ಧ್ರುವ ಸರ್ಜಾ 'KD' ಚಿತ್ರದಲ್ಲಿ ಶಿವಣ್ಣ; ಯಾವ ಪಾತ್ರ ಗೊತ್ತಾ?
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗಾಗಲೇ 'ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೊ' ಸಾಂಗ್ ಹಿಟ್ ಆಗಿದೆ.
'ಮಾರ್ಟಿನ್' ಸೋಲಿನ ಬಳಿಕ 'KD' ಆಗಿ ಎದ್ದು ಬರಲು ಆಕ್ಷನ್ ಪ್ರಿನ್ಸ್ ಕಾಯುತ್ತಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

ವಿಲಿಯಂ ಡೇವಿಡ್ ಛಾಯಾಗ್ರಹಣ, ಅರ್ಜುನ್ ಜನ್ಯಾ ಸಂಗೀತ 'KD' ಚಿತ್ರಕ್ಕಿದೆ. ಸದ್ಯ ಚಿತ್ರದ ಬಗ್ಗೆ ಹೊಸದೊಂದು ಸುದ್ದಿ ಕೇಳಿಬರ್ತಿದೆ. ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ. ಅತಿಥಿ ಪಾತ್ರದಲ್ಲಿ ನಟಿಸುತ್ತಾರಾ ಅಥವಾ ಹಾಡಿನ ಝಲಕ್‌ನಲ್ಲಿ ಬಂದು ಹೋಗ್ತಾರಾ ಕಾದು ನೋಡಬೇಕಿದೆ. ಪ್ರೇಮ್ ಹಾಗೂ ಶಿವನ್ಣ ಕ್ರೇಜಿ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಜೋಗಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಬಂದ 'ಜೋಗಯ್ಯ' ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ.
'KD' ಚಿತ್ರದಲ್ಲಿ ಜಂಗಮ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಖುಷಿಯಾಗಿದ್ದಾರೆ. ಇತ್ತೀಚೆಗೆ ಶಿವಣ್ಣ ಕ್ಯಾನ್ಸರ್‌ನಿಂದ ಬಳಲಿದ್ದರು. ಅಮೆರಿಕಾಗೆ ತೆರಳಿ ಚೇತರಿಸಿಕೊಂಡಿದ್ದರು. 40 ದಿನಗಳ ಕಾಲ ಅಲ್ಲೇ ಉಳಿದುಕೊಂಡಿದ್ದರು. ಕ್ಯಾನ್ಸರ್ ಮುಕ್ತರಾಗಿ ತಾಯ್ನಾಡಿಗೆ ವಾಪಸ್ ಬಂದಿದ್ದರು. ಅಲ್ಲಿಂದ ಬಂದ ಬಳಿಕ ಮತ್ತೆ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.
ಧ್ರುವ ಸರ್ಜಾ ನಟನೆಯ 'KD' ಚಿತ್ರದ ಮೂಲಕವೇ ಶಿವಣ್ಣ ಮತ್ತೆ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ. ಒಟ್ಟಾರೆ 'KD' ಚಿತ್ರದಲ್ಲಿ ಧ್ರುವ ಜೊತೆ ಸೆಂಚುರಿ ಸ್ಟಾರ್ ತೆರೆ ಹಂಚಿಕೊಳ್ಳುತ್ತಾರೆ ಎನ್ನುವುದೇ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.ಎರಡು ಭಾಗಗಳಾಗಿ ಈ ಸಿನಿಮಾ ಮೂಡಿ ಬರುತ್ತದೆ ಎನ್ನಲಾಗ್ತಿದೆ.
ಇತ್ತೀಚೆಗೆ 'KD' ಸಿನಿಮಾ ಶೂಟಿಂಗ್ ಸೆಟ್‌ಗೆ ತೆಲುಗು ಚಿತ್ರ ನಿರ್ದೇಶಕ ಪೂರಿ ಜಗನ್ನಾಥ್ ಭೇಟಿ ನೀಡಿದ್ದರು. ಕನ್ನಡದಲ್ಲಿ 'ಯುವರಾಜ' ಹಾಗೂ 'ಅಪ್ಪು' ರೀತಿಯ ಸಿನಿಮಾಗಳನ್ನು ಅವರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. 'ಅಪ್ಪು' ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಬಳಿಕ ತೆಲುಗಿನಲ್ಲಿ ಸಿನಿಮಾ ರೀಮೆಕ್ ಮಾಡಿದಾಗ ಅಲ್ಲಿ ಕೂಡ ರಕ್ಷಿತಾ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರಕ್ಕೆ ಪೂರಿ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಇವರೇ ನಿರ್ದೇಶಿಸಿದ 'ಶಿವಮಣಿ' ಚಿತ್ರದಲ್ಲಿ ಕೂಡ ರಕ್ಷಿತಾ ಬಣ್ಣ ಹಚ್ಚಿದ್ದರು.
ಸ್ನೇಹಿತೆಯನ್ನು ಭೇಟಿ ಮಾಡಲು 'KD' ಸೆಟ್‌ಗೆ ಭೇಟಿ ನೀಡಿದ್ದ ಪೂರಿ ಜಗನ್ನಾಥ್ ತಂಡಕ್ಕೆ ಶುಭ ಕೋರಿದ್ದಾರೆ. ಸ್ನೇಹಿತನನ್ನು ಭೇಟಿ ಮಾಡಿದ್ದರ ಬಗ್ಗೆ ರಕ್ಷಿತಾ ಪ್ರೇಮ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಫೋಟೊಗಳು ಸಹ ವೈರಲ್ ಆಗುತ್ತಿದೆ.


Click it and Unblock the Notifications











