For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ರಾಜಕುಮಾರ'ನಿಗೆ ಶತ್ರುವಾದ 'ಆ' ಕೇಬಲ್ ಚಾನಲ್.!

  By Bharath Kumar
  |

  ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ರಾಜ್ಯಾದ್ಯಂತ 75 ದಿನ ಪೂರೈಸಿ, ಶತದಿನದತ್ತ ಮುನ್ನುಗ್ಗುತ್ತಿದೆ. ಕನ್ನಡದ ಖ್ಯಾತ ಖಾಸಗಿ ವಾಹಿನಿಗೆ ಸ್ಯಾಟೆಲೈಟ್ ಹಕ್ಕು ಸೇಲ್ ಆಗಿದ್ದು, ಟಿವಿಯಲ್ಲಿ ಇನ್ನೂ ಪ್ರಸಾರವಾಗಿಲ್ಲ. ಹೀಗಿರುವಾಗ, ದೊಡ್ಡ ಯಶಸ್ಸು ಕಂಡಿರುವ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಕೂಡ ಆಧಿಕೃತವಾಗಿ ಬಿಡುಗಡೆಗೊಂಡಿಲ್ಲ.

  'ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ಭಾವುಕರಾದ ಮಾಜಿ ಪ್ರಧಾನಿ

  ಆದ್ರೆ, ಕಳೆದ ಎರಡು ದಿನಗಳಿಂದ 'ಬೊಂಬೆ ಹೇಳುತೈತೆ' HD ವಿಡಿಯೋ ಹಾಡು ಸೇರಿದಂತೆ ರಾಜಕುಮಾರ ಚಿತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿದೆ. ಅದು ಹೇಗೆ ಎಂದು ಚಿತ್ರತಂಡ ತಲೆಕಡಿಸಿಕೊಂಡಿತ್ತು. ಇದಕ್ಕೆ ಕಾರಣ ಖಾಸಗಿ ಕೇಬಲ್ ಚಾನಲ್. ಈ ಕೇಬಲ್ ಚಾನಲ್ ಪುನೀತ್ ಅವರ 'ರಾಜಕುಮಾರ' ಚಿತ್ರಕ್ಕೆ ಶತ್ರುವಾಗಿ ಪರಿಣಮಿಸಿದೆ. ಮುಂದೆ ಓದಿ......

  ಸಿನಿಮಾ ಪ್ರಸಾರ ಮಾಡಿದ್ದ ವಾಹಿನಿ

  ಸಿನಿಮಾ ಪ್ರಸಾರ ಮಾಡಿದ್ದ ವಾಹಿನಿ

  ಎರಡು ದಿನಗಳ ಹಿಂದೆ 'ರಾಜಕುಮಾರ' ಚಿತ್ರವನ್ನ NTV ಎನ್ನುವ ಕೇಬಲ್ ಚಾನಲ್ ಅನಧಿಕೃತವಾಗಿ ಪ್ರಸಾರ ಮಾಡಲಾಗಿತ್ತಂತೆ.

  'ಬೊಂಬೆ ಹೇಳುತೈತೆ' ಹಾಡಿಗೂ ಮುಂಚೆ 2 ಕೋಟಿ ದಾಟಿದ್ದ ಹಾಡು ಯಾವುದು?

  ಟಿವಿಯಿಂದ ರೆಕಾರ್ಡ್

  ಟಿವಿಯಿಂದ ರೆಕಾರ್ಡ್

  ಕೇಬಲ್ ವಾಹಿನಿಯಲ್ಲಿ 'ರಾಜಕುಮಾರ 'ಪ್ರಸಾರವಾಗಿರುವ ಹಿನ್ನಲೆಯಲ್ಲಿ ಇದನ್ನ ಕೆಲವರು ಮೊಬೈಲ್ ಗಳಲ್ಲಿ ರೆಕಾರ್ಡ್ ಮಾಡಿ, ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡಿದ್ದಾರೆ.

  'ರಾಜಕುಮಾರ' ಚಿತ್ರ ನೋಡಿ 'ಪುನೀತ'ರಾದ ಮಾಜಿ ಪ್ರಧಾನಿ ದೇವೇಗೌಡ್ರು

  ಫೇಸ್ ಬುಕ್ ನಲ್ಲಿ ರಾಜಕುಮಾರ ಶೋ

  ಫೇಸ್ ಬುಕ್ ನಲ್ಲಿ ರಾಜಕುಮಾರ ಶೋ

  ಅಷ್ಟೇ ಅಲ್ಲದೆ, 'ರಾಜಕುಮಾರ' ಚಿತ್ರದ ಕೆಲವು ದೃಶ್ಯಗಳನ್ನ ಮತ್ತು ಹಾಡುಗಳ ತುಣುಕನ್ನ ಫೇಸ್ ಬುಕ್ ಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.

  'ರಾಜಕುಮಾರ'ನ ರಾಜ್ಯಭಾರ ಕಂಡು ಪುನೀತ್ ಗೆ ಜೈಕಾರ ಹಾಕಿದ ಸಿದ್ದರಾಮಯ್ಯ.!

  ಕೇಬಲ್ ವಾಹಿನಿಗೆ ಸಿನಿಮಾ ಕಾಪಿ ಹೇಗೆ ಸಿಕ್ತು?

  ಕೇಬಲ್ ವಾಹಿನಿಗೆ ಸಿನಿಮಾ ಕಾಪಿ ಹೇಗೆ ಸಿಕ್ತು?

  ಅಂದ್ಹಾಗೆ, ಕೇಬಲ್ ವಾಹಿನಿಯೊಂದು ಯಾವುದೇ ಅಡ್ಡಿ, ಆತಂಕವಿಲ್ಲದೇ ಹೊಸ ಚಿತ್ರವನ್ನ ಪ್ರದರ್ಶನ ಮಾಡುತ್ತಿದೆ ಅಂದ್ರೆ, ಆ ವಾಹಿನಿಗೆ ಚಿತ್ರದ ಕಾಪಿ ಹೇಗೆ ಸಿಕ್ತು ಎನ್ನುವ ಅನುಮಾನ ಮೂಡುತ್ತೆ. ಹಾಗಾದ್ರೆ, 'ರಾಜಕುಮಾರ' ಚಿತ್ರದ ಪೈರಸಿ ಸಿಡಿಗಳು ಸಿದ್ದವಾಗಿರುವುದು ಮೇಲ್ನೋಟಕ್ಕೆ ನಿಜವಾಗಿದೆ.

  'ರಾಜಕುಮಾರ'ನನ್ನ ನೋಡಿ ರಿಲೀಫ್ ಆದ ಕೆ.ಎಸ್ ಈಶ್ವರಪ್ಪ

  ಪ್ರಸಾರ ಹಕ್ಕು ಉದಯ ಟಿವಿ ಖರೀದಿಸಿದೆ

  ಪ್ರಸಾರ ಹಕ್ಕು ಉದಯ ಟಿವಿ ಖರೀದಿಸಿದೆ

  ಅಂದ್ಹಾಗೆ, 'ರಾಜಕುಮಾರ' ಚಿತ್ರದ ಟಿವಿ ಪ್ರಸಾರ ಹಕ್ಕನ್ನ ಸನ್ ನೆಟ್ ವರ್ಕ್ ನ ಉದಯ ವಾಹಿನಿ ಅತಿ ಹೆಚ್ಚು ಮೊತ್ತ ನೀಡಿ ಖರೀದಿಸಿದೆ. ಹೀಗಾಗಿ, ಉದಯ ಟಿವಿ ಬಿಟ್ಟು ಬೇರೆ ಯಾವ ವಾಹಿನಿಯೂ 'ರಾಜಕುಮಾರ' ಚಿತ್ರವನ್ನ ಪ್ರಸಾರ ಮಾಡುವಂತಿಲ್ಲ.

  ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ

  ದೂರು ದಾಖಲು

  ದೂರು ದಾಖಲು

  ಈ ವಿಷ್ಯ ತಿಳಿದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು ಕೇಬಲ್ ವಾಹಿನಿಯ ವಿರುದ್ಧ ಫಿಲ್ಮ್ ಚೇಂಬರ್ ಮತ್ತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

  'ರಾಜಕುಮಾರ' ನೋಡಿ ಮಗುವಿನಂತೆ ಕಣ್ಣೀರಿಟ್ಟ ಶಿವಣ್ಣ

  'ರಾಜಕುಮಾರ'ನಿಗೆ ಸಮಸ್ಯೆ

  'ರಾಜಕುಮಾರ'ನಿಗೆ ಸಮಸ್ಯೆ

  ಇನ್ನು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ 'ರಾಜಕುಮಾರ' ಚಿತ್ರವನ್ನ ಈ ರೀತಿಯಾಗಿ ಅನಧಿಕೃತವಾಗಿ ಪ್ರಸಾರ ಮಾಡುವ ಮೂಲಕ ಚಿತ್ರದ ನಿರ್ಮಾಪಕರಿಗೆ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕಾಗಿದೆ.

  English summary
  One of the Cable Channel Aired Kannada film Raajakumara Two days ago. The Producers have filed a complaint against the channel with the Film Chamber and the Cyber police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X