ಕಾಲಾ ಸಿನಿಮಾ ಪ್ರದರ್ಶನದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ
Recommended Video

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ ನೀರು ಬಿಡಬೇಕು ಎಂದು ಹೇಳಿಕೆ ನೀಡಿದ್ದ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದ್ದು. ಅಧಿಕೃತ ಹೇಳಿಕೆ ಮಾತ್ರ ಬಾಕಿ ಉಳಿದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ "ಕಾಲಾ ಸಿನಿಮಾ ವಿವಾದದ ಗಮನಿಸಿದ್ದೇನೆ. ವಾಣಿಜ್ಯ ಮಂಡಳಿ ಅವರು ಸಿನಿಮಾ ಬಿಡುಗಡೆ ಮಾಡಬಾರದು ಎಂದು ನಿರ್ಧರಿಸಿದ್ದಾರೆ. ಹಲವಾರು ಕನ್ನಡ ಪರ ಸಂಘಟನೆಗಳು ಕೂಡ ಚಿತ್ರ ಪ್ರದರ್ಶನ ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ".

"ಮೂಲಭೂತ ವ್ಯವಸ್ಥೆಯಲ್ಲಿ ಯಾವುದು ಹೇಗಾಗುತ್ತೆ ಎನ್ನುವುದನ್ನು ಹೇಳಲು ಬರುವುದಿಲ್ಲ. ಕನ್ನಡ ಹಾಗೂ ಕರ್ನಾಟಕದ ಜನರು ಸಿನಿಮಾ ಬಿಡುಗಡೆ ಆಗಬಾರದು ಎಂದು ನಿರ್ಧರಿಸಿದ್ದಾರೆ. ಅದರ ಬಗ್ಗೆ ಗಮನವನ್ನು ಹರಿಸುತ್ತೇನೆ" ಎಂದಿದ್ದಾರೆ. ಜೂನ್ 7 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ ಕಾಲಾ ಚಿತ್ರ ಬಿಡುಗಡೆಯಾಗುತ್ತಿದೆ.
ಮುಖ್ಯಮಂತ್ರಿಗಳಾಗಿರುವ ಕುಮಾರಸ್ವಾಮಿ ಅವರು ಸಿನಿಮಾರಂಗದಲ್ಲಿಯೂ ಸಾಕಷ್ಟು ದಿನ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಚಿತ್ರದರಂಗದಲ್ಲಿ ಏನಾಗುತ್ತೆ ಎನ್ನುವ ಮಾಹಿತಿ ಕೂಡ ಚೆನ್ನಾಗಿದೆ. ಕಾವೇರಿ ಹಾಗೂ ಸಿನಿಮಾ ಎರಡನ್ನು ಯಾವ ರೀತಿಯಲ್ಲಿ ಸರಿಯಾಗಿ ತೂಗಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.


Click it and Unblock the Notifications











