'ಕಾಂತಾರ- 1' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್!
ಒಂದೇ ಒಂದು ಹಿಟ್ ಸಿನಿಮಾ ನಟನ ಬದುಕಿನಲ್ಲಿ ಭಾರೀ ಬದಲಾವಣೆ ತಂದುಬಿಡುತ್ತದೆ. 'KGF' ಚಿತ್ರದಿಂದ ಯಶ್, 'ಕಾಂತಾರ' ಚಿತ್ರದಿಂದ ರಿಷಬ್ ಶೆಟ್ಟಿ ನಸೀಬು ಬದಲಾಗಿಬಿಡ್ತು. ಈಗ ಮಾಡಿದ್ರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎನ್ನುವ ಮಟ್ಟಕ್ಕೆ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. 'ಕಾಂತಾರ'-1 ಬಳಿಕ ರಿಷಬ್ ಶೆಟ್ಟಿ ಸಂಭಾವನೆ ಕೇಳಿ ನಿರ್ಮಾಪಕರೇ ಶಾಕ್ ಆಗುತ್ತಿದ್ದಾರೆ.
'ಕಾಂತಾರ- 1' ಸಕ್ಸಸ್ ಕಣ್ಣ ಮುಂದಿದೆ. ಹಾಗಾಗಿ ಅವರು ಕೇಳಿದಷ್ಟು ಸಂಭಾವನೆ ಕೊಡಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಬೇಕಿದೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಇನ್ನು ಛತ್ರಪತಿ ಶಿವಾಜಿ ಬಯೋಪಿಕ್‌ನಲ್ಲಿ ಕೂಡ ರಿಷಬ್ ಶೆಟ್ಟಿ ನಟಿಸಬೇಕಿದೆ. ಸಿತಾರ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ಸಂಭಾವನೆ ವಿಚಾರ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

'ಜೈ ಹನುಮಾನ್' ಚಿತ್ರಕ್ಕೆ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜನವರಿಯಲ್ಲೇ ಚಿತ್ರೀಕರಣ ಆರಂಭ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈವರೆಗೆ ಶುರುವಾಗಿಲ್ಲ. 'ಕಾಂತಾರ- 1' ಸಕ್ಸಸ್ ಸಂಭ್ರಮದಲ್ಲಿ ಡಿವೈನ್ ಸ್ಟಾರ್ ತೇಲುತ್ತಿದ್ದಾರೆ. ಇತ್ತೀಚೆಗೆ ಕನಕಪುರದಲ್ಲಿ ನಡೆದ 'ಕನಕೋತ್ಸವ' ಕಾರ್ಯಕ್ರಮದಲ್ಲಿ ರಿಷಬ್ ಕಾಣಿಸಿಕೊಂಡಿದ್ದರು.
ಚಿತ್ರವೊಂದಕ್ಕೆ ರಿಷಬ್ ಶೆಟ್ಟಿ 80 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. 'ಕಾಂತಾರ' ಚಿತ್ರಕ್ಕೆ ಕೇವಲ 4 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಬಳಿಕ 'ಕಾಂತಾರ- 1' ಚಿತ್ರಕ್ಕೆ ಸಂಭಾವನೆ ಸೇರಿ ಲಾಭದಲ್ಲಿ ಪಾಲು ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ನಿರ್ದೇಶಕ, ಹೀರೊ ಎರಡೂ ಆಗಿ ಎರಡ್ಮೂರು ವರ್ಷ ಚಿತ್ರಕ್ಕಾಗಿ ಹಗಳು ರಾತ್ರಿ ಶ್ರಮಿಸಿದ್ದರು. ಹಾಗಾಗಿ 80 ಕೋಟಿ ರೂ.ವರೆಗೆ ಆದಾಯ ಗಳಿಸಿದ್ದರು ಎನ್ನುವ ಚರ್ಚೆ ನಡೀತಿದೆ.

ಸದ್ಯ ಮುಂದಿನ ಸಿನಿಮಾಗಳಿಗೆ ಲಾಭದಲ್ಲಿ ಪಾಲು ಬೇಡ ಸಂಭಾವನೆ ಮಾತ್ರ ಕೊಡಿ ಎಂದು ರಿಷಬ್ ಶೆಟ್ಟಿ ಹೇಳುತ್ತಿದ್ದಾರಂತೆ. ಚಿತ್ರಕ್ಕೆ 80 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ- 1' ಸಿನಿಮಾ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಓಟಿಟಿ, ಸ್ಯಾಟಲೈಟ್ ರೈಟ್ಸ್ ಸೇರಿ ಹೊಂಬಾಳೆ ಸಂಸ್ಥೆಗೆ ಭರ್ಜರಿ ಲಾಭ ಬಂದಿತ್ತು.
ಚಿತ್ರವೊಂದರ ಸ್ಯಾಟಲೈಟ್ ರೈಟ್ಸ್ ಯಾವ ಮೊತ್ತಕ್ಕೆ ಮಾರಾಟವಾಗುತ್ತದೆ ಎನ್ನುವುದನ್ನು ಆಧರಿಸಿ ನಟರ ಸಂಭಾವನೆ ನಿರ್ಧರಿಸಲಾಗುತ್ತದೆ ಎನ್ನುವ ಮಾತಿದೆ. ಜೀ- ಸಂಸ್ಥೆಗೆ 'ಕಾಂತಾರ- 1' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಬಿಕರಿ ಆಗಿತ್ತು. ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ 125 ಕೋಟಿ ರೂ. ಹಾಗೂ ಸ್ಯಾಟಲೈಟ್ ರೈಟ್ಸ್ 80 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿಲ್ಲ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ನೂರಾರು ಕೋಟಿ ರೂ. ಲಾಭ ತಂದುಕೊಟ್ಟಿತ್ತು. ಅದಕ್ಕೆ ಕಾರಣ ರಿಷಬ್ ಶೆಟ್ಟಿ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. 'ಕಾಂತಾರ' ಚಿತ್ರಕ್ಕೆ 4 ಕೋಟಿ ರೂ. ಸಂಭಾವನೆ ಪಡೆದಿದ್ದ ರಿಷಬ್ ಈಗ 20 ಪಟ್ಟು ಹೆಚ್ಚು ಅಂದರೆ 80 ಕೋಟಿ ರೂ. ಕೇಳುತ್ತಿದ್ದಾರೆ ಎನ್ನುವುದು ಸಂತಸದ ವಿಷಯವೇ ಸರಿ. ಆದರೆ ನಿರ್ಮಾಪಕರಿಗೆ ಮಾತ್ರ ಇದು ಶಾಕ್ ತಂದಿದೆ. ಇದೆಲ್ಲದರ ನಡುವೆ ರಿಷಬ್ ಹೊಸ ಸಿನಿಮಾ ಆರಂಭಿಸುವುದು ಯಾವಾಗ? ಸಿನಿಮಾ ರಿಲೀಸ್ ಆಗುವುದು ಯಾವಾಗ? ಎನ್ನುವ ಪ್ರಶ್ನೆ ಕಾಡುತ್ತಿದೆ.


Click it and Unblock the Notifications











