»   » ಕನ್ನಡದಲ್ಲಿ ಸುದೀಪ್ ಸಂಭಾವನೆ ಎಷ್ಟಿರಬಹುದು?

ಕನ್ನಡದಲ್ಲಿ ಸುದೀಪ್ ಸಂಭಾವನೆ ಎಷ್ಟಿರಬಹುದು?

By: ಉದಯರವಿ
Subscribe to Filmibeat Kannada

ಈ ಪ್ರಶ್ನೆಗೆ ಉತ್ತರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಕೊಟ್ಟಿದ್ದಾರೆ. ಇದೀಗ ಅವರು ಕನ್ನಡ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು? ಒಬ್ಬ ನಾಯಕ ನಟನ ರೇಟ್ ನಿರ್ಧಾರವಾಗುವುದು ಅವರ ಚಿತ್ರಗಳ ಗೆಲುವು, ಮಾರ್ಕೆಟ್ ಮೇಲೆ. ಇದನ್ನು ಸ್ವತಃ ನಾಯಕನೊಬ್ಬ ನನಗಿಷ್ಟೇ ಕೊಡಿ ಎಂದು ನಿರ್ಧರಿಸಲು ಸಾಧ್ಯವಿಲ್ಲ.

ಆತನಿಗೆ ಅಷ್ಟು ಕೊಟ್ಟರೆ ನಮಗೆ ವರ್ಕ್ ಔಟ್ ಆಗುತ್ತದಾ ಎಂಬ ಲೆಕ್ಕಾಚಾರದಲ್ಲಿ ಸಂಭಾವನೆ ಎಂಬುದು ಫಿಕ್ಸ್ ಆಗುತ್ತದೆ. ಈಗ 'ಮಾಣಿಕ್ಯ' ಚಿತ್ರ ಕಮರ್ಷಿಯಲ್ ಆಗಿ ಗೆದ್ದಿದೆ. ಸುದೀಪ್ ಅವರ ಸಂಭಾವನೆ ಈಗ ರು.5.30 ಕೋಟಿ. [ಮಾಣಿಕ್ಯ ಚಿತ್ರವಿಮರ್ಶೆ]

ತಮ್ಮ ಮುಂದಿನ ಚಿತ್ರಕ್ಕಾಗಿ ಅವರು ಈ ಸಂಭಾವನೆ ಪಡೆದಿದ್ದಾರೆ. ಆ ಚಿತ್ರ ಯಾವುದು ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. ಇತ್ತೀಚೆಗೆ ತಮಿಳಿನ ಇಳಯದಳಪತಿ ವಿಜಯ್ ಚಿತ್ರದಲ್ಲಿ ಖಳನಟನ ಪಾತ್ರ ಪೋಷಿಸುತ್ತಿದ್ದು ಅಲ್ಲೂ ಇಷ್ಟೇ ಮೊತ್ತದ ಸಂಭಾವನೆ ಪಡೆದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಕಿಚ್ಚನೇ ನಂಬರ್ ಒನ್?

ಅಲ್ಲಿಗೆ ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಅವರೇ ನಂಬರ್ ಒನ್ ಎಂದರೆ, ಈ ಮಾತನ್ನು ಸ್ವತಃ ಸುದೀಪ್ ಒಪ್ಪಲ್ಲ. ತನ್ನ ಪ್ರಾಣಮಿತ್ರ ಚಾಲೆಂಜಿಂಗ್ ಸ್ಟಾರ್ ಅವರೇ ನಂಬರ್ ಒನ್ ಎಂದಿದ್ದಾರೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ.

ಹುಚ್ಚ ಹಿಟ್ ಆದ ಮೇಲೆ ಪಡೆದದ್ದೆಷ್ಟು ಗೊತ್ತಾ?

ಸುದೀಪ್ ಅವರು 'ಹುಚ್ಚ' (2001) ಚಿತ್ರ ಹಿಟ್ ಆದ ಮೇಲೆ ಪಡೆಯುತ್ತಿದ್ದ ಸಂಭಾವನೆ ರು.10 ಲಕ್ಷ ಎಂಬ ಸುದ್ದಿ ಇತ್ತು. ಈಗಿನ ಅವರ ಸಂಭಾವನೆಗೆ ಹೋಲಿಸಿದರೆ ಸುದೀಪ್ ಎಲ್ಲಿಂದ ಎಲ್ಲಿಗೆ ನೆಗೆತ ಅನ್ನಿಸುವುದಿಲ್ಲವೇ? ಈ ಗೆಲುವಿನ ಹಿಂದೆ ಸುದೀಪ್ ಅವರು ಸಾಕಷ್ಟು ಬಾರಿ ಕೈಸುಟ್ಟುಕೊಂಡ ಉದಾಹರಣೆಗಳೂ ಇವೆ.

ಮೊದಲ ಸಂಭಾವನೆ ಕೇಳಿದರೆ ಅಚ್ಚರಿ ಪಡ್ತೀರಾ

ಸುದೀಪ್ ಅವರು ಆರಂಭ ದಿನಗಳಲ್ಲಿ ಸಿನಿಮಾದಲ್ಲಿ ಸಕ್ಸಸ್ ಆಗದೆ ಕಿರುತೆರೆಗೆ ಅಡಿಯಿಟ್ಟಿದ್ದರು. ಅಲ್ಲಿ ಅವರ ಸಂಭಾವನೆ ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಕೇವಲ ರು.5 ಸಾವಿರ.

ನಟನಾಗಬೇಕು ಎಂದು ಕನಸು ಕಂಡವರಲ್ಲ

ಚಿತ್ರರಂಗಕ್ಕೆ ಅಡಿಯಿಡಬೇಕು, ನಟನಾಗಬೇಕು ಎಂದು ಸುದೀಪ್ ಕನಸು ಕಂಡವರಲ್ಲ. ಆದರೆ ನಿರ್ದೇಶಕನಾಗಬೇಕು ಎಂದು ಅವರು ಬಯಸಿದ್ದರು. ಆದರೆ ಆರಂಭದಲ್ಲಿ ಅವರು ನಟನಾಗಿ ಅಡಿಯಿಟ್ಟು ಹಂತಹಂತವಾಗಿ ಮೇಲೇರುತ್ತಾ ನಿರ್ದೇಶಕ ಕಮ್ ನಟನಾಗಿ ಹೊರಹೊಮ್ಮಿದ್ದಾರೆ.

ಮಾಣಿಕ್ಯ ಚಿತ್ರದ ಹವಾ ಇನ್ನೂ ಮುಂದುವರೆದಿದೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆನಂದ್ ಅಪ್ಪುಗೊಳ್ ಕಾಂಬಿನೇಷನ್ ನಲ್ಲಿ ಬಂದ ಸಂಗೊಳ್ಳಿ ರಾಯಣ್ಣ ಯಶಸ್ವಿ ಚಿತ್ರದ ನಂತರ ಸುದೀಪ್ ಅವರ ಮಾಣಿಕ್ಯ ಚಿತ್ರ 18 ಕೋಟಿ ರು ಬಂಡವಾಳ ಹೂಡಿಕೆಯೊಂದಿಗೆ ಅತ್ಯಂತ ಶ್ರೀಮಂತವಾದ ಸೆಟ್ ಗಳಿಂದ ಪ್ರೇಕ್ಷಕರನ್ನು ರಂಜಿಸಿದೆ.

English summary
Can you guess Kannada actor Kichcha Sudeep's Remuneration? How much the actor is now getting? The actor himself revealed his remuneration of Kannada movie is Rs.5.30 crores. He became the highest paid Kannada actor.
Please Wait while comments are loading...