Yuva Rajkumar: ಛೇ.. ದೊಡ್ಮನೆ ಯುವರಾಜನ ಅಭಿಮಾನಿಗಳಿಗೆ ಕಹಿಸುದ್ದಿ

ರಾಘಣ್ಣನ ಕಿರಿಮಗ ಯುವರಾಜ್‌ಕುಮಾರ್ ಹೀರೋ ಆಗಿ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಾಗಿದೆ. ಮೊದಲ ಸಿನಿಮಾ 'ಯುವ' ಸಕ್ಸಸ್ ಕಂಡಿತ್ತು. ಈಗಾಗಲೇ 2 ಹಾಗೂ 3ನೇ ಸಿನಿಮಾಗಳು ಮೇಕಿಂಗ್ ಹಂತದಲ್ಲೇ ಸದ್ದು ಮಾಡ್ತಿವೆ. ಸದ್ಯ ದೊಡ್ಮನೆ ಯುವರಾಜನ ಅಭಿಮಾನಿಗಳಿಗೆ ಬೇಸರದ ಸುದ್ದಿ ಬಂದಿದೆ.

ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಚಿತ್ರದಲ್ಲಿ ಯುವ ರಾಜ್‌ಕುಮಾರ್ ನಟಿಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಹೊಸ ಚಿತ್ರಕ್ಕೂ ಹೀರೊ ಆಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಆ ಸಿನಿಮಾ ಮುಹೂರ್ತ ಕೂಡ ನೆರವೇರಿದೆ. ಎರಡೂ ಸಿನಿಮಾಗಳನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳು ಒಟ್ಟಾಗಿ ನಿರ್ಮಾಣ ಮಾಡುತ್ತಿವೆ.

Buzz Yuvarajkumar Starrer Kannada Ekka film to get postponed

ಸೂರಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಯುವರಾಜ್‌ಕುಮಾರ್ ಜೋಡಿಯಾಗಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. 'ಉತ್ತರಕಾಂಡ' ಸಿನಿಮಾ ಪಕ್ಕಕ್ಕಿಟ್ಟು ರೋಹಿತ್ 'ಎಕ್ಕ' ಚಿತ್ರ ಕೈಗೆತ್ತಿಕೊಂಡಿದ್ದರು. ಕಳೆದ ವರ್ಷ ರಾಜ್ಯೋತ್ಸವ ಸಂಭ್ರಮದಲ್ಲಿ ಈ ಸಿನಿಮಾ ಘೋಷಣೆ ಆಗಿತ್ತು. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಎಕ್ಕ' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿತ್ತು. ಇತ್ತೀಚೆಗೆ ಯುವ ಹುಟ್ಟುಹಬ್ಬಕ್ಕೆ ಜಬರ್ದಸ್ತ್ ಟೀಸರ್ ಹೊರಬಂದಿತ್ತು. ಬೆಂಗಳೂರು ಹಾಗೂ ಮೈಸೂರಿನಲ್ಲಿ ಭರದಿಂದ ಸಿನಿಮಾ ಚಿತ್ರೀಕರಣ ಸಾಗುತ್ತಿದೆ. ಇದೆಲ್ಲದರ ನಡುವೆ ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಮುಹೂರ್ತದ ದಿನವೇ ಜೂನ್ 6ಕ್ಕೆ ಸಿನಿಮಾ ರಿಲೀಸ್ ಎಂದು ಘೋಷಿಸಲಾಗಿತ್ತು. ಇನ್ನು 22 ದಿನಗಳು ಮಾತ್ರ ಬಾಕಿಯಿದೆ. ಆದರೆ ಸಿನಿಮಾ ರಿಲೀಸ್ ಆಗುವ ಯಾವುದೇ ಸುಳಿವು ಸಿಗುತ್ತಿಲ್ಲ.

Buzz Yuvarajkumar Starrer Kannada Ekka film to get postponed

ಬಹಳ ಬಿರುಸಾಗಿಯೇ 'ಎಕ್ಕ' ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಆದರೆ ಇನ್ನು ಕಂಪ್ಲೀಟ್ ಆಗಿಲ್ಲ. ಪೋಸ್ಟ್ ಪ್ರೊಡಕ್ಷನ್ ವರ್ಕ್, ಪ್ರಮೋಷನ್ ಸೇರಿ ಸಾಕಷ್ಟು ಕೆಲಸಗಳು ಬಾಕಿಯಿದೆ. ಹಾಗಾಗಿ ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಅನುಮಾನ ಎನ್ನುವಂತಾಗಿದೆ. ಇದು ಸಹಜವಾಗಿಯೇ ಯುವ ರಾಜ್‌ಕುಮಾರ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ನವೆಂಬರ್ 28ರಂದು ನಗರದ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ 'ಎಕ್ಕ' ಸಿನಿಮಾ ಸೆಟ್ಟೇರಿತ್ತು. ಅದೇ ದಿನ ಜೂನ್ 6ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಘೋಷಿಸಿತ್ತು. ಅಂದರೆ ಕೇವಲ 5 ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಚಿತ್ರ ತೆರೆಗೆ ತರುವ ಲೆಕ್ಕಾಚಾರ ನಡೆದಿತ್ತು. ಅದಕ್ಕೆ ತಕ್ಕಂತೆ ಬಹಳ ಬಿರುಸಿನಿಂದಲೇ ಶೂಟಿಂಗ್ ನಡೆಯುತ್ತಾ ಬರ್ತಿದೆ.

ಮೇ 25ಕ್ಕೆ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತದೆ. ಅದರ ಬೆನ್ನಲ್ಲೇ 'ಎಕ್ಕ' ಸಿನಿಮಾ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದ್ದಂತಿತ್ತು. ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ 10 ದಿನಗಳ ಹಿಂದೆ ಐಪಿಎಲ್ ಪಂದ್ಯಗಳು ನಿಂತಿತ್ತು. ಇದೀಗ ಮತ್ತೆ ಹೊಸ ವೇಳಾಪಟ್ಟಿಯೊಂದಿಗೆ ಟೂರ್ನಿ ಮುಂದುವರೆಸಲಾಗುತ್ತಿದೆ. ಹೊಸ ವೇಳಾಪಟ್ಟಿ ಪ್ರಕಾರ ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ. ಇನ್ನು 'ಎಕ್ಕ' ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆಗುವುದು ಬಹುತೇಖ ಖಚಿತ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

'ಎಕ್ಕ' ರಿಲೀಸ್ ಡೇಟ್ ಮುಂದೂಡುವ ಬಗ್ಗೆ ಚಿತ್ರತಂಡ ಇನ್ನು ಪ್ರತಿಕ್ರಿಯಿಸಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆಯಿದೆ. ಇನ್ನು ಚಿತ್ರದಲ್ಲಿ ಯುವ ರಗಡ್ ಹೈದನಾಗಿ ನಟಿಸಿದ್ದಾರೆ. ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.

More from Filmibeat

English summary
Bad News For Kannada Actor Yuvarajkumar Fans;
Read more about: ekka sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X