ಕೊನೆಗೂ ಸಿಕ್ತು 'ಕಾಟೇರ' ಕ್ರೇಜಿ ಅಪ್‌ಡೇಟ್.. ಫ್ಯಾನ್ಸ್ ರೆಡಿಯಾಗಿ.. ಅನೌನ್ಸ್‌ಮೆಂಟ್ ಮಾತ್ರ ಬಾಕಿ

ದರ್ಶನ್ ನಟನೆಯ 'ಕಾಟೇರ' ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ. ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸಾಂಗ್, ಟೀಸರ್ ರಿಲೀಸ್ ಯಾವಾಗ ಹೇಳಿ ಎಂದು ಚಿತ್ರತಂಡಕ್ಕೆ ದುಂಬಾಲು ಬಿದ್ದಿದ್ದಾರೆ. ಅಂತೂ ಇಂತೂ 'ಕಾಟೇರ'ನ ಆರ್ಭಟಕ್ಕೆ ಸಮಯ ಹತ್ತಿರವಾಗಿದೆ.

ತರುಣ್ ಸುಧೀರ್ ನಿರ್ದೇಶನಸ 'ಕಾಟೇರ' ಚಿತ್ರವನ್ನು ರಾಕ್‌ಲೈನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಪೀರಿಯಡ್ ಆಕ್ಷನ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಖಡಕ್ ಟೈಟಲ್‌ನಿಂದಲೇ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. 'ಕ್ರಾಂತಿ' ಬಳಿಕ ಅಭಿಮಾನಿಗಳು 'ಕಾಟೇರ' ದರ್ಶನಕ್ಕೆ ಕಾಯುವಂತಾಗಿದೆ.

Buzz: Darshans Kaatera First Song Announcement expected To be december first week

ಚಿತ್ರದಲ್ಲಿ 70-80ರ ದಶಕದ ಕತೆಯನ್ನು ಹೇಳಲಾಗುತ್ತಿದೆ. ನಟ ದರ್ಶನ್ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚಿತ್ರದಲ್ಲಿ 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ ಕತೆ ಹೇಳಲಾಗುತ್ತಿದೆ. ಬರೀ ಪೋಸ್ಟರ್‌ಗಳಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡುತ್ತಿದೆ. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕುಮಾರ್ ಗೋವಿಂದ್, ಜಗಪತಿ ಬಾಬು, ಶೃತಿ, ಶ್ರೀನಿವಾಸ್ ಮೂರ್ತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಒಳ್ಳೆ ತಂತ್ರಜ್ಞರ ತಂಡವನ್ನ ಕಟ್ಟಿಕೊಂಡು ತರುಣ್ ಕತೆ ಹೇಳಲು ಬರುತ್ತಿದ್ದಾರೆ.

'ಕಾಟೇರ'ನಾಗಿ ದರ್ಶನ್ ಲುಂಗಿ ಉಟ್ಟು ಕತ್ತಿ ಹಿಡಿದು ಅಬ್ಬರಿಸಲು ಬರುತ್ತಿದ್ದಾರೆ. ದಸರಾ, ದೀಪಾವಳಿಗೆ ಅಪ್‌ಡೇಟ್ ಸಿಗುತ್ತೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಸಿಗಲೇಯಿಲ್ಲ. ಪರಿ ಪರಿಯಾಗಿ ನಿರ್ದೇಶಕರ ಮುಂದೆ ಬೇಡಿಕೆ ಇಟ್ಟಿದ್ದರು. ಕೊನೆಗೂ ಅಭಿಮಾನಿಗಳ ಬೇಡಿಕೆ ಪುರಸ್ಕರಿಸಿ 'ಕಾಟೇರ'ನ ಜಬರ್ದಸ್ತ್ ದರ್ಬಾರ್ ತೋರಿಸುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಬಲ್ಲ ಮೂಲಗಳ ಪ್ರಕಾರ ಡಿಸೆಂಬರ್ ಮೊದಲ ವಾರದಲ್ಲೇ 'ಕಾಟೇರ' ಫಸ್ಟ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ಅಭಿಮಾನಿಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

Buzz: Darshans Kaatera First Song Announcement expected To be december first week

ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಹಾಗೂ ಮಾಸ್ತಿ ಸಂಭಾಷಣೆಯಿದೆ. ನಿರ್ದೇಶಕ ಜಡೇಶ್ ಕುಮಾರ್ ಜೊತೆ ಸೇರಿ ತರುಣ್ ಕತೆ ಸಿದ್ಧಪಡಿಸಿದ್ದಾರೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 'ಕಾಟೇರ' ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯಿಂದ ಹಳ್ಳಿಗಳಲ್ಲಿ ಏನೆಲ್ಲಾ ಆಯಿತು? ಎನ್ನುವುದನ್ನು ರೈತರು, ಜಮೀದ್ದಾರರು ಹಾಗೂ ಹಳ್ಳಿಯ ದುಷ್ಟರ ಕೋನದಲ್ಲಿ ಹೇಳುತ್ತಿದ್ದಾರಂತೆ.

'ಕ್ರಾಂತಿ' ಬಿಟ್ಟರೆ ಈ ವರ್ಷ ದರ್ಶನ್ 'ಗರಡಿ' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ವರ್ಷವೇ 'ಕಾಟೇರ' ರಿಲೀಸ್ ನಿರೀಕ್ಷೆ ಇತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ. ಸೆಟ್‌ಗಳನ್ನು ಹಾಕಿ, ಹಳ್ಳಿಗಳ ಹಳೇ ರಸ್ತೆಗಳು, ಮನೆಗಳ ಬಳಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಇನ್ನು 'ಕಾಟೇರ' ಫಸ್ಟ್ ಸಾಂಗ್ ಬಗ್ಗೆ ನಿರೀಕ್ಷೆಯಿದೆ. ಕಾರಣ ವಿ. ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್. ಇವರಿಬ್ಬರ ಕಾಂಬಿನೇಷನ್‌ ಸಾಂಗ್ ಸೃಷ್ಟಿಸಿರುವ ಸಂಚಲನ ಗೊತ್ತೇಯಿದೆ. ಹಾಗಾಗಿಯೇ 'ಕಾಟೇರ' ಆಲ್ಬಮ್‌ ಕೂಡ ನಿರೀಕ್ಷೆ ಹುಟ್ಟಾಕ್ಕಿದೆ.

ತರುಣ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಈ ಜೋಡಿ 'ರಾಬರ್ಟ್' ಸಿನಿಮಾ ಮಾಡಿ ಗೆದ್ದಿತ್ತು. ಅರ್ಜುನ್ ಜನ್ಯಾ ಸಂಗೀತದ ಆ ಸಿನಿಮಾ ಸಾಂಗ್ ಹಿಟ್ ಆಗಿತ್ತು. ಹಾಗಾಗಿ 'ಕಾಟೇರ' ಸಾಂಗ್ಸ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಅಪ್‌ಡೇಟ್ ಸಿಗಲಿದೆ. ಮತ್ತೆ ತರುಣ್ ಸುದೀಪ್ - ದರ್ಶನ್ ಕಾಂಬೋ ಮ್ಯಾಜಿಕ್ ಹೇಗಿರುತ್ತೆ ಕಾದುನೋಡಬೇಕಿದೆ. ಆನಂದ್ ಆಡಿಯೋ ಸಂಸ್ಥೆ ಆಡಿಯೋ ರೈಟ್ಸ್ ಖರೀದಿಸಿದೆ.

More from Filmibeat

English summary
First single from Darshan starrer Kaatera on december first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X