ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರೀ ರಿಲೀಸ್ ಆಗಿರುವ 'ಜಾಕಿ' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಫಸ್ಟ್ ವೀಕೆಂಡ್ ಸಿನಿಮಾ ಅಂದಾಜು 1.50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಮತ್ತೆ ಅಭಿಮಾನಿಗಳು ಹಬ್ಬದ ರೀತಿ ಚಿತ್ರವನ್ನು ಸ್ವಾಗತಿಸಿ ಸಂಭ್ರಮಿಸುತ್ತಿದ್ದಾರೆ. 'ಜಾಕಿ' ಸಿನಿಮಾ ತೆರೆಕಂಡಿರುವ ಥಿಯೇಟರ್‌ಗಳು ಕ್ರಿಕೆಟ್ ಸ್ಟೇಡಿಯಂನತಾಗಿವೆ.

ತೆಲುಗು, ತಮಿಳುನಲ್ಲಿ ಸೂಪರ್ ಹಿಟ್ ಸಿನಿಮಾಗಳ ರೀ ರಿಲೀಸ್‌ ಪರ್ವಕ್ಕೆ ದೊಡ್ಡಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದಲ್ಲೂ ನಾಗರಹಾವು, ಕಸ್ತೂರಿ ನಿವಾಸ, ಸತ್ಯಹರಿಶ್ಚಂದ್ರ ರೀತಿಯ ಎವರ್‌ಗ್ರೀನ್ ಸಿನಿಮಾಗಳು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದು ಗೆದ್ದಿವೆ. ಇದೀಗ ಅದೇ ಸಾಲಿಗೆ ಪುನೀತ್ ರಾಜ್‌ಕುಮಾರ್ 'ಜಾಕಿ' ಸಹ ಸೇರಿಕೊಂಡಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆ ಸೇರಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಸಿನಿಮಾ ರೀ ರಿಲೀಸ್ ಮಾಡಿ ಸಕ್ಸಸ್ ಕಂಡಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ವಿತರಕರು ಥ್ರಿಲ್ಲಾಗಿದ್ದಾರೆ.

Buzz After Blockbuster Response To Jackie Shivarajumar s this movie set to re-release

ಫಸ್ಟ್ ವೀಕೆಂಡ್‌ನಲ್ಲಿ ಬೆಂಗಳೂರು, ಮೈಸೂರಿನಲ್ಲಿ 'ಜಾಕಿ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಹೊಸದಾಗಿ ಬಿಡುಗಡೆಯಾಗುವ ದೊಡ್ಡ ಸಿನಿಮಾಗಳಿಗೆ ಸಿಗುವಂತ ರೆಸ್ಪಾನ್ಸ್ 'ಜಾಕಿ'ಗೆ ಈ ಬಾರಿ ಸಿಕ್ಕಿದೆ. 14 ವರ್ಷಗಳ ಹಿಂದೆ ಚಿತ್ರವನ್ನು ಪ್ರೇಕ್ಷಕರು ಹೇಗೆ ನೋಡಿ ಖುಷಿಪಟ್ಟಿದ್ದರೋ ಅದೇ ರೀತಿ ಈಗ ಎಂಜಾಯ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಅಪ್ಪು' ಸಿನಿಮಾ ರೀ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಇದೀಗ 'ಜಾಕಿ' ರೀ ರಿಲೀಸ್ ಬಳಿಕ ಶಿವರಾಜ್‌ಕುಮಾರ್ ಬರ್ತ್‌ಡೇಗೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡುವ ಗುಸುಗುಸು ಶುರುವಾಗಿದೆ. ಜುಲೈ 12ಕ್ಕೆ ಹ್ಯಾಟ್ರಿಕ್ ಹೀರೊ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆ ಸಂಭ್ರಮವನ್ನು ಡಬಲ್ ಮಾಡಲು 'ಜೋಗಿ' ಬರ್ತಾನಂತೆ. ಹೌದು ಹೀಗೊಂದು ಗುಸುಗುಸು ಇದೀಗ ಶುರುವಾಗಿದೆ. ಯೂಟ್ಯೂಬ್‌ನಲ್ಲಿ 'ಜೋಗಿ' ಚಿತ್ರವನ್ನು ತೆಗೆಯಲಾಗಿದ್ದು ಬೆಳ್ಳಿಪರದೆಗೆ ಮತ್ತೆ ಸಿನಿಮಾ ಬರುತ್ತದೆ ಎನ್ನುವ ಸುಳಿವು ಸಿಕ್ಕಿದೆ. 19 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಜೋಗಿ' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಶಿವಣ್ಣ-ಪ್ರೇಮ್ ಕಾಂಬಿನೇಷನ್ ಮಾಡಿದ್ದ ಜಾದೂ ಪ್ರೇಕ್ಷಕರು ಇನ್ನು ಮರೆತ್ತಿಲ್ಲ.

Buzz After Blockbuster Response To Jackie Shivarajumar s this movie set to re-release

'ಜೋಗಿ', 'ಮುಂಗಾರು ಮಳೆ', 'ದುನಿಯಾ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡುವಂತೆ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. 'ಜಾಕಿ' ಸಕ್ಸಸ್ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಬಾರಿ ಶಿವಣ್ಣನ ಹುಟ್ಟುಹಬ್ಬ ಶುಕ್ರವಾರ ಬರ್ತಿದೆ. ಹಾಗಾಗಿ ವೀಕೆಂಡ್‌ನಲ್ಲಿ 'ಜೋಗಿ' ರೀ ರಿಲೀಸ್ ಪ್ಲ್ಯಾನ್ ನಡೀತಿದೆ. ಕನ್ನಡ ಚಿತ್ರರಂಗದಲ್ಲಿ ಮಧ್ಯರಾತ್ರಿ ಶೋ, ಫ್ಯಾನ್ಸ್ ಶೋಗಳನ್ನು ಪರಿಚಿಯಿಸಿದ ಮೊದಲ ಸಿನಿಮಾ ಇದು. 61 ಸ್ಕ್ರೀನ್‌ಗಳಲ್ಲಿ ಶತದಿನೋತ್ಸವ ಆಚರಿಸಿ ದಾಖಲೆ ಬರೆದಿತ್ತು.

19 ವರ್ಷಗಳ ಹಿಂದೆ ಥಿಯೇಟರ್‌ಗಳಲ್ಲಿ 'ಜೋಗಿ' ಕ್ರೇಜ್ ಹೇಗಿತ್ತು? ಎನ್ನುವುದನ್ನು ಸಿನಿರಸಿಕರು ಇನ್ನು ಮರೆತ್ತಿಲ್ಲ. ವರಮಹಾಲಕ್ಷ್ಮಿ ಹಬ್ಬದ ದಿನವೇ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪೋಸ್ಟರ್‌ಗಳಲ್ಲಿ ಶಿವಣ್ಣ ಲುಕ್ಕು, ಲಾಂಗ್ ಹಿಡಿದ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುರುಕಿರಣ್ ಸಂಗೀತ ಪ್ರೇಮ್ ಸಾಹಿತ್ಯದ 'ಜೋಗಿ' ಆಲ್ಬಮ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿತ್ತು.

ಮಾದೇಶ ಅಲಿಯಾಸ್ ಜೋಗಿಯಾಗಿ ಶಿವಣ್ಣನ ಆರ್ಭಟ, ರೌಡಿಸಂ, ಮದರ್ ಸೆಂಟಿಮೆಂಟ್ ಎಲ್ಲವೂ ಸೇರಿ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರು. ಅವತ್ತಿನ ಕಾಲಕ್ಕೆ ಕೆಲವೆಡೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಐದಾರು ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಎಲ್ಲವೂ ಹೌಸ್‌ಫುಲ್ ಆಗಿತ್ತು. ಇದೀಗ ಚಿತ್ರವನ್ನ ರೀಮಾಸ್ಟರ್ಡ್‌ ವರ್ಷನ್‌ನಲ್ಲಿ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

More from Filmibeat

English summary
Shivarajkumar's this cult hit film to Re-release on his birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X