ವಿವಾದಕ್ಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರೇಮ್, ಜೂನ್ 28ಕ್ಕೆ 'ದಿ ವಿಲನ್' ಟೀಸರ್

By Pavithra

Recommended Video

ಜೂನ್ 28ಕ್ಕೆ ದಿ ವಿಲನ್ ಟೀಸರ್ ಬಿಡುಗಡೆ..!!! | Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ದಿ ವಿಲನ್' ಸಿನಿಮಾ ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗ ರಿಲಿಸ್ ಆಗುತ್ತೆ.. ಈಗ ರಿಲೀಸ್ ಆಗುತ್ತೆ.. ಅಂತ ಕಾದಿದ್ದ ಅಭಿಮಾನಿಗಳಿಗೆ ಇಂದು ನಿರ್ದೇಶಕ ಪ್ರೇಮ್ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಸುದೀಪ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಇದಾಗಿದ್ದು ವಿಶೇಷ ಅತಿಥಿಯೊಬ್ಬರು 'ದಿ ವಿಲನ್' ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಸುದೀಪ್ ಹಾಗೂ ಶಿವಣ್ಣನ ಅಭಿಮಾನಿಗಳಿಬ್ಬರನ್ನೂ ಮನಸ್ಸಿನಲ್ಲಿಟ್ಟಿಕೊಂಡು 'ದಿ ವಿಲನ್' ಟೀಸರ್ ಮಾಡಲಾಗಿದೆ.

ಟೀಸರ್ ನೋಡಲು 500 ರೂಪಾಯಿಗಳ ಟಿಕೆಟ್ ನಿಗದಿ ಮಾಡಲಾಗಿದೆ. ಹಾಗಾದರೆ 'ದಿ ವಿಲನ್' ಟೀಸರ್ ಬಿಡುಗಡೆ ಮಾಡುವವರು ಯಾರು? ಎಷ್ಟು ಸ್ಕ್ರೀನ್ ನಲ್ಲಿ ಟೀಸರ್ ರಿಲೀಸ್ ಆಗಲಿದೆ? 500 ರೂಪಾಯಿ ಏಕೆ ಕೊಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ...

ಜೂನ್ 28ಕ್ಕೆ 'ದಿ ವಿಲನ್' ಟೀಸರ್

ಜೂನ್ 28ಕ್ಕೆ 'ದಿ ವಿಲನ್' ಟೀಸರ್

ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ 'ದಿ ವಿಲನ್' ಟೀಸರ್ ಜೂನ್ 28 ರಂದು ಬಿಡುಗಡೆ ಆಗುತ್ತಿದೆ. ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನಲ್ಲಿ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಟೀಸರ್ ರಿಲೀಸ್ ಮಾಡಲಿರುವ ಸಿ ಎಂ

ಟೀಸರ್ ರಿಲೀಸ್ ಮಾಡಲಿರುವ ಸಿ ಎಂ

ರಾಜ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಸಿನಿಮಾರಂಗದ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಕುಮಾರಸ್ವಾಮಿ ಸಿ.ಎಂ ಆದ ನಂತರ ಭಾಗಿ ಆಗುತ್ತಿರುವ ಮೊದಲ ಸಿನಿಮಾ ಕಾರ್ಯಕ್ರಮವಿದು.

ಎಲ್ಲಾ ಸ್ಕ್ರೀನ್ ನಲ್ಲಿಯೂ 'ದಿ ವಿಲನ್'

ಎಲ್ಲಾ ಸ್ಕ್ರೀನ್ ನಲ್ಲಿಯೂ 'ದಿ ವಿಲನ್'

ಜಿಟಿ ಮಾಲ್ ನಲ್ಲಿರುವ ಐದು ಸ್ಕ್ರೀನ್ ನಲ್ಲಿಯೂ 'ದಿ ವಿಲನ್' ಟೀಸರ್ ಬಿಡುಗಡೆ ಮಾಡಲು ಸಿನಿಮಾತಂಡ ತಯಾರಿ ಮಾಡಿಕೊಂಡಿದೆ. ಶಿವಣ್ಣ ಹಾಗೂ ಸುದೀಪ್ ಇಬ್ಬರಿಗೂ ಪ್ರತ್ಯೇಕವಾದ ಟೀಸರ್ ಅನ್ನು ಮಾಡಲಾಗಿದೆ.

ವಿವಾದ ಬೇಡ ಎಲ್ಲವೂ ಸಿನಿಮಾಗಾಗಿ

ವಿವಾದ ಬೇಡ ಎಲ್ಲವೂ ಸಿನಿಮಾಗಾಗಿ

'ದಿ ವಿಲನ್' ಟೀಸರ್ ನೋಡಲು ಟಿಕೆಟ್ ಮಾಡಲಾಗಿದೆ. 500 ರೂಪಾಯಿ ಕೊಟ್ಟು ಟಿಕೆಟ್ ಪಡೆದು ಟೀಸರ್ ನೋಡಬೇಕು. ಟಿಕೆಟ್ ಹಣವನ್ನು ಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ನೀಡಲಾಗುತ್ತದೆ. ಇನ್ನು 'ದಿ ವಿಲನ್' ಸಾಂಗ್ ವಿವಾದ ಬಗ್ಗೆ ಸ್ಪಷ್ಟನೆ ನೀಡಿರುವ ಜೋಗಿ ಪ್ರೇಮ್ ಯಾರನ್ನೂ ನಿಂದಿಸಲು ಈ ರೀತಿ ಮಾಡಿಲ್ಲ. ಎಲ್ಲವೂ ಸಿನಿಮಾಗಾಗಿ ಸುಮ್ಮನೆ ವಿವಾದ ಮಾಡಬೇಡಿ ಎಂದಿದ್ದಾರೆ.

More from Filmibeat

English summary
Kannada actor Sudeep and Shivarajkumar starrer The Villain teaser will release on June 28th. Chief Minister HD Kumaraswamy will release the Teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X