'ಟಾಕ್ಸಿಕ್' ರಿಲೀಸ್ ಡೇಟ್ ಫಿಕ್ಸ್ ಆಯ್ತಾ? ಆ ದಿನ ಕಾದಿದೆ ಸರ್‌ಪ್ರೈಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿದ್ಧವಾಗ್ತಿದೆ. ಸದ್ಯ ಮುಂಬೈನಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ. ಯಶ್ ಜೊತೆ ಕಿಯಾರ ಅಡ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

400 ರಿಂದ 500 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣ ನಡೀತಿದೆ ಎಂದು ಗುಲ್ಲಾಗಿದೆ. ಇನ್ನುಳಿದಂತೆ ಪರಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.

Buzz Rocking star Yash starrer Toxic to release on this date

'KGF'-2 ಸಿನಿಮಾ ಬಿಡುಗಡೆ ಆಗಿ ಒಂದೂವರೆ ವರ್ಷದ ಬಳಿಕ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. ಕಳೆದ ವರ್ಷ ಡಿಸೆಂಬರ್ 8ರಂದು ಮೋಷನ್ ಪೋಸ್ಟರ್ ಸಮೇತ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿತ್ತು. ರಿಲೀಸ್ ಡೇಟ್ ಸಹ ರಿವೀಲ್ ಆಗಿತ್ತು. ಆದರೆ ಈ ವರ್ಷ ಆಗಸ್ಟ್ 8ರಂದು ಸಿನಿಮಾ ಸೆಟ್ಟೇರಿತು. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಹಾಕಿದ್ದ ಸೆಟ್‌ನಲ್ಲಿ ಪೂಜೆ ಸಲ್ಲಿಸಿ ಚಿತ್ರೀಕರಣ ಆರಂಭಿಸಲಾಯಿತು.

ಮುಹೂರ್ತ ತಡವಾಗಿದ್ದರಿಂದ ಸಹಜವಾಗಿಯೇ ಚಿತ್ರೀಕರಣದ ಶೆಡ್ಯೂಲ್‌ಗಳು ಮುಂದಕ್ಕೆ ಹೋಯಿತು. ಆದರೆ ಮೊದಲು ಹೇಳಿದಂತೆ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರುವುದು ಅನುಮಾನ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಚಿತ್ರ ಅಂದು ಬರುವುದು ಖಚಿತವಾಗಿ ಗೊಂದಲ ಉಂಟಾಗಿತ್ತು. ಇತ್ತೀಚೆಗೆ ಯಶ್ ಸಂದರ್ಶನವೊಂದರಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ್ದರು.

ಮುಂದಿನ ವರ್ಷ ಡಿಸೆಂಬರ್‌ನಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುವುದು ಖಚಿತ ಎನ್ನುವ ಊಹಾಪೋಹ ಶುರುವಾಗಿದೆ. ಹೇಳಿ ಕೇಳಿ ಅದು ರಾಕಿಂಗ್ ಸ್ಟಾರ್ ಲಕ್ಕಿ ತಿಂಗಳು. ಅವರು ಮದುವೆ ಆಗಿದ್ದು, ಮಗಳು ಹುಟ್ಟಿದ್ದು, 'ಮಿ. & ಮಿ. ರಾಮಾಚಾರಿ' ಹಾಗೂ 'ಕೆಜಿಎಫ್‌-1' ಸಿನಿಮಾಗಳು ಬಿಡುಗಡೆ ಆಗಿದ್ದು ಎಲ್ಲವೂ ಡಿಸೆಂಬರ್‌ನಲ್ಲೇ. ಹಾಗಾಗಿ ಮುಂದಿನ ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಹಾಲಿವುಡ್ ಸಿನಿಮಾಗಳನ್ನು ಕೂಡ ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆ ಮಾಡುವುದು ಹೆಚ್ಚು. 'ಟಾಕ್ಸಿಕ್' ಚಿತ್ರವನ್ನು ಯೂರೋಪ್‌ನಲ್ಲಿ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ಡಿಸೆಂಬರ್‌ನಲ್ಲೇ ಸಿನಿಮಾ ಬರಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಡಿಸೆಂಬರ್ 4ನೇ ತಾರೀಖಿನ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ ಎನ್ನಲಾಗ್ತಿದೆ.

ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೂ ಮುನ್ನ 'ಟಾಕ್ಸಿಕ್' ಸಿನಿಮಾ ದೊಡ್ಡದಾಗಿ ಸದ್ದು ಮಾಡ್ತಿದೆ. ಪರಭಾಷಿಕರು ಕೂಡ ಈ ಚಿತ್ರಕ್ಕಾಗಿ ಕಾತರದಿಂದ ಕಾಯುವಂತಾಗಿದೆ. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ ಟೀಸರ್ ಸಮೇತ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗುವ ನಿರೀಕ್ಷೆಯಿದೆ. ಕೊನೆ ಪಕ್ಷ ಫಸ್ಟ್ ಲುಕ್ ಪೋಸ್ಟರ್ ಹೊರಬರಬಹುದು.

'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನತಾರ ನಟಿಸುತ್ತಿದ್ದಾರೆ. ಇನ್ನುಳಿದಂತೆ ಹುಮಾ ಖುರೇಶಿ, ಡ್ಯಾರೆಲ್ ಡಿಸಿಲ್ವಾ, ಅಕ್ಷಯ್ ಒಬೆರಾಯ್ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿದ್ದು 60, 70ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಚಿತ್ರದ ಛಾಯಾಗ್ರಹಕರಾಗಿದ್ದಾರೆ. ಹಾಲಿವುಡ್‌ನ ಜೆಜೆ ಪೆರ್ರಿ ಸ್ಟಂಟ್ಸ್ ಕಂಪೋಸ್ ಮಾಡುತ್ತಿದ್ದಾರೆ. ನಟ ಬೆನೆಡಿಕ್ಟ್ ಗ್ಯಾರೆಟ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

More from Filmibeat

English summary
Yash starrer Toxic Release date will be Officially announced on his Birthday;
Read more about: toxic yash sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X