'ಮಿಷನ್ ಇಂಪಾಸಿಬಲ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬರ್ತಿದೆ!

By Naveen

Recommended Video

'ಮಿಷನ್ ಇಂಪಾಸಿಬಲ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬರ್ತಿದೆ! | Filmibeat Kannada

ಕನ್ನಡದಲ್ಲಿ ಡಬ್ಬಿಂಗ್ ಪರ ವಿರೋಧ ಚರ್ಚೆಗಳು ನಡೆಯುತ್ತಲ್ಲೇ ಇದೆ. ಡಬ್ಬಿಂಗ್ ವಿರುದ್ಧ ಈ ಹಿಂದೆಯೇ ಅನೇಕ ಹೋರಾಟಗಳು ನಡೆದಿತ್ತು. ಆದರೆ ಈಗ ಮತ್ತೆ ಡಬ್ಬಿಂಗ್ ಕೂಗು ಎದ್ದಿದೆ. ಡಬ್ಬಿಂಗ್ ಕಾನೂನು ಮಾನ್ಯತೆ ಸಿಕ್ಕ ನಂತರ ಈಗ ಹಾಲಿವುಡ್ ನ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಮಿಷನ್ ಇಂಪಾಸಿಬಲ್' ಕನ್ನಡಕ್ಕೆ ಬರಲು ಸಜ್ಜಾಗಿದೆ.

'ಮಿಷನ್ ಇಂಪಾಸಿಬಲ್' ಸಿನಿಮಾದ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆ ಶುರುವಾಗಿದೆ. ಅನೇಕರು ಈ ಸಿನಿಮಾ ಕನ್ನಡಕ್ಕೆ ಬರಬೇಕು ಎಂದು ತಮ್ಮ ಟ್ವೀಟ್ ಗಳ ಮೂಲಕ ಮನವಿ ಮಾಡುತ್ತಿದ್ದಾರೆ. ಅದರ ಜೊತೆಗೆ ನಿನ್ನೆಯಷ್ಟೇ 'ಮಿಷನ್ ಇಂಪಾಸಿಬಲ್' ಸಿನಿಮಾ ಕನ್ನಡದ ಡಬ್ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಅನ್ನು ಈಗಾಗಲೇ ಯೂಟ್ಯೂಬ್ ನಲ್ಲಿ ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮುಂದೆ ಓದಿ...

ಸಾಕಷ್ಟು ಜನರ ಮನವಿ

ಸಾಕಷ್ಟು ಜನರ ಮನವಿ

ಟ್ವಿಟ್ಟರ್ ನಲ್ಲಿ ಈಗಾಗಲೇ 'ಮಿಷನ್ ಇಂಪಾಸಿಬಲ್' ಡಬ್ ಅಭಿಯಾನ ಶುರು ಆಗಿದೆ. #MissionImpossibleInKannada ಎಂಬ ಹ್ಯಾಶ್ ಟ್ಯಾಗ್ ಬಳಸಿ ಸಾಕಷ್ಟು ಜನ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಡಬ್ಬಿಂಗ್ ಗಾಗಿ ಹೋರಾಟ ಶುರುವಾಗಿದೆ.

ಟ್ವಿಟ್ಟರ್ ನಲ್ಲಿ ಟ್ರೆಂಡ್

ಟ್ವಿಟ್ಟರ್ ನಲ್ಲಿ ಟ್ರೆಂಡ್

'ಮಿಷನ್ ಇಂಪಾಸಿಬಲ್' ಕನ್ನಡಕ್ಕೆ ಡಬ್ ಆಗಬೇಕು ಎಂಬ ಅಭಿಯಾನ ಇಂದು ಸಂಜೆ 5 ಗಂಟೆಯಿಂದ ಟ್ವಿಟ್ಟರ್ ನಲ್ಲಿ ಶುರುವಾಗಿದೆ. ಜೊತೆಗೆ ಎಂಟೇ ನಿಮಿಷದಲ್ಲಿ ಟ್ವಿಟ್ಟರ್ ನಲ್ಲಿ 'ಮಿಷನ್ ಇಂಪಾಸಿಬಲ್' ಟ್ರೆಂಡ್ ಆಗಿರುವುದು ವಿಶೇಷ.

ಇದು ನಮ್ಮ ಹಕ್ಕು

ಇದು ನಮ್ಮ ಹಕ್ಕು

''ಮನೋರಂಜನೆ ಮಾತೃ ಭಾಷೆಯಲ್ಲಿ ಪಡೆಯುವುದು ನಮ್ಮ ಹಕ್ಕು. ಅಲ್ಲದೆ ಬೇರೆ ಭಾಷೆಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಂತರ್ಜಾಲ ಬಳಕೆದಾರರ ಪ್ರಮಾಣ ಹೆಚ್ಚಿದೆ. ಈ ಕಾರಣದಿಂದ 'ಮಿಷನ್ ಇಂಪಾಸಿಬಲ್' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಬೇಕು'' ಎಂದು ಟ್ವಿಟ್ಟರ್ ನಲ್ಲಿ ಡಬ್ಬಿಂಗ್ ಪರ ಇರುವವರ ಆಗ್ರಹವಾಗಿದೆ.

'ಮಿಷನ್ ಇಂಪಾಸಿಬಲ್' ಚಿತ್ರದ ಬಗ್ಗೆ

'ಮಿಷನ್ ಇಂಪಾಸಿಬಲ್' ಚಿತ್ರದ ಬಗ್ಗೆ

'ಮಿಷನ್ ಇಂಪಾಸಿಬಲ್' ಹಾಲಿವುಡ್ ನಲ್ಲಿ ಬಂದಿರುವ ಸೂಪರ್ ಹಿಟ್ ಚಿತ್ರ. ಪಕ್ಕಾ ಆಕ್ಷನ್ ಸಿನಿಮಾವಾಗಿರುವ ಈ ಸಿನಿಮಾದ ಮೊದಲ ಸರಣಿ 1996ರಲ್ಲಿ ತೆರೆಗೆ ಬಂದಿತ್ತು. ಈವರೆಗೂ ಐದು ಸರಣಿಗಳು ರಿಲೀಸ್ ಆಗಿದ್ದು, ಆರನೆಯ ಸರಣಿ ಇದೇ ವರ್ಷ ಬಿಡುಗಡೆಯಾಗಲಿದೆ.

More from Filmibeat

English summary
Some people have started campaign in twitter to dub 'Mission Impossible' hollywood movie to kannada.'Mission Impossible' kannada dubbed trailer released youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X