ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಬಹದ್ದೂರ್ ಚೇತನ್ ಆಕ್ಷನ್ ಕಟ್

'ಕೃಷ್ಣಂ ಪ್ರಣಯಸಖಿ' ಸಿನಿಮಾ ಸಕ್ಸಸ್ ಬಳಿಕ ನಟ ಗಣೇಶ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಳ್ತಿದೆ. ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ನಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಜುಲೈ 2ಕ್ಕೆ ಗಣಿ ಹುಟ್ಟುಹಬ್ಬದ ಸಂಭ್ರಮದಲ್ಲೇ ಸಿನಿಮಾ ಘೋಷಣೆ ಆಗುವ ಸಾಧ್ಯತೆಯಿದೆ.

ಕಮರ್ಷಿಯಲ್ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಚೇತನ್. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾಗಳ ಸರದಾರ ಗಣೇಶ್. ಹಾಗಾಗಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಯಾವ ರೀತಿಯ ಸಿನಿಮಾ ಬರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಎರಡು ವರ್ಷಗಳ ಹಿಂದೆಯೇ ಗಣೇಶ್ ಅವರಿಗೆ ಚೇತನ್ ಕಥೆ ಹೇಳಿದ್ದಾರೆ ಎನ್ನಲಾಗಿತ್ತು. ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರಿಂದ ಇದೀಗ ಒಂದಾಗುವ ಸಮಯ ಬಂದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

Buzz Ganesh to collaborate with Director Bahaddur chethan Kumar

'ಕೃಷ್ಣಂ ಪ್ರಣಯಸಖಿ' ಬಳಿಕ ಗಣೇಶ್ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಎಂಬ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ನಟಿಸುತ್ತಿದ್ದಾರೆ. ವಿಖ್ಯಾತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ 'ಪಿನಾಕ' ಎಂಬ ಹಾರರ್ ಥ್ರಿಲ್ಲರ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ತೆಲುಗು ಸಂಸ್ಥೆಯ ಜೊತೆ ಮತ್ತೊಂದು ಸಿನಿಮಾ ಮಾತುಕತೆ ನಡೀತಿದೆ. ಈ ಮೂರು ಸಿನಿಮಾಗಳ ಜೊತೆಗೆ ಬಹದ್ಧೂರ್ ಚೇತನ್ ನಿರ್ದೇಶನದ ಸಿನಿಮಾದಲ್ಲಿ ಗಣಿ ಮಿಂಚಲಿದ್ದಾರೆ.

'ಬಹದ್ಧೂರ್' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚೇತನ್ ಕುಮಾರ್ ಗುರ್ತಿಸಿಕೊಂಡಿದ್ದರು. ಬಳಿಕ ಧ್ರುವ ಸರ್ಜಾ ಜೊತೆಗೆ 'ಭರ್ಜರಿ' ಸಿನಿಮಾ ಮಾಡಿದ್ದರು. ನಂತರ ಶ್ರೀಮುರಳಿ ಕಾಂಬಿನೇಷನ್‌ನಲ್ಲಿ 'ಭರಾಟೆ' ಸಿನಿಮಾ ನಿರ್ದೇಶಿಸಿ ಗೆದ್ದಿದ್ದರು. ಆ ನಂತರ ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ.

ಕಿರುತೆರೆ ನಟ ರಕ್ಷ್ ಹೀರೊ ಆಗಿ ನಟಿಸಲಿರುವ 'ಬರ್ಮ' ಚಿತ್ರವನ್ನು ಸದ್ಯ ಚೇತನ್ ಕಟ್ಟಿಕೊಡುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದೆ. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಬರ್ಮ' ಸಿನಿಮಾ ನಿರ್ಮಾಣವಾಗುತ್ತಿದೆ. ಧ್ರುವ, ಶ್ರೀಮುರಳಿ, ಪುನೀತ್ ರಾಜ್‌ಕುಮಾರ್ ರೀತಿಯ ಸ್ಟಾರ್ ನಟರ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದ ಚೇತನ್ 'ಬರ್ಮ' ಚಿತ್ರದಲ್ಲಿ ಹೊಸ ನಟನನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈಗಾಗಲೇ ಚೇತನ್ ಹೇಳಿರುವ ಕಥೆ ಗಣೇಶ್ ಅವರಿಗೆ ಇಷ್ಟವಾಗಿದ್ದು ಸಿನಿಮಾ ಮಾಡಲು ಒಪ್ಪಿದ್ದಾರೆ. ಸದ್ಯ ನಿರ್ಮಾಪಕರು, ಪ್ರೊಡಕ್ಷನ್ ಹೌಸ್ ಜೊತೆ ಚರ್ಚೆ ನಡೀತಿದೆ. ಗಣಿ ಹುಟ್ಟುಹಬ್ಬಕ್ಕೆ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ. ಈವರೆಗೆ ಇಬ್ಬರೂ ಅಧಿಕೃತವಾಗಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿಲ್ಲ. ಇನ್ನು ಚೇತು ಸ್ಟೈಲ್ ಕಮರ್ಷಿಯಲ್ ಸಿನಿಮಾ ಮೂಡಿ ಬರುವ ಸಾಧ್ಯತೆ ದಟ್ಟವಾಗಿದೆ.

FAQs
ನಟ ಗಣೇಶ್ ನಿರ್ದೇಶನ ಮಾಡಿದ್ದ ಸಿನಿಮಾ ಯಾವುದು?

ಗೋಲ್ಡನ್ ಸ್ಟಾರ್ ಗಣೇಶ್ ಹೀರೊ ಆಗಿ ಕಿರುತೆರೆ ನಿರೂಪಕರಾಗಿ ಪರಿಚಯ ಇದ್ದಾರೆ. ಆದರೆ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಕೂಡ ಕೈ ಹಾಕಿದ್ದರು. ಮುಸ್ಸಂಜೆ ಮಹೇಶ್ ನಿರ್ದೇಶನದಲ್ಲಿ 'ಕೂಲ್- ಸಖತ್ ಹಾಟ್ ಮಗಾ' ಎಂಬ ಚಿತ್ರ ಆರಂಭವಾಗಿತ್ತು. ಪತ್ನಿ ಶಿಲ್ಪಾ ಗಣೇಶ್ ಹಣ ಹೂಡಿದ್ದರು. ಆದರೆ ಚಿತ್ರೀಕರಣ ಶುರುವಾಗಿ ಕೆಲ ಭಿನ್ನಾಭಿಪ್ರಾಯಗಳಿಂದ ಮಹೇಶ್ ಚಿತ್ರದಿಂದ ಹೊರ ನಡೆದಿದ್ದರು. ಆಗ ಸ್ವತಃ ಗಣೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

Filmibeat Entertainment

More from Filmibeat

English summary
Krishnam Pranaya Sakhi star Ganesh to team up with Director chethan Kumar
Read more about: ganesh chethan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X