾಗಿ ಕ್ಯಾಮರಾ ಪಡೆದು ಶೂಟಿಂಗ್ ಮಾಡಿದ್ದಾರೆ. ಬೆಳಗ್ಗೆ 6 ರಿಂದ 9 ಹಾಗೂ ಮತ್ತೆ ಸಂಜೆ 4 ರಿಂದ 6 ಗಂಟೆಗೆಯಲ್ಲಿ ಶೂಟಿಂಗ್ ನಡೆಸಿದ್ದಾರೆ. ಹೀಗಾಗಿ ಊಟ, ತಿಂಡಿಯ ಖರ್ಚು ಉಳಿಸಿದ್ದಾರೆ. ಈ ರೀತಿಯಾಗಿ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.

  ಜೀರೋ ಬಜೆಟ್ ಸಿನಿಮಾದ ಕಾನ್ಸೆಪ್ಟ್ ಗೆ ಅನೇಕರು ಬೆಂಬಲ ನೀಡಿದ್ದಾರೆ. ಚಿತ್ರೀಕರಣದ ನಂತರ ಉಚಿತವಾಗಿ ಪ್ರೊಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಹಣ ಇಲ್ಲದೆ ತಲೆ ಉಪಯೋಗಿಸಿ ಸಿನಿಮಾ ಮಾಡಿ ಮುಗಿಸಿದ್ದಾರೆ.

  'ಮದುವೆ ಊಟ' ಸಿನಿಮಾ ಪ್ರೀ ಆರ್ಡರ್ ಟಿಕೆಟ್ ಬುಕ್ಕಿಂಗ್ ಶುರು ಮಾಡಿದ್ದಾರೆ. ಈ ರೀತಿ ಸಿನಿಮಾದ ಟಿಕೆಟ್ ಅನ್ನು ಈಗಲೇ ಬುಕ್ ಮಾಡಿದರೆ, ನಿಮ್ಮ ಹೆಸರು ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಬರಲಿದೆ. ಅದರ ಜೊತೆಗೆ ಮುಖ್ಯವಾಗಿ ಆ ಹಣವನ್ನು ಹಳ್ಳಿಗಳ ಉದ್ದಾರಕ್ಕಾಗಿ ಬಳಕೆ ಮಾಡಲಾಗುತ್ತಿದೆಯಂತೆ.

  Buy Maduve Oota movie ticket and save the villages

  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಎಷ್ಟೋ ಹಳ್ಳಿಗಳಲ್ಲಿ ಈಗಲೂ ಮೂಲಭೂತ ಸೌಕರ್ಯಗಳು ಇಲ್ಲ. ಆ ರೀತಿ ಯಾದಗಿರಿ ಜಿಲ್ಲೆಯ ಗಂಗನಾಳ ಗ್ರಾಮದಲ್ಲಿ ಶಿಕ್ಷಣ, ನೀರು, ವಿದ್ಯುತ್, ಸಾರಿಗೆ, ಚರಂಡಿ ವ್ಯವಸ್ಥೆ ಸರಿ ಇಲ್ಲ.

  'ಮದುವೆ ಊಟ' ಚಿತ್ರದ ಟಿಕೆಟ್ ದುಡ್ಡಿನಿಂದ ಬಂದ ಹಣವನ್ನು ಗಂಗನಾಳ ಗ್ರಾಮಕ್ಕಾಗಿ ಬಳಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಟಿಕೆಟ್ ಬೆಲೆಯನ್ನು 100 ಹಾಗೂ 200 ರೂಪಾಯಿ ನಿಗದಿ ಮಾಡಲಾಗಿದೆ. ಟಿಕೆಟ್ ಗಾಗಿ www.maduveoota.com ಹಾಗೂ 9513995135 ಕರೆ ಮಾಡಬಹುದಾಗಿದೆ.

  English summary
  Buy Maduve Oota movie ticket and save the villages.
  Tuesday, December 24, 2019, 15:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X