'ಭೈರತಿ ರಣಗಲ್' ಬಳಿಕ ನರ್ತನ್ ನೆಕ್ಸ್ಟ್ ಸಿನಿಮಾ ಫಿಕ್ಸ್?; ಹೀರೊ ಯಾರು ಗೊತ್ತಾ?

ಕೆಲ ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಮ್ಯಾಜಿಕ್ ಮಾಡಿಬಿಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಸಾಕಷ್ಟು ನಿರ್ದೇಶಕರು ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನರ್ತನ್ ಆ ರೀತಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. 'ಮಫ್ತಿ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟು ಗಮನ ಸೆಳೆದಿದ್ದರು.

'ಮಫ್ತಿ' ನಂತರ ಯಶ್ ನಟನೆಯ 19ನೇ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ತೆಲುಗು ನಟ ಅಲ್ಲು ಅರ್ಜುನ್‌ಗೂ ಕಥೆ ಹೇಳಿ ಬಂದಿದ್ದಾರೆ. ಇದೆಲ್ಲದರ ಬಳಿಕ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಸಿನಿಮಾ ಮಾಡಿ ಗೆದ್ದಿದ್ದಾರೆ. ನವೆಂಬರ್ 15ಕ್ಕೆ ತೆರೆಗೆ ಬಂದಿದ್ದ ಈ ಆಕ್ಷನ್ ಎಂಟರ್‌ಟೈನರ್ ಸೂಪರ್ ಹಿಟ್ ಲಿಸ್ಟ್ ಸೇರಿದೆ.

Buzz Bhairathi Ranagal director Narthan to team up with Suriya for his next

ಸದ್ಯ ಓಟಿಟಿಗೆ ಬಂದು 'ಭೈರತಿ ರಣಗಲ್' ಸಿನಿಮಾ ವೀಕ್ಷಕರನ್ನು ರಂಜಿಸುತ್ತಿದೆ. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಕ್ರಿಸ್‌ಮಸ್‌ ಸಂಭ್ರಮದಲ್ಲಿ ರಿಲೀಸ್ ಆಗಿದೆ. ಇದೆಲ್ಲದರ ನಡುವೆ ನರ್ತನ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ನಟ ಸೂರ್ಯ ನಟನೆಯ ಚಿತ್ರಕ್ಕೆ 'ಮಫ್ತಿ' ಮಾಸ್ಟರ್ ಆಕ್ಷನ್ ಕಟ್ ಹೇಳುವುದು ಖಚಿತ ಎನ್ನಲಾಗ್ತಿದೆ.

ಇತ್ತೀಚೆಗೆ ಸಂದರ್ಶನಗಳಲ್ಲಿ ಮಾತನಾಡಿದ್ದ ನರ್ತನ್ ಮುಂದಿನ ಸಿನಿಮಾ ತಯಾರಿ ನಡೀತಿದೆ. ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮುಂದಿನ ಸಿನಿಮಾ ಎಂದು ಮಾತುಕತೆ ನಡೆದಿದೆ. ಸೂರ್ಯ ಹಾಗೂ ರಾಮ್‌ಚರಣ್ ಸೇರಿದಂತೆ ಕೆಲವರಿಗೆ ಕಥೆ ಹೇಳಿದ್ದೇನೆ. ನೋಡಬೇಕು ಯಾವ ಸಿನಿಮಾ ಮೊದಲು ಶುರುವಾಗುತ್ತದೆ ಎಂದಿದ್ದರು. ಸೂರ್ಯ ಜೊತೆ ಸಿನಿಮಾ ಬಹುತೇಕ ಫಿಕ್ಸ್ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಕೆವಿಎನ್ ಸಂಸ್ಥೆಯೇ ಈ ಚಿತ್ರಕ್ಕೆ ಹಣ ಹೂಡಲಿದೆಯಂತೆ.

Buzz Bhairathi Ranagal director Narthan to team up with Suriya for his next

ತಮಿಳು ನಟ ಸೂರ್ಯ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಬಂದ 'ಕಂಗುವ' ಸಿನಿಮಾ ಹೀನಾಯವಾಗಿ ಸೋತಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡು ಪ್ರೇಕ್ಷಕರ ನಿರೀಕ್ಷೆ ಹುಸಿಗೊಳಿಸಿತ್ತು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ರೆಟ್ರೋ' ಎಂಬ ಚಿತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಚಿತ್ರದ ಟೀಸರ್ ಸಹ ಹೊರಬಂದಿದೆ.

'ಕಂಗುವ' ಸೋಲಿನ ಬಳಿಕ ಸೂರ್ಯ ನಟಿಸಬೇಕಿದ್ದ ಬಿಗ್‌ ಪ್ರಾಜೆಕ್ಟ್‌ಗಳು ನಿಂತು ಹೋಯಿತು ಎನ್ನುವ ವದಂತಿ ಹರಿದಾಡಿತ್ತು. 'ರೆಟ್ರೋ' ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಡಿಪ್ಪಿನ್ ನಾಯಗನ್ ಬ್ಯುಸಿಯಾಗಿದ್ದಾರೆ. ಬಳಿಕ ನರ್ತನ್ ಸಿನಿಮಾ ಶುರುವಾಗುವ ಸಾಧ್ಯತೆಯಿದೆ.

ಈಗಾಗಲೇ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬೇರೆ ಭಾಷೆಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ದಳಪತಿ69 ಚಿತ್ರವನ್ನು ಭಾರೀ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಅಂದಹಾಗೆ ಯಶ್- ನರ್ತನ್ ಚಿತ್ರವನ್ನು ಕೂಡ ಇದೇ ಸಂಸ್ಥೆ ನಿರ್ಮಿಸುತ್ತದೆ ಎನ್ನಲಾಗಿತ್ತು. ಸದ್ಯ ಯಶ್ ನಟನೆಯ 'ಟಾಕ್ಸಿಕ್', ದಳಪತಿ ವಿಜಯ್ 69ನೇ ಸಿನಿಮಾ, ಧ್ರುವ ಸರ್ಜಾ 'ಕೆಡಿ' ಸೇರಿದಂತೆ ದೊಡ್ಡ ದೊಡ್ಡ ಪ್ರಾಜೆಕ್ಟ್ ಕೆಲಸಗಳು ನಡೀತಿದೆ.

ತಮಿಳಿನಲ್ಲಿ ಸೂರ್ಯ ಕ್ರೇಜ್ ದೊಡ್ಡದಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರ ಸಿನಿಮಾಗಳು ಸದ್ದು ಮಾಡುತ್ತದೆ. ಸದ್ಯ ಸ್ಟಾರ್ ನಟರು 5 ಭಾಷೆಗಳಲ್ಲಿ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಮುಂದಾಗಿದ್ದಾರೆ. ನರ್ತನ್ -ಸೂರ್ಯ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರುವುದು ಖಚಿತವಾಗಿದೆ.

ಈಗಾಗಲೇ ಕನ್ನಡದ ಪ್ರಶಾಂತ್ ಎ. ಹರ್ಷ ರೀತಿಯ ಫಿಲ್ಮ್ ಮೇಕರ್ಸ್ ಪರಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಅವರ ಹಾದಿಯಲ್ಲಿ ನರ್ತನ್ ಕೂಡ ಹೋಗುತ್ತಾರಾ? ಕಾದು ನೋಡಬೇಕು. ಆದರೆ ಈ ಬಗ್ಗೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿರುವ ನರ್ತನ್ ಇನ್ನು ಖಚಿತವಾಗಿಲ್ಲ ಎಂದಿದ್ದಾರೆ.

More from Filmibeat

English summary
After Mufti and Bhairathi Ranagal, Narthan to join hands with tamil actor suriya for 3rd film;
Read more about: narthan surya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X