ಖ್ಯಾತ ಗಾಯಕಿ ವಸುಂಧರ ದಾಸ್ ಗೆ ಕ್ಯಾಬ್ ಚಾಲಕನಿಂದ ನಿಂದನೆ
ಬೆಂಗಳೂರಿನ ಹೃದಯ ಭಾಗದಲ್ಲಿ ಖ್ಯಾತ ಗಾಯಕಿ ವಸುಂಧರ ದಾಸ್ ಗೆ ಕ್ಯಾಬ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 29 ರಂದು ಸಂಜೆ 4.30 ರ ಸುಮಾರಿಗೆ ಗಾಯಕಿ ವಸುಂಧರ ದಾಸ್ ತಮ್ಮ ಕಾರಿನಲ್ಲಿ ಭಾಷ್ಯಂ ಸರ್ಕಲ್ ನಿಂದ ಮಲ್ಲೇಶ್ವರಂ ಕಡೆಗೆ ಬರುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕನೊಬ್ಬ ಹಿಂಬಾಲಿಸಿಕೊಂಡು ಬಂದು ವಸುಂಧರ ದಾಸ್ ಕಾರಿಗೆ ಅಡ್ಡ ಹಾಕಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ.
ಈ ಬಗ್ಗೆ ಮಲ್ಲೇಶ್ವರಂ ಪೊಲೀಸರಿಗೆ ವಸುಂಧರ ದಾಸ್ ದೂರು ನೀಡಿದ್ದು, ಕ್ಯಾಬ್ ಚಾಲಕನ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಸದ್ಯ ಕಾರು ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅಷ್ಟಕ್ಕೂ ನಡೆದದ್ದು ಏನು ಅಂದ್ರೆ, ಭಾಷ್ಯಂ ಸರ್ಕಲ್ ಸಿಗ್ನಲ್ ಬಳಿ ಕ್ಯಾಬ್ ಚಾಲಕ ರೈಟ್ ಟರ್ನ್ ತೆಗೆದುಕೊಳ್ಳಬೇಕಿತ್ತು. ಆದ್ರೆ, ಅಷ್ಟರಲ್ಲಿ ವಸುಂಧರ ದಾಸ್ ಕಾರು ಆ ಕ್ಯಾಬ್ ಚಾಲಕನನ್ನು ಬ್ಲಾಕ್ ಮಾಡಿದೆ. ಇದರಿಂದ ಸಿಟ್ಟಿಗೆದ್ದ ಆ ಕ್ಯಾಬ್ ಚಾಲಕ ಮಲ್ಲೇಶ್ವರಂ ಮಾರ್ಗೋಸಾ ರಸ್ತೆವರೆಗೂ ಫಾಲೋ ಮಾಡಿಕೊಂಡು ಬಂದು ವಸುಂಧರ ದಾಸ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದರಿಂದ ಬೇಸರಗೊಂಡ ವಸುಂಧರ ದಾಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


Click it and Unblock the Notifications