ನಿಗದಿಯಾಯ್ತು 'ಚಂಬಲ್' ಚಿತ್ರ ಬರುವಿಕೆಯ ದಿನಾಂಕ
ನಟ ಸತೀಶ್ ನೀನಾಸಂ ಅಭಿನಯದ 'ಚಂಬಲ್' ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.
ಫೆಬ್ರವರಿ 15 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಮಿಗಳ ದಿನದ ಒಂದು ದಿನದ ಬಳಿಕ ಸಿನಿಮಾ ಚಿತ್ರಮಂದಿರಗಳಲ್ಲಿ ಕಾಲಿಡುತ್ತಿದೆ. ಮತ್ತೊಂದು ಕಡೆ ಯೋಗರಾಜ್ ಭಟ್ಟರ 'ಪಂಚತಂತ್ರ' ಸಿನಿಮಾ ಕೂಡ ಫೆಬ್ರವರಿ 14 ರಂದು ತೆರೆಗೆ ಬರುತ್ತಿದೆ.

'ಸವಾರಿ', 'ಪೃಥ್ವಿ' ರೀತಿಯ ಒಳ್ಳೆ ಒಳ್ಳೆಯ ಸಿನಿಮಾ ಮಾಡಿದ್ದ ನಿರ್ದೇಶಕ ಜೇಕಬ್ ವರ್ಗಿಸ್ ಇದೀಗ 'ಚಂಬಲ್' ಕಥೆ ಹೇಳಲು ಬಂದಿದ್ದಾರೆ.
ಸಿನಿಮಾ ನೈಜ ಘಟನೆಗಳ ಆಧಾರಿತ ಸಿನಿಮಾವಾಗಿದೆ. ಈಗಾಗಲೇ, ಟ್ರೇಲರ್ ಬಿಡುಗಡೆಯಾಗಿದ್ದು, ಸಸ್ಪೆನ್ಸ್ ಇಷ್ಟ ಪಡುವ ಪ್ರೇಕ್ಷಕರ ಗಮನ ಸೆಳೆದಿದೆ. ಸೋನು ಗೌಡ ಚಿತ್ರದ ನಾಯಕಿ ಆಗಿದ್ದಾರೆ. ಪವನ್ ಕುಮಾರ್ ಸಿನಿಮಾದ ಒಂದು ಪಾತ್ರದಲ್ಲಿ ನಟಿಸಿದ್ದಾರೆ.
English summary
Actor Sathish ninasam's 'Chambal' kannada movie will be releasing on February 15th.


Click it and Unblock the Notifications