twitter
    For Quick Alerts
    ALLOW NOTIFICATIONS  
    For Daily Alerts

    'ನಾನು ಎಷ್ಟು ಬಾರಿ ಬೇಕಾದರೂ 'ತಿಥಿ' ನೋಡಲು ಸಿದ್ಧ' ಎಂದವರಾರು?

    By Suneetha
    |

    ಅಂತರಾಷ್ಟ್ರೀಯ ಚಲನಚಿತ್ರೊತ್ಸವಗಳಲ್ಲಿ ಸೇರಿದಂತೆ ಹಲವಾರು ಸಿನಿಮೋತ್ಸವಗಳಲ್ಲಿ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನಿಮಾ ಇಂದು (ಮೇ 6) ಇಡೀ ಕರ್ನಾಟಕದಾದ್ಯಂತ ಬಿಡುಗಡೆ ಆಗಿದೆ.

    ಇದೀಗ ರಾಷ್ಟ್ರಪ್ರಶಸ್ತಿ ಬಾಚಿಕೊಂಡ ಈ ಸಿನಿಮಾವನ್ನು ವೀಕ್ಷಿಸಿರುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಬಾಯ್ತುಂಬ ಹೊಗಳಿದ್ದಾರೆ. ಈ ಸಿನಿಮಾವನ್ನು ನಾನು ಮೂರು ಬಾರಿ ವೀಕ್ಷಿಸಿದ್ದೇನೆ. ಇನ್ನೂ ನೋಡಬೇಕೆನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.[63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು]

    Can Watch 'Thithi' Any Number Of Times: Anurag Kashyap

    ರಾಮ್ ರೆಡ್ಡಿ ನಿರ್ದೇಶನ ಮಾಡಿರುವ 'ತಿಥಿ' ಚಿತ್ರದಲ್ಲಿ ತಮ್ಮೇ ಗೌಡ ಎಸ್, ಚನ್ನೇ ಗೌಡ ಮತ್ತು ಅಭಿಷೇಕ್ ಎಂಬ ಯುವಕ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ 68ನೇ ಲೊಕಾರ್ನೋ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆ ಗಳಿಸಿತ್ತು.[ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಿಥಿ' ಸಿನಿಮಾ ಈ ವಾರ ತೆರೆಗೆ]

    Can Watch 'Thithi' Any Number Of Times: Anurag Kashyap

    ಬೆಂಗಳೂರು, ಮೈಸೂರು ಮತ್ತು ಕರ್ನಾಟಕದ ಇನ್ನಿತರೇ ಸ್ಥಳಗಳಲ್ಲಿ ನಾನು ಇತ್ತೀಚೆಗೆ ನೋಡಿದ ಅತ್ಯಂತ ಕಾಮಿಡಿಭರಿತ ಸಿನಿಮಾ 'ತಿಥಿ'. ನಾನು ಈ ಸಿನಿಮಾವನ್ನು ಎಷ್ಟು ಬಾರಿ ಬೇಕಾದರೂ ನೋಡುತ್ತೇನೆ. ಎಲ್ಲರೂ ಸಿನಿಮಾ ನೋಡಿ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಅವರು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಟ್ವೀಟ್ ಮಾಡಿದ್ದಾರೆ.

    'ತಿಥಿ' ಸಿನಿಮಾದಲ್ಲಿ ಸೆಂಚುರಿ ಗೌಡನ ಸಾವಿಗೆ ಮನೆಯವರು ಸೇರಿದಂತೆ ಊರಿನವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕೊಂಚ ಹಾಸ್ಯ ಮಿಶ್ರಿತವಾಗಿ ಹೆಣೆದು ಸಿನಿಮಾ ಮಾಡಲಾಗಿದೆ.

    English summary
    Hindi film-maker Anurag Kashyap has applauded National Award-winning Kannada-language film Thithi, which released in India on Friday (May 6th). He says that he has watched the film three times and can still see it "any number of times". Directed by Raam Reddy.
    Friday, May 6, 2016, 18:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X