For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್‌ ಆಫೀಸ್‌ಗೆ ಹಣ ತರ್ತಾರಾ ಧ್ರುವ ಸರ್ಜಾ, ಪುನೀತ್, ದರ್ಶನ್?

  |

  ಕಳೆದ ಒಂದು ವರ್ಷದಿಂದ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ಎಂಬ ಪದವೇ ಮರೆತು ಹೋಗಿದೆ. ಏಕಂದ್ರೆ ಯಾವ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗಿಲ್ಲ. ಈಗ ಸ್ಟಾರ್ ನಟರ ಚಿತ್ರಗಳು ಮತ್ತೆ ತೆರೆಗೆ ಬರಲು ಸಜ್ಜಾಗುತ್ತಿದೆ. ಕೋಟ್ಯಾಂತರ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಹಾದಿಯಲ್ಲಿದೆ.

  ಈ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದ್ರೆ ಬಾಕ್ಸ್ ಆಫೀಸ್‌ಗೆ ಜೀವ ಬರುತ್ತದೆ. ದಿನದ ಲೆಕ್ಕಾಚಾರ, ಒಂದು ಶೋ ಲೆಕ್ಕಾಚಾರ, ಒಂದು ವಾರದ ಲೆಕ್ಕಾಚಾರ ಹೀಗೆ ಬಾಕ್ಸ್‌ ಆಫೀಸ್‌ ಸದ್ದು ಮಾಡುತ್ತದೆ. ಧ್ರುವ ಸರ್ಜಾ, ಪುನೀತ್ ರಾಜ್ ಕುಮಾರ್, ದರ್ಶನ್ ಸೇರಿದಂತೆ ಇತರೆ ನಟರು ಬಾಕ್ಸ್ ಆಫೀಸ್‌ಗೆ ಹಣ ತಂದು ಕೊಡ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮುಂದೆ ಓದಿ....

  ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?

  ಧ್ರುವ ಸರ್ಜಾ ಪೊಗರು

  ಧ್ರುವ ಸರ್ಜಾ ಪೊಗರು

  ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ದೊಡ್ಡ ಬಜೆಟ್‌ನಲ್ಲಿ ತಯಾರಾಗಿದೆ. ಸುಮಾರು ಎರಡು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಕೊರೊನಾಗೂ ಮುಂಚೆ ಈ ಚಿತ್ರ ತೆರೆಕಂಡಿದ್ದರೆ ಕಲೆಕ್ಷನ್ ದಾಖಲೆ ಬರೆಯುತ್ತಿತ್ತು ಎಂಬ ನಿರೀಕ್ಷೆ ಇತ್ತು. ಈಗ ಪರಿಸ್ಥಿತಿ, ಸಂದರ್ಭ ಮೊದಲಿನಂತಿಲ್ಲ. ಆದರೂ, ಚಿತ್ರದ ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಹಾಗಾಗಿ, ಪೊಗರು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯಲಿದೆ. ಪೊಗರು ನೋಡೋಕೆ ಜನ ಥಿಯೇಟರ್‌ಗೆ ಬಂದೇ ಬರ್ತಾರೆ ಎಂಬ ನಂಬಿಕೆ ಇದೆ.

  ಪುನೀತ್ ಯುವರತ್ನ

  ಪುನೀತ್ ಯುವರತ್ನ

  ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾಗೂ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಶಕ್ತಿ ಇದೆ. ಸಹಜವಾಗಿ ಅಪ್ಪು ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಮಾಡುತ್ತೆ. ಯುವರತ್ನ ಚಿತ್ರದ ಮೇಲೂ ನಿರೀಕ್ಷೆಗಳು ಹೆಚ್ಚಿದೆ. ಏಪ್ರಿಲ್ 1 ರಂದು ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ.

  ಡಿ-ಬಾಸ್ ರಾಬರ್ಟ್

  ಡಿ-ಬಾಸ್ ರಾಬರ್ಟ್

  ಕನ್ನಡದ ಬಾಕ್ಸ್ ಆಫೀಸ್ ಪಾಲಿಗೆ ರಾಬರ್ಟ್ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕೊರೊನಾ ಅಂತಹ ಸಮಯದಲ್ಲಿ ಜನರನ್ನು ಚಿತ್ರಮಂದಿರಕ್ಕೆ ಆಕರ್ಷಣೆ ಮಾಡುವ ಸಾಮರ್ಥ್ಯ ರಾಬರ್ಟ್ ಚಿತ್ರಕ್ಕಿದೆ. ಇದನ್ನು ಸ್ಯಾಂಡಲ್‌ವುಡ್‌ನ ಹಲವು ಮಂದಿ ಹೇಳಿದ್ದರು. ರಾಬರ್ಟ್ ಎಂಟ್ರಿ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಹಳೆ ಜೋಶ್ ತರಲಿದೆ ಎನ್ನುವ ಲೆಕ್ಕಾಚಾರ ಇದೆ.

  ಕಛೇರಿ ಕೆಲಸದವನ ಮದುವೆಗೆ ಕುಮುಟಾಗೆ ಬಂದ ಅಪ್ಪು | Puneeth Rajkumar | Filmibeat Kannada
  ಕೋಟಿಗೊಬ್ಬ, ಭಜರಂಗಿ, ಸಲಗ

  ಕೋಟಿಗೊಬ್ಬ, ಭಜರಂಗಿ, ಸಲಗ

  ಇವಷ್ಟೇ ಅಲ್ಲದೇ ಸುದೀಪ್ ನಟನೆಯ ಕೋಟಿಗೊಬ್ಬ 3, ದುನಿಯಾ ವಿಜಯ್ ನಟನೆ ಸಲಗ, ಶಿವಣ್ಣ ಅಭಿನಯದ ಭಜರಂಗಿ 2 ಹಾಗೂ ಈ ವರ್ಷದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಿತ್ರಗಳ ಮೇಲೂ ಬಾಕ್ಸ್ ಅಫೀಸ್ ಪಂಡಿತರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  English summary
  Can Darshan, Puneeth rajkumar, dhruva sarja, sudeep, yash bring money back to sandalwood box office?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X